ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಎದುರಾಗುತ್ತಿರುವ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಪ್ರಮುಖ 11 ರಸ್ತೆಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದು, ಅದಕ್ಕಾಗಿ ವಿವರ ಕಾರ್ಯಸಾಧ್ಯತಾ ವರದಿ (ಡಿಎಫ್‌ಆರ್) ಸಿದ್ಧಪಡಿಸುತ್ತಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗಿ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ಸದ್ಯ ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚಿನ ಪಾದಚಾರಿ ಮೇಲ್ಸೇತುವೆಗಳಿವೆ. ಅವುಗಳ ಜತೆಗೆ ಇದೀಗ ಪಾದಚಾರಿಗಳು ಹೆಚ್ಚಾಗಿ ಓಡಾಡುವ ಮತ್ತು ಸಂಚಾರ ದಟ್ಟಣೆ ಹೆಚ್ಚಿರುವ ಮಾರ್ಗಗಳಲ್ಲಿ ಬೇಡಿಕೆಗನುಗುಣವಾಗಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ನಿರ್ಧರಿಸಿದೆ. ಅದಕ್ಕಾಗಿ 11 ಮಾರ್ಗ ಮತ್ತು ಸ್ಥಳದ ಪಟ್ಟಿ ಮಾಡಲಾಗಿದ್ದು, ಅಲ್ಲಿ ಪಾದಚಾರಿ ಮೇಲ್ಸೇತುವೆಯ ಅವಶ್ಯಕತೆ ಇದೆಯೇ ಮತ್ತು ಅಲ್ಲಿ ನಿರ್ಮಾಣ ಸಾಧ್ಯವೇ ಎಂಬ ಬಗ್ಗೆ ಖಾಸಗಿ ಸಂಸ್ಥೆಯಿಂದ ವರದಿ ತರಿಸಿಕೊಳ್ಳಲಾಗುತ್ತಿದೆ. ಆ ವರದಿ ಆಧರಿಸಿ ಬಿಬಿಎಂಪಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಿದೆ.ಯಾವೆಲ್ಲ ಮಾರ್ಗಗಳಲ್ಲಿ ಸ್ಕೈವಾಕ್
1. ಟ್ಯಾಂಕ್ ಬಂಡ್ ರಸ್ತೆ2. ಹೊರವರ್ತುಲ ರಸ್ತೆಯ ಚೌಡೇಶ್ವರಿ ಕೆಳಸೇತುವೆಯಿಂದ ಸುಮನಹಳ್ಳಿ ಕೆಳಸೇತುವರೆಗೆ
3. ಕೈಕೊಂಡ್ರಹಳ್ಳಿ ಜಂಕ್ಷನ್4. ತುಮಕೂರು ರಸ್ತೆಯ ಆರ್‌ಎಂಸಿ ಯಾರ್ಡ್‌ನಿಂದ ಎಂಇಐ ಜಂಕ್ಷನ್‌ವರೆಗೆ
5. ಹೊರ ವರ್ತುಲ ರಸ್ತೆಯ ಎನ್‌ಸಿಸಿ ಅಪಾರ್ಟ್‌ಮೆಂಟ್ ಬಳಿ6. ಹೊರವರ್ತುಲ ರಸ್ತೆಯ ಬಾಗ್ಮಾನೆ ಟೆಕ್‌ಪಾರ್ಕ್ ಬಳಿ
7. ಹೂಡಿ ಜಂಕ್ಷನ್8. ಹಳೇ ಮದ್ರಾಸ್ ರಸ್ತೆ
9. ಹಳೇ ವಿಮಾನ ನಿಲ್ದಾಣ ರಸ್ತೆ10. ಮೈಸೂರು ರಸ್ತೆಯ ಬಿಎಚ್‌ಇಎಲ್ ಬಳಿ
11. ಸರ್ಜಾಪುರ ರಸ್ತೆಯ ಕೃಪಾನಿಧಿ ಕಾಲೇಜು ಬಳಿ