ತಾಲೂಕಿನಲ್ಲಿ ಶುಕ್ರವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನಲ್ಲಿ ಅಂದಾಜು 1200 ಎಕರೆ ಬಾಳೆ ಹಾನಿಯಾಗಿದೆ. ತಾಲೂಕಿನ ಕಸಬಾ ಹಾಗು ಹಂಗಳ ಹೋಬಳಿಯಲ್ಲಿ ಅತೀ ಹೆಚ್ಚು ಬಾಳೆ ಬೆಳೆ ಹಾನಿಯಾಗಿದ್ದು, ತಾಲೂಕಿನ ಉಳಿದೆಡೆ ಅಲ್ಲಲ್ಲಿ ಬಾಳೆ ಬೆಳೆ ಹಾನಿಯಾಗಿದೆ ಎಂದು ತಹಸೀಲ್ದಾರ್‌ ಮಂಜುನಾಥ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನಲ್ಲಿ ಶುಕ್ರವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನಲ್ಲಿ ಅಂದಾಜು 1200 ಎಕರೆ ಬಾಳೆ ಹಾನಿಯಾಗಿದೆ. ತಾಲೂಕಿನ ಕಸಬಾ ಹಾಗು ಹಂಗಳ ಹೋಬಳಿಯಲ್ಲಿ ಅತೀ ಹೆಚ್ಚು ಬಾಳೆ ಬೆಳೆ ಹಾನಿಯಾಗಿದ್ದು, ತಾಲೂಕಿನ ಉಳಿದೆಡೆ ಅಲ್ಲಲ್ಲಿ ಬಾಳೆ ಬೆಳೆ ಹಾನಿಯಾಗಿದೆ ಎಂದು ತಹಸೀಲ್ದಾರ್‌ ಮಂಜುನಾಥ್‌ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆಯೇ ತಹಸೀಲ್ದಾರ್‌ ಮಂಜುನಾಥ್‌ ಸೂಚನೆಯಂತೆ ಮಳೆ ಹಾಗೂ ಬಿರುಗಾಳಿಗೆ ಹಾನಿಯಾದ ಪ್ರದೇಶಗಳಿಗೆ ಆಯಾಯ ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗರು ಬೆಳೆಹಾನಿಯಾದ ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ. ತಹಸೀಲ್ದಾರ್‌ ಮಂಜುನಾಥ್‌ ಕೂಡ ತೆರಕಣಾಂಬಿ ಬಳಿ ಕೆಲ ಬಾಳೆ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳೆ ನಾಶದ ಜೊತೆಗೆ ರೈತನ ಸಂಕಟ ಕಂಡು ಸ್ವತಃ ತಹಸೀಲ್ದಾರ್‌ ಮಂಜುನಾಥ್‌ ಹವಕ್ಕಾಗಿದ್ದಾರೆ ಎನ್ನಲಾಗಿದೆ. ಕನ್ನಡಪ್ರಭದೊಂದಿಗೆ ತಹಸೀಲ್ದಾರ್‌ ಮಂಜುನಾಥ್‌ ಮಾತನಾಡಿ ಕಂದಾಯ ನಿರೀಕ್ಷಕ ಹಾಗು ಗ್ರಾಮದ ಲೆಕ್ಕಿಗರು ನೀಡಿದ ವರದಿ ಪಡದಿದ್ದೇನೆ.ಬಾಳೆ ಬೆಳೆ ಹಾನಿಯಾದ ವರದಿಯನ್ನು ತೋಟಗಾರಿಕೆ ಇಲಾಖೆಗೆ ತಾಂತ್ರಿಕ ಒಪ್ಪಿಗೆಗಾಗಿ ಕಳುಹಿಸಿದ್ದೇನೆ ಎಂದರು.