ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ಪ್ರಸಕ್ತ ಮುಂಗಾರು ಹಂಗಾಮಿಗೆ ತಾಲೂಕಿನ ಐದು ಹೋಬಳಿ ಕೇಂದ್ರ ಆಳಂದ, ಖಜೂರಿ, ಮಾದನಹಿಪ್ಪರಗಾ. ನಿಂಬರಗಾ, ನರೋಣಾ ವಲಯಕ್ಕೆ ಕೃಷಿ ಇಲಾಖೆಯ ಲೆಕ್ಕಾಚಾರದಲ್ಲಿ 97445 ಹೆಕ್ಟೇರ್ ಪ್ರದೇಶದಲ್ಲಿ 111398 ಟನ್ ವಿವಿಧ ರೀತಿಯ ಆಹಾರಧಾನ್ಯ ಉತ್ಪಾದನೆ ಗುರಿ ಹೊಂದಿದೆ.ತೃಣಧಾನ್ಯಗಳ ಉತ್ಪಾದನೆ: ಭತ್ತ ಖಷ್ಕಿ 5 ಹೆಕ್ಟೇರನಲ್ಲಿ 5 ಟನ್, ಭತ್ತ ನೀರಾವರಿ 10 ಹೇಕ್ಟೇರ್‌ನಲ್ಲಿ 52 ಟನ್ ಉತ್ಪಾದನೆ ಗುರಿಯಿದೆ. ಖುಷ್ಕ ಜೋಳ 50 ಹೆಕ್ಟೇರ್‌ನಲ್ಲಿ 75 ಟನ್, ನೀರಾವರಿ ಜೋಳ 25 ಹೇಕ್ಟೇರ್‌ನಲ್ಲಿ 44 ಟನ್ ಉತ್ಪಾದನೆ, ಮೆಕ್ಕೆ ಜೋಳ ಖುಷ್ಕಿ 265 ಹೇಕ್ಟೇರ್‌ನಲ್ಲಿ 928 ಟನ್, ನೀರಾವರಿ ಮೆಕ್ಕೆಜೋಳ 75 ಹೇಕ್ಟೇರ್‌ನಲ್ಲಿ 375 ಟನ್ ಹಾಗೂ ಸಜ್ಜೆ ಖುಷ್ಕಿ 100 ಹೇಕ್ಟೇರ್‌ನಲ್ಲಿ 145 ಟನ್, ನೀರಾವರಿಯಲ್ಲಿ 15 ಹೇಕ್ಟೇರ್‌ನಲ್ಲಿ 33 ಟನ್ ಉತ್ಪಾದನೆ, ಇತರೆ ಬೆಳೆ 20 ಹೇಕ್ಟೇರ್‌ನಲ್ಲಿ 10 ಟನ್ ಹೀಗೆ ಒಟ್ಟು ತೃಣಧಾನ್ಯಗಳ 565 ಹೇಕ್ಟೇರ್‌ನಲ್ಲಿ 1680 ಟನ್ ಉತ್ಪಾದನೆ ಗುರಿ ಅಂದಾಜಿಸಿದೆ.
ಬೆಳೆಕಾಳು 96880 ಹೆಕ್ಟೇರ್: ತೊಗರಿ ಖುಷ್ಕಿ 83600 ಹೇಕ್ಟೇರ್‌ನಲ್ಲಿ 96140 ಟನ್, ನೀರಾವರಿ 4100 ಹೇಕ್ಟೇರ್‌ನಲ್ಲಿ 6355 ಟನ್, ಹುರುಳಿ ಖುಷ್ಕಿ 15 ಹೇಕ್ಟೇರ್‌ನಲ್ಲಿ 9 ಟನ್, ಉದ್ದು 6550 ಹೇಕ್ಟೇರ್‌ನಲ್ಲಿ 5240 ಟನ್ ಉತ್ಪಾದನೆ, ಹೆಸರು 2550 ಹೇಕ್ಟೇರ್‌ನಲ್ಲಿ 1913 ಟನ್ ಉತ್ಪಾದನೆ, ಮತ್ತು ನೀರಾವರಿ ಹೆಸರು 50 ಹೇಕ್ಟೇರ್‌ನಲ್ಲಿ 50ಟನ್, ಉತ್ಪಾದನೆ, ಅಲಸಂದಿ 5 ಹೇಕ್ಟೇರ್‌ನಲ್ಲಿ 3 ಟನ್, ಅವರೆ ಖುಷ್ಕಿ 6 ಹೇಕ್ಟೇರ್‌ನಲ್ಲಿ 6 ಟನ್, ಮಟಕಿ ಖುಷ್ಕಿ5 ಹೇಕ್ಟೇರ್‌ನಲ್ಲಿ 3 ಟನ್ ಉತ್ಪಾದನೆ ಸೇರಿ ಒಟ್ಟು 96880 ಹೇಕ್ಟೇರ್‌ನಲ್ಲಿ 109718 ಟನ್ ಉತ್ಪಾದನೆ ಗುರಿ ಅಂದಾಜಿಸಿದೆ.ಎಣ್ಣೆಕಾಳು 37210 ಹೆಕ್ಟೇರ್: ಶೇಂಗಾ ಖುಷ್ಕಿ 80 ಹೇಕ್ಟೇರ್‌ನಲ್ಲಿ 100ಟನ್, ನೀರಾವರಿಯಲ್ಲಿ 10 ಹೇಕ್ಟೇರ್‌ನಲ್ಲಿ 20ಟನ್ ಉತ್ಪಾದನೆ, ಎಳ್ಳು ಖುಷ್ಕಿ 70 ಹೇಕ್ಟೇರ್‌ನಲ್ಲಿ 49 ಟನ್, ಸೂರ್ಯಕಾಂತಿ ಖುಷ್ಕಿ 4120 ಹೇಕ್ಟೇರ್‌ನಲ್ಲಿ 3708 ಟನ್, ನೀರಾವರಿಯಲ್ಲಿ 425 ಹೇಕ್ಟೇರ್‌ನಲ್ಲಿ 765 ಟನ್, ಔಡಲ್ ಖುಷ್ಕಿ 1 ಹೇಕ್ಟೇರ್‌ನಲ್ಲಿ 1 ಟನ್, ಸೋತಾಬೀನ್ ಖುಷ್ಕಿ 32500 ಹೇಕ್ಟೇರ್‌ನಲ್ಲಿ 65000 ಟನ್ ಸೇರಿ ಒಟ್ಟು ಎಣ್ಣೆಕಾಳು 37210 ಹೇಕ್ಟೇರ್‌ನಲ್ಲಿ 69643 ಟನ್ ಸೇರಿ ಒಟ್ಟು ಪ್ರಸಕ್ತ ಮುಂಗಾರಿನ ಕ್ಷೇತ್ರದಲ್ಲಿ 139855 ಹೇಕ್ಟೇರ್‌ನಲ್ಲಿ 586951 ಟನ್ ಉತ್ಪಾದನೆ ಗುರಿ ಹೊಂದಲಾಗಿದೆ. ಒಟ್ಟು ಆಹಾರ ಬೆಳೆಗಳ ವಿಸ್ತೀರ್ಣ 97445 ಹೇಕ್ಟೇರ್‌ನಲ್ಲಿ 111398 ಟನ್ ಉತ್ಪಾದನೆ ನಡೆಯಲಿದೆ ಎಂದು ಅಧಿಕಾರಿಗಳು ಅಂಕಿಅಂಶ ಬಿಡುಗಡೆ ಮಾಡಿದ್ದಾರೆ.