12 ರಂದು ಬುದ್ಧನ ಪುತ್ಥಳಿ ನಿರ್ಮಾಣದ ವಾರ್ಷಿಕೋತ್ಸವ

| Published : Mar 06 2024, 02:16 AM IST

12 ರಂದು ಬುದ್ಧನ ಪುತ್ಥಳಿ ನಿರ್ಮಾಣದ ವಾರ್ಷಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಬಾಚನಹಳ್ಳಿ ಮಿಲಿಂದ ಬುದ್ದ ವಿಹಾರದ ಆವರಣದಲ್ಲಿ ಮಾ.12 ರಂದು ನವೋದಯ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ 21 ಅಡಿ ಭಗವಾನ್ ಬುದ್ಧನ ಪುತ್ಥಳಿ ನಿರ್ಮಾಣದ ಮೊದಲನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಜಯರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಬಾಚನಹಳ್ಳಿ ಮಿಲಿಂದ ಬುದ್ದ ವಿಹಾರದ ಆವರಣದಲ್ಲಿ ಮಾ.12 ರಂದು ನವೋದಯ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ 21 ಅಡಿ ಭಗವಾನ್ ಬುದ್ಧನ ಪುತ್ಥಳಿ ನಿರ್ಮಾಣದ ಮೊದಲನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಜಯರಾಜು ತಿಳಿಸಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವಿಚಾರ ವೇದಿಕೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದ ಮಿಲಿಂದ ಬುದ್ದ ವಿಹಾರದಲ್ಲಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್‌ರ ಆಶಯದಂತೆ ಬೌದ್ದ ಧಮ್ಮ ಸ್ಥಾಪನೆಗಾಗಿ 21 ಅಡಿ ಎತ್ತರದ ಭಗವಾನ್‌ ಬುದ್ದನ ಪುತ್ಥಳಿ ನಿರ್ಮಾಣವಾಗಿ ಒಂದು ವರ್ಷ ತುಂಬಿದ ಹಿನ್ನೆಲೆ ಬೌದ್ದ ಮಹಾಸಭಾ, ನವೋದಯ ಟ್ರಸ್ಟ್ ಸೇರಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಮೊದಲನೇ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಬೌದ್ದ ಮಹಾಸಭಾ ತಾಲೂಕು ಅಧ್ಯಕ್ಷ ಮಾರ್ಕಾಲು ನಟರಾಜು ಮಾತನಾಡಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಳ್ಳೇಗಾಲ ಚೇತನವನದ ಮನೋರಖ್ಖಿತ ಭಂತೇಜಿ, ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಅಕ್ಕಾ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ. ಶಿವಕುಮಾರ್, ಕನಕಪುರ ಧಮ್ಮದೀವಿಗೆ ಅಧ್ಯಕ್ಷ ಮಲ್ಲಿಕಾರ್ಜುನ್, ಭಾರತೀಯ ಬೌದ್ದ ಮಹಸಭಾ ಯೂತ್‌ವಿಂಗ್ ರಾಜ್ಯಾಧ್ಯಕ್ಷ ದರ್ಶನ್ ಸೋಮಶೇಖರ್ ಸೇರಿ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಯತೀಶ್, ಮಹದೇವು, ಶಿವನಂಜು, ಬೆಳಕವಾಡಿ ಕಾಂತರಾಜು, ಪ್ರಸಾದ್, ಸಿದ್ದರಾಮು, ಚೇತನ್‌ಕುಮಾರ್ , ಉಪ್ಪಿ, ಮುದ್ದುರಾಜ್, ಸುರೇಶ್, ಮಹದೇವಸ್ವಾಮಿ ಸೇರಿದಂತೆ ಇತರರಿದ್ದರು.