18ರಿಂದ ಕುಣಿಗಲ್ ನಲ್ಲಿ 13 ನಾಟಕಗಳ ಪ್ರದರ್ಶನ

| Published : Dec 17 2024, 12:45 AM IST

ಸಾರಾಂಶ

ಕುಣಿಗಲ್ ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ 18ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ 13 ದಿನ ಹಗಲು ಪೌರಾಣಿಕ ನಾಟಕೋತ್ಸವ ನಡೆಯಲಿದೆ ಎಂದು ಅಧ್ಯಕ್ಷ ಸಿದ್ದರಾಮೇಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್ ಕುಣಿಗಲ್ ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ 18ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ 13 ದಿನ ಹಗಲು ಪೌರಾಣಿಕ ನಾಟಕೋತ್ಸವ ನಡೆಯಲಿದೆ ಎಂದು ಅಧ್ಯಕ್ಷ ಸಿದ್ದರಾಮೇಗೌಡ ತಿಳಿಸಿದ್ದಾರೆ. ಕುಣಿಗಲ್ ಪಟ್ಟಣದ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾವಿದರ ಸಂಘ ಹಲವಾರು ಹಿರಿಯರ ಮತ್ತು ಕಲಾವಿದರ ಆಶ್ರಯದಲ್ಲಿ ಸತತ 18ನೇ ವರ್ಷ ಪೂರೈಸಿರುವ ಸವಿ ನೆನಪಿಗಾಗಿ 13 ದಿನಗಳ ಕಾಲ ಪೌರಾಣಿಕ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ಡಿಸೆಂಬರ್ 18ರ ಬುಧವಾರ ಹಾಗೂ 19ರ ಗುರುವಾರ ಕುರುಕ್ಷೇತ್ರ, 20ರ ಶುಕ್ರವಾರ ಕೃಷ್ಣ ಸಂಧಾನ 21ರ ಶನಿವಾರ ಹಾಗೂ ಭಾನುವಾರ ಕುರುಕ್ಷೇತ್ರ, 23ರ ಸೋಮವಾರ ಸತ್ಯ ಹರಿಶ್ಚಂದ್ರ 24ರ ಮಂಗಳವಾರ ಕುರುಕ್ಷೇತ್ರ 25ರ ಬುಧವಾರ ಸಂಪೂರ್ಣ ರಾಮಾಯಣ 26ರ ಗುರುವಾರ ದಾನಶೂರ ಕರ್ಣ 27ರ ಶುಕ್ರವಾರ ಸತ್ಯ ಹರಿಶ್ಚಂದ್ರ 28ರ ಶನಿವಾರ ವೀರ ಅಭಿಮನ್ಯು 29ರ ಭಾನುವಾರ ಸಂಪೂರ್ಣ ರಾಮಾಯಣ 30ರ ಸೋಮವಾರ ಕುರುಕ್ಷೇತ್ರ ಹೀಗೆ ಸತತ 13 ದಿನಗಳ ಕಾಲ ವಿಶೇಷ ನಾಟಕ ನಡೆಯಲಿದೆ ಎಂದರು,

ಕಲಾವಿದರು ಮತ್ತು ಕಲೆಯ ಉಳಿವಿಗಾಗಿ ಈ ರಂಗಭೂಮಿ ನಾಟಕೋತ್ಸವವನ್ನು ಏರ್ಪಡಿಸಲಾಗಿದ್ದು, ರಾಜ್ಯದ ವಿವಿಧ ಭಾಗ ಸೇರಿದಂತೆ ತುಮಕೂರು ಜಿಲ್ಲೆಯ ಹಲವಾರು ರಂಗ ತಂಡಗಳು ಭಾಗವಹಿಸಲಿವೆ ಎಂದರು.

ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಸಂಸದರಾದ ಡಾ. ಮಂಜುನಾಥ್, ಮಾಜಿ ಸಂಸದ ಡಿಕೆ ಸುರೇಶ್, ಶಾಸಕ ಡಾ.ರಂಗನಾಥ್, ಮುಖಂಡರಾದ ಮುದ್ದಹನುಮೇಗೌಡ, ಅಶ್ವತ ನಾರಾಯಣ, ಮಾಜಿ ಸಚಿವ ಡಿ ನಾಗರಾಜಯ್ಯ, ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್, ರಾಜೇಶ್ ಗೌಡ, ರಾಮಸ್ವಾಮಿಗೌಡ ಸೇರಿದಂತೆ ಹಲವಾರು ಗಣ್ಯರು ರಾಜಕೀಯ ಮುಖಂಡರು ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದರು.

ಕುಣಿಗಲ್ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿದಿನ ಬೆಳಿಗ್ಗೆ 10.30 ರಿಂದ ನಾಟಕಗಳು ಪ್ರಾರಂಭ ಆಗಲಿವೆ. ದಿನಕ್ಕೊಂದು ನಾಟಕ ನಡೆಯಲಿದ್ದು ನೋಡಲು ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಬಿಳಿ ದೇವಾಲಯ ತಿಮ್ಮಪ್ಪ ಪ್ರಧಾನ ಕಾರ್ಯದರ್ಶಿ ಶಂಕರ್ ಲಿಂಗೇಗೌಡ ನಿರ್ದೇಶಕ ರವಿ ಸೇರಿದಂತೆ ಇತರರು ಇದ್ದರು.