ಸಾರಾಂಶ
ಹುಬ್ಬಳ್ಳಿ: ಸ್ವರ್ಣ ಎಂದರೆ ಸಂಸ್ಕೃತಿ. ಚಿನ್ನ ಭಾರತೀಯರಿಗೆ ಕೇವಲ ಆಭರಣವಲ್ಲ; ಇದು ನಮ್ಮಗಳ ನಡುವಿನ ಅನನ್ಯ ಬಾಂಧವ್ಯ. ಬದುಕಿನ ಸಂಸ್ಕೃತಿಯ ಒಂದು ಭಾಗ. ಪರಂಪರೆ ಹಾಗೂ ಬದುಕಿನ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ವಿಶಿಷ್ಟ ವಸ್ತು. ಚಿನ್ನಕ್ಕಿರುವ ಈ ಆಯಾಮವನ್ನು ಗುರುತಿಸಿ, ಗ್ರಾಹಕರ ಜೊತೆ ಭಾವನಾತ್ಮಕ ನಂಟು ಇಟ್ಟುಕೊಳ್ಳುವ ಸಂಸ್ಥೆಗಳು ವಿಭಿನ್ನವಾಗಿ ಜನಮಾನಸದಲ್ಲಿ ಉಳಿಯುತ್ತವೆ.
‘ಸ್ವರ್ಣ ಜ್ಯುವೆಲ್ಲರ್ಸ್’ಇಂತಹ ಅಪರೂಪದ ಚಿನ್ನಾಭರಣ ವ್ಯಾಪಾರ ಸಂಸ್ಥೆಗಳಲ್ಲಿ ಪ್ರಮುಖವಾದುದು. ಆರು ದಶಕಗಳಿಂದ (1964) ಆಭರಣ ಕ್ಷೇತ್ರದ ಮುಂಚೂಣಿಯಲ್ಲಿರುವ ಗುಜ್ಜಾಡಿ ಸ್ವರ್ಣ, ಮೊದಲ ದಿನದಿಂದಲೂ ಕರ್ನಾಟಕದ ಕುಟುಂಬಗಳೊಂದಿಗೆ ವ್ಯಾಪಾರಕ್ಕೆ ಹೊರತಾದ ಭಾವನಾತ್ಮಕ ಸಂಬಂಧ ಹೊಂದಿದೆ. ಸ್ವರ್ಣದ ಜೊತೆಗೆ ವ್ಯಾಪಾರವೆಂದರೆ ನಿರಂತರ ಬಾಂಧವ್ಯ ಎಂಬ ಧ್ಯೇಯ ವಾಕ್ಯ ಈ ಸಂಸ್ಥೆಯದ್ದು.ಮೊದಲ ದಿನದಿಂದ ಇದನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿದೆ. ಉಡುಪಿ ಮೂಲದ ಸ್ವರ್ಣ ಜ್ಯುವೆಲ್ಲರ್ಸ್ ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿರುವ ಹುಬ್ಬಳ್ಳಿಯಲ್ಲಿ 2001ರಲ್ಲಿ ತನ್ನ ಶಾಖೆ ಆರಂಭಿಸಿದ ಸಂಸ್ಥೆ. ಇದೇ ಕಾರಣಕ್ಕಾಗಿ ಉತ್ತರ ಕರ್ನಾಟಕದಲ್ಲೂ ಜನಪ್ರಿಯವಾಗಿದೆ. ಈಗ ಹುಬ್ಬಳ್ಳಿಯಲ್ಲಿ ತನ್ನ ಎರಡನೇ ಶಾಖೆಯನ್ನು ಸ್ವರ್ಣ ಜ್ಯುವೆಲ್ಲರ್ಸ್ ಆರಂಭಿಸುತ್ತಿದ್ದು, ಟೆಂಡರ್ ಶ್ಯೂರ್ ರಸ್ತೆಯ ಅಸ್ಟ್ರಾ ಟವರ್ಸ್‌ನಲ್ಲಿ ಜ. 25ರಂದು ನೂತನ ಮಳಿಗೆ ಆರಂಭವಾಗಲಿದೆ. ಶಿರೂರು ಪಾರ್ಕ್‌ನ ಶೋರೂಂನ ಉದ್ಘಾಟನೆ ಬೆಳಗ್ಗೆ 11ಕ್ಕೆ ನಡೆಯಲಿದ್ದು ಇದನ್ನು ವಿಆರ್‌ಎಲ್ ಸಂಸ್ಥೆಗಳ ಅಧ್ಯಕ್ಷರಾ ಡಾ. ವಿಜಯ ಸಂಕೇಶ್ವರ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಜೇಥಿಯಾ ಫೌಂಡೇಶನ್‌ನ ಶ್ರೀ ಜಿತೇಂದ್ರ ಮಜೇಥಿಯಾ, ವಿಭವ ಕೆಮಿಕಲ್ ಸಿಇಒ ಶ್ರೀ ನಂದಕುಮಾರ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷರಾದ ಸುಗ್ಗಿ ಸುಧಾಕರ ಶೆಟ್ಟಿ, ದಕ್ಷಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತರಾಜ ಐತಾಳ, ಉದ್ಯಮಿಗಳಾದ ಆರ್.ಆರ್. ಕಾಮತ್, ಎಂ.ಸಿ. ಹಿರೇಮಠ, ಜಯರಾಮ ಶೆಟ್ಟಿ ಭಾಗವಹಿಸಲಿದ್ದಾರೆ. ನೂತನ ಶೋ ರೂಂ ಅತ್ಯಾಕರ್ಷಕ ಒಳಾಂಗಣವನ್ನು ಹೊಂದಿದೆ ಎನ್ನುತ್ತಾರೆ ಅವಿನಾಶ್.
ಹೊಸ ತಲೆಮಾರು ಬಯಸುವ ವಿನ್ಯಾಸಗಳು ಒಡಮೂಡಲಿವೆ. ನವ ತಲೆಮಾರಿನ ಆಶಯಗಳೊಂದಿಗೆ ಕುಟುಂಬಗಳ ನಿರೀಕ್ಷೆಯೂ ಕಾರ್ಪೋರೇಟ್ ಆಗುತ್ತಿರುವುದರಿಂದ ಹೊಸ ಮಳಿಗೆಯು ಸಂಪೂರ್ಣ ವಿಭಿನ್ನವಾದ ಚಿನ್ನಾಭರಣ ಕೇಂದ್ರವಾಗಲಿದೆ.ಉದ್ಘಾಟನಾ ಕೊಡುಗೆಯಾಗಿ ಜ.31ರ ವರೆಗೆ ಆಭರಣಗಳ ಮಜೂರಿಯಲ್ಲಿ 10% ರಿಯಾಯಿತಿ, ವಜ್ರಾಭರಣಗಳ ಮೌಲ್ಯದಲ್ಲಿ 10% ರಿಯಾಯಿತಿ ಮತು ಹರಳುಗಳಿಗೆ 10% ರಿಯಾಯಿತಿಯನ್ನು ಸಂಸ್ಥೆ ಘೋಘಿಸಿದೆ. ಹೆಚ್ಚಿನ ಮಾಹಿತಿಗಾಗಿ 96112 21850 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.