ಹಸಿರುವಳ್ಳಿ ಡೇರಿಗೆ 11 ನಿರ್ದೇಶಕರು ಅವಿರೋಧ ಆಯ್ಕೆ

| Published : Feb 07 2024, 01:47 AM IST

ಸಾರಾಂಶ

ನೂತನ ನಿರ್ದೇಶಕರಾಗಿ ಚಂದ್ರಪ್ಪ, ಪರಮೇಶ್, ಶಿವಶಂಕರಯ್ಯ, ಬೈಲಪ್ಪ, ಹುಚ್ಚಭೈರಯ್ಯ, ತಿಮ್ಮಯ್ಯ, ಸಿದ್ದಗಂಗಯ್ಯ, ಜಯಮ್ಮ, ಶಿವಮ್ಮ, ನಾರಾಯಣಸ್ವಾಮಿ ಎಚ್.ಆರ್, ತಿಮ್ಮೇಗೌಡ ಆಯ್ಕೆಯಾಗಿದ್ದಾರೆ.

34 ವರ್ಷಗಳಿಂದಲೂ ಸಾಮರಸ್ಯದಿಂದ ಸದಸ್ಯರ ಆಯ್ಕೆ

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ತ್ಯಾಮಗೊಂಡ್ಲು ಹೋಬಳಿಯ ಹಸಿರುವಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ೫ ವರ್ಷಗಳ ಅವಧಿಗಾಗಿ 11 ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಲತಾ. ಆರ್ ಘೋಷಿಸಿದರು.

ಹೋಬಳಿಯ ಹಸಿರುವಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2024 ರಿಂದ 5 ವರ್ಷಗಳ ಅವಧಿಗಾಗಿ 11ನಿರ್ದೇಶಕರ ಚುನಾವಣೆ ನಿಗದಿಯಾಗಿತ್ತು. 11 ಸ್ಥಾನಗಳಿಗೆ ಒಟ್ಟು 12 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಒಬ್ಬರು ನಾಮಪತ್ರ ಹಿಂಪಡೆದ ಹಿನ್ನೆಲೆ 11 ಜನ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ನೂತನ ನಿರ್ದೇಶಕರಾಗಿ ಚಂದ್ರಪ್ಪ, ಪರಮೇಶ್, ಶಿವಶಂಕರಯ್ಯ, ಬೈಲಪ್ಪ, ಹುಚ್ಚಭೈರಯ್ಯ, ತಿಮ್ಮಯ್ಯ, ಸಿದ್ದಗಂಗಯ್ಯ, ಜಯಮ್ಮ, ಶಿವಮ್ಮ, ನಾರಾಯಣಸ್ವಾಮಿ ಎಚ್.ಆರ್, ತಿಮ್ಮೇಗೌಡ ಆಯ್ಕೆಯಾಗಿದ್ದಾರೆ.

ಗ್ರಾಮದ ಮುಖಂಡ ಎಚ್.ಎಂ. ಕುಮಾರ್ ಮಾತನಾಡಿ, ಕಳೆದ ೩೪ ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಹಾಲಿನ ಡೇರಿ ಚುನಾವಣೆಯಲ್ಲಿ ಅವಿರೋಧವಾಗಿ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ, ಚುನಾವಣೆಗೆ ತಗುಲುವ ವೆಚ್ಚವನ್ನು ಹಾಲು ಉತ್ಪಾದಕರಿಗೆ ಬೋನಸ್ ರೀತಿಯಲ್ಲಿ ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತಿದೆ, ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿರುವ ರೈತರ ಬದುಕಿಗೆ ನೆರವಾಗಲು ನೂತನ ಕಟ್ಟಡ ನಿರ್ಮಿಸುತ್ತಿದ್ದೇವೆ, ಶಾಸಕ ಎನ್. ಶ್ರೀನಿವಾಸ್ ಅವರ ೫ ಲಕ್ಷ ಅನುದಾನ, ಎಂ.ಎಲ್.ಸಿ ರವಿ ಅವರ ೨ ಲಕ್ಷ ಅನುದಾನದಲ್ಲಿ ಹಾಗೂ ಡೇರಿಯ ಲಾಭಾಂಶದಲ್ಲಿ ನಿರ್ಮಿಸುತ್ತಿದ್ದೇವೆ, ಯಾವುದೇ ಒಳಜಗಳ ನಡೆಯದಂತೆ ಪ್ರಾಮಾಣಿಕವಾಗಿ ಡೇರಿಯನ್ನು ಮುನ್ನಡೆಸುತ್ತಿದ್ದಾರೆ ಎಂದರು.

ನೂತನ ನಿರ್ದೇಶಕರನ್ನು ಗ್ರಾಮದ ಕಾಂಗ್ರೆಸ್ ಮುಖಂಡರಾದ ಎಚ್.ಎಂ.ಕುಮಾರ್, ಗ್ರಾಪಂ ಸದಸ್ಯರಾದ ವಾದಕುಂಟೆ ಚನ್ನಕೃಷ್ಣ, ಗಂಗ ಹನುಮಣ್ಣ, ಗ್ರಾಮಸ್ಥರಾದ ಶಿವಕುಮಾರ್, ಅಡಶಿವಪ್ಪ, ಡೇರಿ ಸಿಇಒ ಮಧು ಸೇರಿ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದಿಸಿದರು.

--------ತ್ಯಾಮಗೊಂಡ್ಲು ಹೋಬಳಿಯ ಹಸಿರುವಳ್ಳಿ ಹಾಲು ಉತ್ಪಾದಕರ ಸಂಘದ 11 ಜನ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಕ್ಕೆ ಕಾಂಗ್ರೆಸ್ ಮುಖಂಡರಾದ ಎಚ್.ಎಂ.ಕುಮಾರ್ ಹಾಗೂ ಗ್ರಾಮಸ್ಥರು ಅಭಿನಂದಿಸಿದರು.