ಸಾಲಗಾರರಲ್ಲದ ಕ್ಷೇತ್ರದಿಂದ ಡಿ.ಆರ್. ರವೀಂದ್ರ, ಸಾಮಾನ್ಯ ವರ್ಗದಿಂದ ಕೃಷ್ಣಮೂರ್ತಿ ಜಿ., ಎನ್. ಪ್ರಶಾಂತ್, ನಾರಾಯಣಸ್ವಾಮಿ, ಲಕ್ಷ್ಮಣ್ ಗೌಡ, ಕೃಷ್ಣಮೂರ್ತಿ ಬಿ.ಎಂ., ಹಿಂದುಳಿದ ವರ್ಗ ಎ ಯಲ್ಲಿ ಎಸ್.ಪಿ. ಮುರಳಿ, ಬಿ ಯಲ್ಲಿ ನಂಜುಂಡಪ್ಪ ಕೆ.ಎನ್, ಎಸ್‌ಸಿ ಯಲ್ಲಿ ನಾರಾಯಣಸ್ವಾಮಿ, ಎಸ್‌ಟಿ ಯಲ್ಲಿ ವೆಂಕಟರಮಣಪ್ಪ, ಮಹಿಳಾ ಮೀಸಲಿನಲ್ಲಿ ಸಾವಿತ್ರಮ್ಮ ಹಾಗೂ ಎನ್. ಮಂಜುಳಾ ಆಯ್ಕೆಯಾಗಿದ್ದಾರೆ.
ಟೇಕಲ್: ತಾಲೂಕಿನಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಟೇಕಲ್ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಮೂರು ಪಕ್ಷಗಳ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ೧೨ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ವಾಪಸಾತಿ ದಿನದಂದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ನಡುವೆ ತೀವ್ರ ಚರ್ಚೆ, ಸಭೆ ಹಾಗೂ ಮನವೊಲಿಕೆ ನಡೆಯಿತು. ಒಟ್ಟು ೧೨ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ೭, ಬಿಜೆಪಿ ಬೆಂಬಲಿತ ೪ ಮತ್ತು ಜೆಡಿಎಸ್ ೧ ಸ್ಥಾನ ಹಂಚಿಕೆಯಾಗಿದೆ.ಕಾಂಗ್ರೆಸ್ ಶಿಸ್ತಿನಿಂದ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿಸಿತು. ಬಿಜೆಪಿ ೪ ಸ್ಥಾನ ಪಡೆದರೆ, ಜೆಡಿಎಸ್ ೨ ಸ್ಥಾನಕ್ಕೆ ಪಟ್ಟು ಹಿಡಿದಿತ್ತು. ಅಂತಿಮ ಮಾತುಕತೆಯಲ್ಲಿ ಜೆಡಿಎಸ್ ಒಂದು ಸ್ಥಾನಕ್ಕೆ ಒಪ್ಪಿಕೊಂಡಿತು. ಬಿಜೆಪಿ ಮುಖಂಡರು ಕೆಲವು ನಾಮಪತ್ರ ವಾಪಸಾತಿಗೆ ಸೂಚಿಸಿದರೂ ಅಭ್ಯರ್ಥಿಗಳು ಒಪ್ಪದ ಕಾರಣ, ಪಕ್ಷದ ಹಿಡಿತ ಇಲ್ಲ ಎಂಬ ಚರ್ಚೆ ವ್ಯಕ್ತವಾಗಿದೆ.
ಅವಿರೋಧ ಆಯ್ಕೆಯಾದವರು:ಸಾಲಗಾರರಲ್ಲದ ಕ್ಷೇತ್ರದಿಂದ ಡಿ.ಆರ್. ರವೀಂದ್ರ, ಸಾಮಾನ್ಯ ವರ್ಗದಿಂದ ಕೃಷ್ಣಮೂರ್ತಿ ಜಿ., ಎನ್. ಪ್ರಶಾಂತ್, ನಾರಾಯಣಸ್ವಾಮಿ, ಲಕ್ಷ್ಮಣ್ ಗೌಡ, ಕೃಷ್ಣಮೂರ್ತಿ ಬಿ.ಎಂ., ಹಿಂದುಳಿದ ವರ್ಗ ಎ ಯಲ್ಲಿ ಎಸ್.ಪಿ. ಮುರಳಿ, ಬಿ ಯಲ್ಲಿ ನಂಜುಂಡಪ್ಪ ಕೆ.ಎನ್, ಎಸ್‌ಸಿ ಯಲ್ಲಿ ನಾರಾಯಣಸ್ವಾಮಿ, ಎಸ್‌ಟಿ ಯಲ್ಲಿ ವೆಂಕಟರಮಣಪ್ಪ, ಮಹಿಳಾ ಮೀಸಲಿನಲ್ಲಿ ಸಾವಿತ್ರಮ್ಮ ಹಾಗೂ ಎನ್. ಮಂಜುಳಾ ಆಯ್ಕೆಯಾಗಿದ್ದಾರೆ.
ಸಂಧಾನ ಸಭೆಯಲ್ಲಿ ಮಾಜಿ ತಾಪಂ ಸದಸ್ಯ ರಮೇಶ್ ಗೌಡ, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ರಾಮಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ. ವಿನೋದ್ ಗೌಡ, ಸತೀಶ್ ರಾಜಣ್ಣ, ಸೊಣ್ಣಪ್ಪ, ಮುನಿಯಪ್ಪ, ಶ್ರೀನಿವಾಸ್, ಮಂಜುನಾಥ್, ಶಾಮಣ್ಣ, ಲಕ್ಷ್ಮಣ್ ಗೌಡ ಇದ್ದರು.