ಸಾರಾಂಶ
ಜೆ.ಪಿ. ನಗರದಲ್ಲಿರುವ ಪಂ. ಪುಟ್ಟರಾಜ ಕ್ರೀಡಾಂಗಣದಲ್ಲಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ 111ನೇ ಜಯಂತಿ ವಿಜೃಂಭಣೆಯಿಂದ ಆಚರಿಸಿತು
ಕನ್ನಡಪ್ರಭ ವಾರ್ತೆ ಮೈಸೂರು
ಜೆ.ಪಿ. ನಗರದಲ್ಲಿರುವ ಪಂ. ಪುಟ್ಟರಾಜ ಕ್ರೀಡಾಂಗಣದಲ್ಲಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ 111ನೇ ಜಯಂತಿ ವಿಜೃಂಭಣೆಯಿಂದ ಆಚರಿಸಿತು.ಕಾರ್ಯಕ್ರಮದ ಅಂಗವಾಗಿ ಗಣ್ಯರು, ಭಕ್ತರು ಮತ್ತು ಸಂಗೀತಾಸಕ್ತರು ಭಾಗವಹಿಸಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ನಗರದ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾದ ಗೌರವಾಧ್ಯಕ್ಷ ಮ.ವಿ. ರಾಮಪ್ರಸಾದ್, ಜೆ.ಪಿ. ನಗರ ವಾರ್ಡಿನ ಸದಸ್ಯ ಈಶ್ವರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ನಿರ್ದೇಶಕರಾದ ಟಿ.ಎಂ. ಮಹೇಶ್, ಶ್ರೀ ಗುರು ಪುಟ್ಟರಾಜ ಸಂಗೀತ ಸಭಾದ ಅಧ್ಯಕ್ಷ ಪಂಡಿತ ಭೀಮಾಶಂಕರ ಬಿದನೂರ ಇದ್ದರು.