ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ತಿಂಗಳು ವಿವಿಧೆಡೆ ಕಳ್ಳತನಕ್ಕೊಳಗಾಗಿದ್ದ ಸುಮಾರು ₹21 ಲಕ್ಷ ಮೌಲ್ಯದ 107 ಮೊಬೈಲ್‌ಗಳನ್ನು ಪತ್ತೆ ವಾರಸುದಾರರಿಗೆ ಉತ್ತರ ವಿಭಾಗದ ಪೊಲೀಸರು ಮರಳಿಸಿದ್ದಾರೆ.

ಉತ್ತರ ವಿಭಾಗದ ವ್ಯಾಪ್ತಿಯ 13 ಠಾಣೆಗಳ ಪೊಲೀಸರು ಈ ಕಾರ್ಯಾರಣೆ ನಡೆಸಿದ್ದು, ಇಸಿಐಆರ್ ಪೋರ್ಟಲ್‌ ನೆರವಿನಿಂದ ಕಳ್ಳರನ್ನು ಪತ್ತೆ ಹಚ್ಚಿ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದರು. ಬಳಿಕ ವಾರಸುದಾರರಿಗೆ ಡಿಸಿಪಿ ಬಿ.ಎಸ್‌.ನೇಮಗೌಡ ಅವರು ಹಸ್ತಾಂತರಿಸಿದ್ದಾರೆ.

ಆರ್‌.ಟಿ.ನಗರ-21, ಜಾಲಹಳ್ಳಿ-14, ಜೆ.ಸಿ.ನಗರ-12, ಮಹಾಲಕ್ಷ್ಮೀ ಲೇಔಟ್‌ ಮತ್ತು ಸಂಜಯನಗರ-8, ರಾಜಾಜಿನಗರ-7, ಸುಬ್ರಹ್ಮಣ್ಯನಗರ, ನಂದಿನಿಲೇಔಟ್‌, ಮಲ್ಲೇಶ್ವರ, ಹೆಬ್ಬಾಳ ತಲಾ 6, ಯಶವಂತಪುರ-5 ಹಾಗೂ ಆರ್‌ಎಂಸಿ ಯಾರ್ಡ್‌ ಮತ್ತು ಶ್ರೀರಾಮಪುರ ತಲಾ-4 ಸೇರಿದಂತೆ ಒಟ್ಟು 107 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.