ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ 108 ರಾಮನಾಮ ತಾರಕ ಹೋಮ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ವಿದ್ಯಾಗಿರಿ ಗೌರಿಶಂಕರ ಕಲ್ಯಾಣಮಂಟಪದ ಆವರಣದಲ್ಲಿ ಜರುಗಿದ ಸಾಮೂಹಿಕ ಹೋಮ ಹವನ ಕಾರ್ಯಕ್ರಮವನ್ನು ಮಾಜಿ ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಿ ಮಾತನಾಡಿ, 550 ವರ್ಷಗಳ ನಂತರ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಸಂತಸವಾಗಿದೆ. ಕಾಶಿ ಮತ್ತು ಮಥುರಾ ದೇವಸ್ಥಾನಗಳು ಸಹ ವಿಮೋಚನೆಗೊಂಡು ಬೇಗನೆ ದೇವಸ್ಥಾನ ನಿರ್ಮಾಣವಾಗಲಿ ಎಂದು ಆಶಯ ವ್ಯಕ್ತಪಡಿಸಿ ಜನವರಿ 22ರಂದು ಮಂದಿರ ಉದ್ಘಾಟನೆ ದಿನದಂದು ಬಾಗಲಕೋಟೆ ದೇವಸ್ಥಾನಗಳಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ. ಅಂದು ನಗರದ ಮನೆ ಮನೆಗಳಲ್ಲಿ ದೀಪಹಚ್ಚಿ ರಾಮನಾಮ ಪಠಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಆಚಾರ್ಯರಾಗಿ ಆಗಮಿಸಿದ್ದ ಬಿಂದುಮಾದವಚಾರ್ಯ ನಾಗಸಂಪಗಿ ಮಾತನಾಡಿ, ರಾಮಯಾಣದಲ್ಲಿ 24 ಶ್ಲೋಕಗಳಿವೆ. ಹೀಗಾಗಿ 2024ರಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವದು ರಾಮನ ಇಚ್ಚೆಯಾಗಿದೆ ಪರಿಸರದಲ್ಲಿ ಎಂದೂ ಕಾಣದ ಜಟಾಯು ಪಕ್ಷಿ ಇಂದು ಅಯೋಧ್ಯಯಲ್ಲಿ ಕಂಡು ಬಂದಿರುವದು ರಾಮರಾಜ್ಯದ ನಿರ್ಮಾಣ ಪ್ರಾರಂಭವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ನಗರಧ್ಯಕ್ಷ ಸದಾನಂದ ನಾರಾ, ಪ್ರಧಾನ ಕಾರ್ಯದರ್ಶಿ ಉಮೇಶ ಹಂಚನಾಳ ಬಸವರಾಜ ಹುನಗುಂದ, ಬಸವರಾಜ ಅವರಾದಿ, ಅಶೋಕ ಲಿಂಬಾವಳಿ, ರಾಜು ರೇವಣಕರ, ಡಾ.ದಡ್ಡೆನ್ನವರ್, ಸಿ.ಎಸ್. ಪಾಟೀಲ, ಸಂಗಣ್ಣ ಕುಪ್ಪಸ್ತ, ವಿಜಯ ಚಟ್ಟರಕಿ, ಪರಮೇಶ್ವರ ಮಧುರ, ಸಂಗಮೇಶ ಗುಡ್ಡದ, ರಾಜು ಶೀಂತ್ರೆ, ಶ್ರೀಧರ ನಾಗರಬೆಟ್ಟ, ಜ್ಯೋತಿ ಭಜಂತ್ರಿ, ಸುರೇಶ ಮಜ್ಜಗಿ, ಬಸವರಾಜ ನಾಶಿ ಸೇರಿದಂತೆ ಇತರರು ಇದ್ದರು.