ಜಿಲ್ಲಾದ್ಯಂತ ಮಳೆಯಿಂದಾಗಿ ₹12.30 ಲಕ್ಷ ನಷ್ಟ

| Published : Jul 21 2024, 01:16 AM IST

ಸಾರಾಂಶ

ಜಿಲ್ಲಾದ್ಯಂತ ಸತತವಾಗಿ ಸುರಿಯುತ್ತಿರುವ ಹದಮಳೆಯು 17.2 ಮಿ.ಮೀ. ಸರಾಸರಿಯಾಗಿದ್ದು, ಅಧಿಕ ಮಳೆಯಿಂದಾಗಿ ಸುಮಾರು ₹12.30 ಲಕ್ಷ ಹಾನಿ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ಜಿಲ್ಲಾದ್ಯಂತ ಸತತವಾಗಿ ಸುರಿಯುತ್ತಿರುವ ಹದಮಳೆಯು 17.2 ಮಿ.ಮೀ. ಸರಾಸರಿಯಾಗಿದ್ದು, ಅಧಿಕ ಮಳೆಯಿಂದಾಗಿ ಸುಮಾರು ₹12.30 ಲಕ್ಷ ಹಾನಿ ಸಂಭವಿಸಿದೆ.

ಚನ್ನಗಿರಿ ತಾಲೂಕಿನಲ್ಲಿ 4.8 ಮಿ.ಮೀ. ವಾಡಿಕೆ ಮಳೆಗೆ 18.9 ಮಿ.ಮೀ. ವಾಸ್ತವ ಮಳೆಯಾಗಿದೆ. ದಾವಣಗೆರೆಯಲ್ಲಿ 3.3 ಮಿ.ಮೀ. ವಾಡಿಕೆಗೆ 18.6 ಮೀ.ಮಿ. ವಾಸ್ತವ ಮಳೆಯಾಗಿದೆ. ಹರಿಹರ ತಾಲೂಕಿನಲ್ಲಿ 1.9 ಮಿ.ಮೀ. ವಾಡಿಕೆಗೆ 20.6 ಮಿ.ಮೀ. ವಾಸ್ತವ ಮಳೆಯಾಗಿದೆ. ಹೊನ್ನಾಳಿಯಲ್ಲಿ 6.2 ಮಿ.ಮೀ. ವಾಡಿಕೆ ಮಳೆಗೆ 23.3 ವಾಸ್ತವ ಮಳೆ ಸುರಿದಿದೆ.

ಜಗಳೂರು ತಾಲೂಕಿನಲ್ಲಿ 2.1 ಮಿ.ಮೀ. ವಾಡಿಕೆ ಮಳೆಗೆ 5.6 ಮಿ.ಮೀ. ವಾಸ್ತವ ಮಳೆಯಾಗಿದೆ. ನ್ಯಾಮತಿಯಲ್ಲಿ 7.2 ಮಿ.ಮೀ. ವಾಡಿಕೆ ಮಳೆಗೆ 26.2 ಮಿ.ಮೀ. ವಾಸ್ತವ ಮಳೆಯಾಗಿದೆ. ದಾವಣಗೆರೆ ತಾಲೂಕಿನಲ್ಲಿ 3 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ಸುಮಾರು ₹90 ಸಾವಿರ ನಷ್ಟ ಸಂಭವಿಸಿದೆ.

ಹರಿಹರ ತಾಲೂಕಿನಲ್ಲಿ 2 ಪಕ್ಕಾ ಮನೆ ಪೂರ್ಣ ಹಾನಿಯಾಗಿದ್ದು, ₹4 ಲಕ್ಷ ನಷ್ಟವಾಗಿದೆ. ಈ ಪೈಕಿ 2 ಕಚ್ಚಾ ಮನೆ ಭಾಗಶಃ ಹಾನಿಗೀಡಾಗಿದ್ದು, ₹60 ಸಾವಿರ ನಷ್ಟವಾಗಿದೆ. 1 ದನದ ಕೊಟ್ಟಿಗೆ ಹಾನಿಯಾಗಿ, ₹5 ಸಾವಿರ ಸೇರಿದಂತೆ ಒಟ್ಟು ₹5.25 ಲಕ್ಷದಷ್ಟು ಅಂದಾಜು ನಷ್ಟ ಸಂಭವಿಸಿದೆ.

ನ್ಯಾಮತಿಯಲ್ಲಿ 3 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ₹75 ಸಾವಿರ ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿಯಲ್ಲಿ 2 ಪಕ್ಕಾ ಮನೆ ಪೂರ್ಣ ಹಾನಿಯಾಗಿ ₹1.60 ಲಕ್ಷ, 9 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ₹3.80 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.

- - - (ಸಾಂದರ್ಭಿಕ ಚಿತ್ರ)