ರಾಜ್ಯದ ಪಾಲಿನ ಲೋಕಸಭೆ ಮೊದಲ ಹಂತದ ಚುನಾವಣೆಯಲ್ಲಿ ದಕ್ಷಿಣದ 14 ಕ್ಷೇತ್ರಗಳಿಗೆ ಮತದಾನ ಮುಗಿದ ಬೆನ್ನಲ್ಲೇ ಹದಿಮೂರು ಮಂದಿ ಸಚಿವರನ್ನು ಉತ್ತರ ಕರ್ನಾಟಕ ಭಾಗದ 13 ಕ್ಷೇತ್ರಗಳಿಗೆ ಹೆಚ್ಚುವರಿ ಉಸ್ತುವಾರಿಗಳನ್ನಾಗಿ ನೇಮಿಸಿ ಕಾಂಗ್ರೆಸ್‌ ಆದೇಶ ಹೊರಡಿಸಿದೆ.

 ಬೆಂಗಳೂರು: ರಾಜ್ಯದ ಪಾಲಿನ ಲೋಕಸಭೆ ಮೊದಲ ಹಂತದ ಚುನಾವಣೆಯಲ್ಲಿ ದಕ್ಷಿಣದ 14 ಕ್ಷೇತ್ರಗಳಿಗೆ ಮತದಾನ ಮುಗಿದ ಬೆನ್ನಲ್ಲೇ ಹದಿಮೂರು ಮಂದಿ ಸಚಿವರನ್ನು ಉತ್ತರ ಕರ್ನಾಟಕ ಭಾಗದ 13 ಕ್ಷೇತ್ರಗಳಿಗೆ ಹೆಚ್ಚುವರಿ ಉಸ್ತುವಾರಿಗಳನ್ನಾಗಿ ನೇಮಿಸಿ ಕಾಂಗ್ರೆಸ್‌ ಆದೇಶ ಹೊರಡಿಸಿದೆ.

ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಹೆಚ್ಚುವರಿ ಉಸ್ತುವಾರಿ ಸಚಿವರು ಕೂಡಲೇ ಆಯಾ ಕ್ಷೇತ್ರಗಳಿಗೆ ಹೋಗಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಕೆಲಸ ಮಾಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ರಾಮಲಿಂಗಾರೆಡ್ಡಿ ಬಳ್ಳಾರಿ ಕ್ಷೇತ್ರ, ದಿನೇಶ್ ಗುಂಡೂರಾವ್‌- ಹುಬ್ಬಳ್ಳಿ-ಧಾರವಾಡ, ಬೈರತಿ ಸುರೇಶ್‌- ಕೊಪ್ಪಳ ಕ್ಷೇತ್ರ, ಡಾ.ಜಿ.ಪರಮೇಶ್ವರ್‌- ದಾವಣಗೆರೆ, ಕೆ.ಜೆ.ಜಾರ್ಜ್- ಉತ್ತರ ಕನ್ನಡ, ಕೃಷ್ಣ ಬೈರೇಗೌಡ- ಹಾವೇರಿ, ಡಿ.ಸುಧಾಕರ್‌- ಚಿಕ್ಕೋಡಿ, ಡಾ.ಎಂ.ಸಿ.ಸುಧಾಕರ್‌- ಬೆಳಗಾವಿ, ಕೆ.ಎಚ್‌.ಮುನಿಯಪ್ಪ- ರಾಯಚೂರು, ಕೆ.ವೆಂಕಟೇಶ್‌- ಬೀದರ್‌, ಎನ್‌. ಚಲುವರಾಯಸ್ವಾಮಿ- ಶಿವಮೊಗ್ಗ, ಡಾ.ಎಚ್.ಸಿ.ಮಹದೇವಪ್ಪ- ವಿಜಯಪುರ ಹಾಗೂ ಕೆ.ಎನ್‌.ರಾಜಣ್ಣ ಅವರನ್ನು ಬಾಗಲಕೋಟೆ ಕ್ಷೇತ್ರದ ಹೆಚ್ಚುವರಿ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.