ಸಾರಾಂಶ
ಜಾತಿ ಬೇಧ ಮರೆತು ಎಲ್ಲರಲ್ಲೂ ಭಾರತೀಯರು ಎಂಬ ಭಾವ ಮೂಡಲಿ ಎಂದು ಉಜ್ಜೈನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಜಗದ್ಗುರುಗಳು ಸಲಹೆ ನೀಡಿದರು.
ಚಡಚಣ : ಜಾತಿ ಬೇಧ ಮರೆತು ಎಲ್ಲರಲ್ಲೂ ಭಾರತೀಯರು ಎಂಬ ಭಾವ ಮೂಡಲಿ ಎಂದು ಉಜ್ಜೈನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಜಗದ್ಗುರುಗಳು ಸಲಹೆ ನೀಡಿದರು.
ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ನಡೆದ ಶ್ರೀ ಗುರು ಚಂದ್ರಶೇಖರ ಸಂಸ್ಥಾನ ಹಿರೇಮಠದ ಗುರುಪೌರ್ಣಿಮಾ ಸಮಾರಂಭ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 11 ನವ ಜೋಡಿಗಳನ್ನ ಆಶೀರ್ವದಿಸಿ ಅವರು ಆಶೀರ್ವಚನ ನೀಡಿದರು. ಸಾಮೂಹಿಕ ಮದುವೆಯಿಂದ ಬಡವರಿಗೆ ಅನುಕೂಲವಾಗುತ್ತದೆ. ಇದು ಭಾಗ್ಯವಂತರ ಮದುವೆ ಎಂದ ಅವರು, ಈ ನಾಡು ಸಮೃದ್ಧಿ ಯಾಗಲಿ ಒಳ್ಳೆಯ ಮಳೆಯಾಗಲಿ ಒಳ್ಳೆಯ ಬೆಳೆಗೆ ಒಳ್ಳೆಯ ಮಾರುಕಟ್ಟೆ ದೊರೆಯಲಿ.
ವಧು-ವರರ ಬದುಕು ಕಲ್ಯಾಣವಾಗಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಸಂತಾನ ಅಪೇಕ್ಷ ಇದ್ದ ಭಕ್ತಾಧಿಗಳಿಗೆ ವಿದ್ಯೆ ವಿನಯವಿರಲಿ, ನಾವು ಎಲ್ಲರೂ ಭಾರತೀಯ ಎಂಬ ಭಾವ ಮೂಡಲಿ ಎಂದು ಆಶೀರ್ವದಿಸಿದರು.ಸಂಸದ ರಮೇಶ ಜಿಗಜಣಗಿ ಮಾತನಾಡಿ, ಶ್ರೀ ಗುರು ಚಂದ್ರಶೇಖರ ಸಂಸ್ಥಾನ ಹಿರೇಮಠಕ್ಕೆ ಬಹಳ ವರ್ಷಗಳದಿಂದ ಮಠಕ್ಕೆ ಬರುತ್ತಿದ್ದೇವೆ. ಈ ಮಠದಲ್ಲಿ 11 ಜೋಡಿ ಸಾಮೂಹಿಕ ವಿವಾಹವಾಗಿದ್ದು, ಮುಂದೆ ಈ ಸಂಖ್ಯೆ ಇನ್ನು ಹಚ್ಚಾಗಲಿವೆ. ಸಾಮೂಹಿಕ ವಿವಾಹಳು ನಡೆಯಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗುರು ಗುರುಪಾದೇಶ್ವರ ಶಿವಾಚಾರ್ಯ, ಶ್ರೀಕಂಠ ಶಿರ್ವಾಚಾರ್ಯ, ಶಂಭುಲಿಂಗ ಶಿವಾಚಾರ್ಯ, ಶಿವಾನಂದ ಶಿವಾಚಾರ್ಯ, ಪಂಚಾಕ್ಷರಿ ಶಿವಾಚಾರ್ಯ, ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಗುರುಬಾಳೇಶ್ವರ ಶಿವಾಚಾರ್ಯ, ಮಲ್ಲಿಕಾರ್ಜುನ ಶಿವಾಚಾರ್ಯ, ನಿರಂಜನ ದೇವರು ಆಶಿರ್ವಚನ ನೀಡಿದರು.
ಮಹಾಂತೇಶ ಸ್ವಾಮಿಗಳು ಮುಖಂಡರಾದ ಬಿ.ಎಂ.ಕೋರೆ, ಸಿದ್ದಣ್ಣ ಕೋಳಿ, ಸಂಜೀವ ಐಹೊಳೆ, ರಾಘವೇಂದ್ರ ಕಾಪಸೆ, ಶಿವಾನಂದ ಮಖಣಾಪೂರ, ಸಾಯಿಬಗೌಡ ಬಿರಾದಾರ, ವಿಠ್ಠಲ ವಡಗಾಂವ, ಮಲ್ಲುಗೌಡ ಬಿರಾದಾರ, ಲಕ್ಷ್ಮಣ ಬಿರಾದಾರ, ಕಾಶೀನಾಥ ಪಾಟೀಲ, ಜಗ್ನನಾಥ ಬಿರಾದಾರ, ನೂರಾರು ಭಕ್ತರು ಭಾಗವಹಿಸಿದ್ದರು.