12ನೇ ಶತಮಾನದ ವಚನ ಸಾಹಿತ್ಯ ಕನ್ನಡದ ಹೆಮ್ಮೆ

| Published : Nov 25 2025, 03:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ ಬದುಕಿನ ಮೌಲ್ಯಗಳನ್ನು ಬಿಂಬಿಸುವ 12ನೇ ಶತಮಾನದ ವಚನ ಸಾಹಿತ್ಯ ಕನ್ನಡದ ಹೆಮ್ಮೆ ಎಂದು ನೇಗಿಲಯೋಗಿ ರೈತ ಪರಿಶ್ರಮ ಸೇವಾ ಸಂಘದ ರಾಜ್ಯಾಧ್ಯಕ್ಷ ಶಂಕರ ಬೋಳಣ್ಣವರ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಬದುಕಿನ ಮೌಲ್ಯಗಳನ್ನು ಬಿಂಬಿಸುವ 12ನೇ ಶತಮಾನದ ವಚನ ಸಾಹಿತ್ಯ ಕನ್ನಡದ ಹೆಮ್ಮೆ ಎಂದು ನೇಗಿಲಯೋಗಿ ರೈತ ಪರಿಶ್ರಮ ಸೇವಾ ಸಂಘದ ರಾಜ್ಯಾಧ್ಯಕ್ಷ ಶಂಕರ ಬೋಳಣ್ಣವರ ಹೇಳಿದರು.

ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯ ಗಣಾಚಾರಿ ಮಹಾವಿದ್ಯಾಲಯದಲ್ಲಿ ರಾಜ್ಯೋತ್ಸವದ ನಿಮಿತ್ತ ಬಸವ ದಿನಚರಿ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಜಗತ್ತಿಗೆ ಮಾನವೀಯತೆಯನ್ನು ಸಾರಿ ಹೇಳಿದ ಮಹಾನ್ ದಾರ್ಶನಿಕ ಬಸವಣ್ಣ ಎಲ್ಲ ಕವಿಗಳಿಗೆ ಸ್ಪೂರ್ತಿಯಿದ್ದಂತೆ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಸಂಯೋಜಕ ಮೋಹನ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ದೂರದೃಷ್ಟಿಯೊಂದಿಗೆ ಮಾಜಿ ರಾಷ್ಟ್ರಪತಿ ಡಾ.ಬಿ.ಡಿ ಜತ್ತಿಯವರಿಂದ 1964 ರಲ್ಲಿ ಸ್ಥಾಪನೆಯಾದ ಬಸವ ಸಮಿತಿ ವಚನ ಸಾಹಿತ್ಯ, ಶರಣ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಮೆಚ್ಚುಗೆ ಸಂಗತಿ ಎಂದರು.

ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಇಬ್ರಾಹಿಮ್ ಮುಲ್ಲಾ ಮಾತನಾಡಿ ಉದಯೋನ್ಮುಖ ಕವಿಗಳು ಸಾಕಷ್ಟು ಅಧ್ಯಯನ ಮಾಡುವುದರಿಂದ ಉತ್ತಮ ಸಾಹಿತ್ಯ ರಚನೆಯಾಗುತ್ತದೆ ಎಂದರು.

ಅತಿಥಿಗಳಾಗಿ ಮೇಕಲಮರಡಿಯ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಕಾಶಿಮಸಾಬ ಜಮಾದಾರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿಯ ವಿದ್ಯಾವಿಷಯತ್ ಸದಸ್ಯ ಡಾ.ಚಂದ್ರಶೇಖರ ಗಣಾಚಾರಿ, ಕಾನಿಪದ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿ ರವಿಕುಮಾರ ಹುಲಕುಂದ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕು ಘಟಕದ ಉಪಾಧ್ಯಕ್ಷ ಶ್ರೀಶೈಲ ಉಳವಪ್ಪ ಶರಣಪ್ಪನವರ(ಯಲ್ಲಪ್ಪಗೌಡ್ರ), ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕೋಳಿ, ಪ್ರಗತಿಪರ ಕೃಷಿಕರಾದ ಬಸವರಾಜ ಜಂಬಗಿ, ಮಹಾಂತೇಶ ಬೋಳಣ್ಣವರ, ಅನಿಲ ಗೀರನವರ, ಅದೃಶಪ್ಪ ಹುಚ್ಚನವರ, ಯರಗಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ರಮೇಶ ಗುರುಸಿದ್ದಪ್ಪ ಯರಗಟ್ಟಿ, ಪತ್ರಕರ್ತ ಮಹಮ್ಮದ ಯೂನಸ, ರಫೀಕ ಬಡೆಘರ ಅತಿಥಿಗಳಾಗಿ ಅಗಮಿಸಿದ್ದರು. ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ ಕವಿ- ಕವಯತ್ರಿಯರಾದ ಕನಕರಾಯ ಬುಕ್ಕನಹಟ್ಟಿ, ಮನು ಗುರುಸ್ವಾಮಿ,ರಾಜು ನಾಯಿಕ, ವಿಜಯ ಸಕ್ರಿ, ಗಾಯತ್ರಿ ಗುರವ, ಶಿವಲೀಲಾ.ಆರ್, ಶಂಕರಬಾಯಿ ನಿಂಬಾಳಕರ, ಚಂದ್ರಶೇಖರ ಬಡಿಗೇರ, ಚಂದ್ರಶೇಖರಯ್ಯ ಕಲ್ಮಠ, ಸರಸ್ವತಿ ಬನ್ನಿಗಿಡದ, ಅಭಿಷೇಕ ಮಠದ, ಆರ್. ಶೈಲಜ(ಚಿತ್ರದುರ್ಗ), ಮಲ್ಲಿಕಾರ್ಜುನ ಯಾಳವಾರ, ಮಲ್ಲಪ್ಪ ಚಾಯಪ್ಪಗೋಳ, ಸಿದ್ದಪ್ಪ ರಾವಳ, ಮಹಾಂತೇಶ ಮುದಕನಗೌಡರ, ಚಂದ್ರಶೇಖರ ಚನ್ನಂಗಿ, ಮಧು ಚನ್ನಂಗಿ, ನಬಿಸಾಬ ಖುದ್ದುನವರ, ಭೀಮಸೇನ ಚಿಂಚಲಿ, ಶಿವಪುತ್ರ ಬಡಿಗೇರ, ಪವಿತ್ರಾ ಶಿಂಧೆ, ಬಸವರಾಜ ಪತ್ತಾರ, ಈರಣ್ಣ ಜಾಡರ, ಮಹಾಂತೇಶ ಬಾಳಿಗಟ್ಟಿ, ಶಂಕರೆಪ್ಪ ಹಳಂಗಳಿ, ಕೆ.ಟಿ.ಶಾಂತಮ್ಮ (ಚಿತ್ರದುರ್ಗ), ಶಿವಕುಮಾರ ಶಿವಶಿಂಪಿ ಸೇರಿದಂತೆ ಇನ್ನು ಹಲವರು ಭಾಗವಹಿಸಿದ್ದರು.

ಶಿಕ್ಷಕ ಶಿವಾನಂದ ಪಟ್ಟಿಹಾಳ ನಿರೂಪಿಸಿದರು. ಬೈಲಹೊಂಗಲ ಕಸಾಪ ತಾಲೂಕಾಧ್ಯಕ್ಷ ಚಂದ್ರಶೇಖರ ಕೊಪ್ಪದ ವಂದಿಸಿದರು.