ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ರಥಸಪ್ತಮಿ ಅಂಗವಾಗಿ ಪಟ್ಟಣದ ಕನಕದಾಸ ಕ್ರೀಡಾಂಗಣದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ 108 ಸೂರ್ಯ ನಮಸ್ಕಾರ ಹಾಗೂ ಅಗ್ನಿಹೋತ್ರ ಕಾರ್ಯಕ್ರಮ ನಡೆಯಿತು.ಬೆಳಗ್ಗೆ 5.30ರಿಂದ 7.30ರವರೆಗೆ ಯೋಗ ಗುರು ಬಾಟನಿ ವೇಣುಗೋಪಾಲ ಅವರ ನೇತೃತ್ವದಲ್ಲಿ ಯೋಗಭ್ಯಾಸ, ರೂಪ, ಪವಿತ್ರ, ವೆಂಕಟೇಶ್ ಹಾಗೂ ರವಿಕುಮಾರ್ ನೇತೃತ್ವದಲ್ಲಿ ಅಗ್ನಿಹೋತ್ರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಮಹೇಶ್ ಕುಮಾರ್, ಕಾರ್ಯದರ್ಶಿ ಘನ ಶಾಮ್ ದಾಸ್, ಖಜಾಂಚಿ ವೆಂಕಟಸ್ವಾಮಿ, ಯೋಗ ಬಂಧುಗಳಾದ ರೇಖಾ, ಗೌರಮ್ಮ, ಹೇಮಾ, ಕುಮಾರಿ, ನಯನ, ಸುರೇಶ್, ಶ್ರೀನಿಧಿ, ಕಾಂತರಾಜ್, ಗುರು ಪ್ರಸಾದ್, ಕೃಷ್ಣಣ್ಣ, ರಮೇಶ್, ಲಾಯರ್ ರವೀಂದ್ರ ಸೇರಿದಂತೆ 50ಕ್ಕೂ ಹೆಚ್ಚು ಜನ ಇದ್ದರು.ಇಂದಿನಿಂದ ಹಲವು ದೇವರ ವಿಗ್ರಹ ಪ್ರತಿಷ್ಠಾಪನೆಮಂಡ್ಯ: ತಾಲೂಕಿನ ಹೊಳಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಮುನೇಶ್ವರ ಸ್ವಾಮಿ, ಶ್ರೀಪಾರ್ವತಮ್ಮ ದೇವಿ, ಶ್ರೀದೊಡ್ಡಮ್ಮತಾಯಿ, ಶ್ರೀಚಿಕ್ಕಮ್ಮ ದೇವಿ ದೇವಸ್ಥಾನ ದೇವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಗುರುವಾರದಿಂದ ಎರಡು ದಿನಗಳ ಕಾಲ ನಡೆಯಲಿದೆ. ಅಂದು ಸಂಜೆ ಗುರು ಗಣಪತಿ ಪೂಜೆ, ನವಗ್ರಹ ಪೂಜೆ, ವಾಸ್ತು ಪೂಜೆ, ಗಣಪತಿ ಹೋಮ, ನವಗ್ರಹ ಹೋಮ ದುರ್ಗಾ ಹೋಮ, ಶಾಂತಿ ಹೋಮ, ಹಾಗೂ ಮಹಾಮಂಗಳಾರತಿ ನೆರವೇರಲಿದೆ. ಶುಕ್ರವಾರ ಬೆಳಗ್ಗೆ 5 ಗಂಟೆಯಿಂದ 6 ಗಂಟೆವರೆಗೆ ಪ್ರಾಣ ಪ್ರತಿಷ್ಠೆ, ಪ್ರತಿಷ್ಠಾಪನಾ ಹೋಮ, ಅಮ್ಮನವರಿಗೆ ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ, ಅರ್ಚನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ, ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಜನಸಂಖ್ಯೆಯಲ್ಲಿ ಆಗಮಿಸಿ, ಧನ, ಧಾನ್ಯ, ಸಹಾಯ ಮಾಡುವವರು ದೇವಸ್ಥಾನಕ್ಕೆ ಅರ್ಪಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಗುಡ್ಡಪ್ಪ ಸಂತೋಷ್ ಮನವಿ ಮಾಡಿದ್ದಾರೆ.