ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಾದು ಹೋಗುವ ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ ಪ್ರಮುಖ ನಗರಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಗಳನ್ನು ಹಾಗೂ ಜಿಲ್ಲಾ ಮುಖ್ಯ ಸಂಪರ್ಕ ರಸ್ತೆಗಳನ್ನು ಮತ್ತು ಸೇತುವೆಗಳನ್ನು ಅಭಿವೃದ್ಧಿಪಡಿಸಲು ಶಾಸಕ ವಿ.ಸುನಿಲ್ ಕುಮಾರ್, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಪರಿಣಾಮವಾಗಿ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ಒಟ್ಟು 13 ಕೋಟಿ ರು. ಅನುದಾನ ಬಿಡುಗಡೆಯಾಗಿದೆ.ರಸ್ತೆಗಳು ಮತ್ತು ಸೇತುವೆಗಳು ಈ ಅನುದಾನದಲ್ಲಿ ಅಭಿವೃದ್ಧಿಗೊಂಡು ಸಾರ್ವಜನಿಕ ಸಂಚಾರಕ್ಕೆ ಇನ್ನಷ್ಟು ಅನುಕೂಲಕರವಾಗಲಿದೆ.
ಕಾರ್ಕಳ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಮಂಜೂರಾದ ಕಾಮಗಾರಿಗಳ ವಿವರ:ಮುದ್ರಾಡಿ - ಹೆಬ್ರಿ-ಬ್ರಹ್ಮಾವರ ರಾಜ್ಯ ಹೆದ್ದಾರಿ ಮುದ್ರಾಡಿ ಪೇಟೆಯಿಂದ ಜರುವತ್ತು ಸೇತುವೆ ವರೆಗೆ ರಸ್ತೆಯ ನವೀಕರಣಗೊಳಿಸಲು 120 ಲಕ್ಷ ರು., ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿ-37ರ ಚೆಂಡೆ ಬಸದಿ ಕ್ರಾಸ್-ಬಜಗೋಳಿ ವರೆಗೆ ರಸ್ತೆಯನ್ನು ನವೀಕರಣಗೊಳಿಸಲು 150 ಲಕ್ಷ ರು., ಕಾಂಜರಕಟ್ಟೆ - ಇನ್ನಾ - ಸಾಂತೂರು ಕೊಪ್ಪ ಮುಂಡೂರು ಕಜೆಮಾರಿಗುಡಿ-ಸಚ್ಚರಿಪೇಟೆ ಜಿಲ್ಲಾಮುಖ್ಯ ರಸ್ತೆಯನ್ನು ಅಭಿವೃದ್ಧಿಗೊಳಿಸಲು 100 ಲಕ್ಷ ರು., ಬೆಳುವಾಯಿ-ಕಾಂತಾವರ-ಮಂಜರಪಲ್ಕೆ ಜಿಲ್ಲಾಮುಖ್ಯ ರಸ್ತೆಯ ವಂಜಾರಕಟ್ಟೆಯಿಂದ ಬೋಪಾಡಿ ಸೇತುವೆ ವರೆಗೆ ರಸ್ತೆಯನ್ನು ಅಭಿವೃದ್ಧಿಗೊಳಿಸಲು 180 ಲಕ್ಷ ರು., ಅಜೆಕಾರು-ಹೆರ್ಮುಂಡೆ-ಜಾರ್ಕಳ-ಕೆರವಾಶೆ ಜಿಲ್ಲಾಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲು 250 ರು., ದುರ್ಗಾ-ಮುಂಡ್ಲಿ-ಶಿರ್ಲಾಲು ಜಿಲ್ಲಾಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲು 250 ಲಕ್ಷ ರು., ಮುಡಾರು ರಾಜ್ಯ ಹೆದ್ದಾರಿ ರಾಮೇರುಗುತ್ತು ಬಳಿ ಶಿಥಿಲಗೊಂಡಿರುವ ಕಿರಿದಾದ ಹಳೆಯ ಸೇತುವೆಯನ್ನು ಮರುನಿರ್ಮಿಸಲು 100 ಲಕ್ಷ ರು., ಬೆಳುವಾಯಿ-ಕಾಂತಾವರ-ಮಂಜರಪಲ್ಕೆ ಜಿಲ್ಲಾಮುಖ್ಯ ರಸ್ತೆಯಲ್ಲಿ ಅತಿಯಾದ ಮಳೆಯಿಂದ ಹಾನಿಗೊಂಡಿರುವ ಕಿರಿದಾದ ಸೇತುವೆಯನ್ನು (ಬರಬೈಲು) ಮರುನಿರ್ಮಿಸಲು 150 ಲಕ್ಷ ರು. ಬಿಡುಗಡೆ ಮಾಡಗಾಗಿದೆ ಎಂದು ಕಾರ್ಕಳ ವಿ. ಸುನೀಲ್ ಕುಮಾರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.