ಎಂಸಿಸಿ ಬ್ಯಾಂಕಿನ ಸುರತ್ಕಲ್ ಶಾಖೆಯಲ್ಲಿ 10ನೇ ಎಟಿಎಂ ಉದ್ಘಾಟನೆ

| Published : Aug 13 2025, 02:31 AM IST

ಸಾರಾಂಶ

ಪ್ರತಿಷ್ಠಿತ ಎಂ.ಸಿ.ಸಿ. ಬ್ಯಾಂಕ್ ವತಿಯಿಂದ ಬ್ಯಾಂಕಿನ ಸುರತ್ಕಲ್ ಶಾಖೆಯಲ್ಲಿ 10ನೇ ಎಟಿಎಂ ಉದ್ಘಾಟನೆ ನಡೆಯಿತು.

ಮಂಗಳೂರು: ಎಂ.ಸಿ.ಸಿ. ಬ್ಯಾಂಕ್ ವತಿಯಿಂದ ಸುರತ್ಕಲ್ ಶಾಖೆಯಲ್ಲಿ 10ನೇ ಎಟಿಎಂ ಉದ್ಘಾಟನೆ ನಡೆಯಿತು.ಸುರತ್ಕಲ್‌ನ ಸೇಕ್ರೆಡ್ ಹಾರ್ಟ್ ಚರ್ಚ್‌ ಧರ್ಮಗುರು ವಂ.ಆಸ್ಟಿನ್ ಪೀಟರ್ ಪೆರಿಸ್ ಆಶೀರ್ವಾದದೊಂದಿಗೆ ಪ್ರಾರಂಭವಾಯಿತು. ವಾಹನ ಮಾರಾಟ ಸಲಹೆಗಾರ ಮೊಹಮ್ಮದ್ ಹನೀಫ್ ಎಟಿಎಂನ್ನು ಅಧಿಕೃತವಾಗಿ ಉದ್ಘಾಟಿಸಿದರು. ಮುಕ್ಕಾದ ಹೋಲಿ ಸ್ಪಿರಿಟ್ ಚರ್ಚ್‌ನ ಧರ್ಮಗುರು ವಂ. ಸ್ಟ್ಯಾನಿ ಪಿಂಟೊ ಇದ್ದರು.

ಎಟಿಎಂನಿಂದ ಮೊದಲ ನಗದು ಹಿಂಪಡೆಯುವಿಕೆಯನ್ನು ಶ್ರೀ ದುರ್ಗಾ ಫೈನಾನ್ಶಿಯಲ್ ಕಾರ್ಪೊರೇಷನ್‌ನ ಮಾಲೀಕ ಮೆಬೈಲ್ ಸದಾಶಿವ ಶೆಟ್ಟಿ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ವಹಿಸಿದ್ದರು, ಎಂಸಿಸಿ ಬ್ಯಾಂಕ್ ಪ್ರಸ್ತುತ ಹಣಕಾಸು ವರ್ಷದ ಅಂತ್ಯದ ವೇಳೆಗೆ 25 ಶಾಖೆಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ. ಜತೆಗೆ ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಅಳವಡಿಸಿಕೊಳ್ಳಲು ಬ್ಯಾಂಕ್ ಸಿದ್ಧವಾಗಿದೆ ಎಂದು ಅವರು ಘೋಷಿಸಿದರು.

ವಂ. ಆಸ್ಟಿನ್ ಪೀಟರ್ ಪೆರಿಸ್ ಮಾತನಾಡಿದರು. ಬ್ಯಾಂಕಿನ ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಸ್ವಾಗತಿಸಿದರು. ಎಂಸಿಸಿ ಬ್ಯಾಂಕಿನ ಸಿಬ್ಬಂದಿ ಸದಸ್ಯ ಅಲ್ವಿನ್ ಕ್ಸೇವಿಯರ್ ಡಿಸೋಜ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.

ಹಿರಿಯ ವ್ಯವಸ್ಥಾಪಕ ಡೆರಿಲ್ ಲಸಾದೊ ನಿರೂಪಿಸಿ ವಂದಿಸಿದರು. ಶಾಖೆಯ ನಿರ್ದೇಶಕ ಅನಿಲ್ ಪತ್ರಾವೊ, ನಿರ್ದೇಶಕರಾದ ಹೆರಾಲ್ಡ್ ಮೋಂತೇರೊ, ಐರೀನ್ ರೆಬೆಲ್ಲೊ, ಶಾಖಾ ವ್ಯವಸ್ಥಾಪಕಿ ಸುನಿತಾ ಡಿಸೋಜ, ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಮಿನೇಜಸ್ ಇದ್ದರು.