ಚಿಕ್ಕಮಗಳೂರುಕೇಂದ್ರದ ಸಿಆರ್‌ಐಎಫ್ ನಿಧಿಯಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 18 ರಸ್ತೆಗಳ ಅಭಿವೃದ್ಧಿಗೆ ₹119 ಕೋಟಿ ಬಿಡುಗಡೆ ಯಾಗಿರುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೇಂದ್ರದ ಸಿಆರ್‌ಐಎಫ್ ನಿಧಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕೇಂದ್ರದ ಸಿಆರ್‌ಐಎಫ್ ನಿಧಿಯಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 18 ರಸ್ತೆಗಳ ಅಭಿವೃದ್ಧಿಗೆ ₹119 ಕೋಟಿ ಬಿಡುಗಡೆ ಯಾಗಿರುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬಾಳೆಹೊನ್ನೂರು - ಶೃಂಗೇರಿ ರಸ್ತೆ, ಕೊಪ್ಪ- ಶೃಂಗೇರಿ ಸೇರಿದಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 18 ಲೋಕೋಪಯೋಗಿ ರಸ್ತೆಗಳಿಗೆ ಅಭಿವೃದ್ಧಿ ಕಾಮಗಾರಿಗೆ ಈ ಹಣ ನೀಡಲಾಗಿದೆ. ಬಾಳೆಹೊನ್ನೂರು - ಶೃಂಗೇರಿ ರಸ್ತೆ ಅಭಿವೃದ್ಧಿಗೆ ₹50 ಕೋಟಿ ಕೊಪ್ಪ-ಜಯಪುರ-ಶೃಂಗೇರಿ ರಸ್ತೆ ಅಭಿವೃದ್ಧಿಗೆ ₹6 ಕೋಟಿ, ಕುಂದಾಪುರ-ಬೈಂದೂರು-ವಿರಾಜಪೇಟೆ ರಸ್ತೆಗೆ ₹6 ಕೋಟಿ, ಉಡುಪಿ-ಹಿರಿಯಡ್ಕ-ಕಾರ್ಕಳ-ಸುಬ್ರಹ್ಮಣ್ಯ ರಸ್ತೆಗೆ ₹6 ಕೋಟಿ, ಬ್ರಹ್ಮಾವರ-ಜನ್ನಾಡಿ ರಸ್ತೆ ಅಭಿವೃದ್ಧಿಗೆ ₹5 ಕೋಟಿ, ಬಾರ್ಕೂರು ರಸ್ತೆ ಅಭಿವೃದ್ಧಿಗೆ ₹10 ಕೋಟಿ, ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.ಶಿರೂರು-ಕೊಕ್ಕರ್ಣೆ-ಸಂತೆಕಟ್ಟೆ ರಸ್ತೆಗೆ ₹3 ಕೋಟಿ, ಹಳೆ ಎಂಬಿಸಿ ರಸ್ತೆಗೆ ₹1.60 ಕೋಟಿ, ಆರೂರು-ಮಣ್ಣಿನ ಜಡ್ಡು-ಕೊಕ್ಕರ್ಣೆ ರಸ್ತೆಗೆ ₹1.40 ಕೋಟಿ, ತೀರ್ಥಹಳ್ಳಿಯಿಂದ ಕುಂದಾಪುರ ರಸ್ತೆಗೆ ₹2 ಕೋಟಿ, ಹೆಬ್ರಿ ತಾಲೂಕಿನ ಮುನಿಯಾಲು- ಕಬ್ಬಿನಾಲೆ ರಸ್ತೆ, ಅತ್ರಾಡಿ-ಮಂಗಳೂರು(ಕಾರ್ಕಳ ತಾಲ್ಲೂಕು), ಕುಂಟಾಡಿ-ಹಳೆಕಟ್ಟೆ-ಕೆಮ್ಮಣ್ಣು ಎಮ್ಡಿಆರ್ ರಸ್ತೆಗೆ ತಲಾ ₹1 ಕೋಟಿ, ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕುಂಟಾಡಿ-ಹಳೆಕಟ್ಟೆ-ಕೆಮ್ಮಣ್ಣು ಎನ್ ಡಿಆರ್ ರಸ್ತೆಗೆ ₹1 ಕೋಟಿ, ನಾರಾವಿ-ಮಂಗಳೂರು (ಕಾರ್ಕಳ ತಾಲೂಕು) ರಸ್ತೆಗೆ 1 ಕೋಟಿ ರು, ಕಡೂರು ತಾಲೂಕಿನ ಬೇಗೂರು ಗೇಟ್‌ನಿಂದ-ಅರೇಹಳ್ಳಿ ಮೂಲಕ ಮಚ್ಚೇರಿ ರಸ್ತೆಗೆ ₹6 ಕೋಟಿ, ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನ ಗಿರಿ-ಮುಳ್ಳಯ್ಯನಗಿರಿ ರಸ್ತೆಗೆ ₹6 ಕೋಟಿ, ಮೂಡಿಗೆರೆ ತಾಲೂಕಿನ ರಾಜ್ಯ ಹೆದ್ದಾರಿ 106ರ ಬಾಳೂರು ಹ್ಯಾಂಡ್ ಪೋಸ್ಟ್ರಿಂದ ಕಳಸ ರಸ್ತೆಗೆ ₹6 ಕೋಟಿ, ತರೀಕೆರೆ ತಾಲೂಕಿನ ರಾಜ್ಯ ಹೆದ್ದಾರಿ 57ರ ಬಾಗಲಕೋಟೆ ಬಿಳಿಗಿರಿರಂಗನ ಬೆಟ್ಟ ರಸ್ತೆ ಅಭಿವೃದ್ಧಿಗೆ ₹6 ಕೋಟಿ ಬಿಡುಗಡೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----(ಕೋಟಾ ಶ್ರೀನಿವಾಸ್ ಪೂಜಾರಿ ಪೋಟೋ ಬಳಸಿ)
