ಅಕ್ರಮ ಸಾಗಾಟ ಮಾಡುತ್ತಿದ್ದ 13ಟನ್ ಪಡಿತರ ಅಕ್ಕಿ ವಶ

| Published : Jul 31 2024, 01:00 AM IST

ಸಾರಾಂಶ

13 tons of ration rice which was being smuggled illegally was seized

-ಡಾಬಾ ರಾಮಣ್ಣ ವಿರುದ್ಧ ದೂರು ದಾಖಲಿಸಿದ ಆಹಾರ ಶಿರೇಸ್ತೆದಾರ್ ಗೀತಾಂಜನೇಯ

----

ಕನ್ನಡಪ್ರಭವಾರ್ತೆ, ಮೊಳಕಾಲ್ಮುರು

ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 13ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಬಿಜಿಕೆರೆ ಸಮೀಪದಲ್ಲಿ ನಡೆದಿದೆ.

ತಾಲೂಕಿನ ದೇವಸಮುದ್ರ ಹೋಬಳಿ ವ್ಯಾಪ್ತಿಯ ಮೇಗಳ ಕಣಿವೆ, ಕೆಳಗಡೆ ಕಣಿವೆ ಸುತ್ತಲಿನ ಹಳ್ಳಿಗಳಲ್ಲಿ ಪಡಿತರ ಪಡೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಲಾರಿಯಲ್ಲಿ ತುಂಬಿಕೊಂಡು ಬಿಜಿ ಕೆರೆ ಸಮೀಪದ ವೆ ಬ್ರಿಡ್ಜ್ ಬಳಿಯಲ್ಲಿ ನಿಂತಿದ್ದಾಗ, ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿರುವ ಪೋಲಿಸರ ತಂಡ 13 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಚಳ್ಳಕೆರೆ ಕಟಪ್ಪನ ಹಟ್ಟಿಯ ಓಬಳೇಶ್, ಅಕ್ಕಿ ತರಲು ತಿಳಿಸಿದ್ದ ಚಳ್ಳಕೆರೆ ಬಾಬಣ್ಣ, ಅಕ್ಕಿ ಸಂಗ್ರಹಿಸಿದ್ದ ತಾಲೂಕಿನ ಬೊಮ್ಮದೇವರ ಹಳ್ಳಿಯ ಎಚ್.ಹಿರಾಳಪ್ಪ, ಸಂಡೂರು ತಾಲೂಕಿನ ಎಸ್.ಬಸಾಪುರ ಗ್ರಾಮದ ಡಾಬಾ ರಾಮಣ್ಣ ಎನ್ನುವವರ ಮೇಲೆ ಆಹಾರ ಶಿರೇಸ್ತೆದಾರ್ ಗೀತಾಂಜನೇಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವೇಳೆ ಪಿಎಸ್ ಐ ಗಳಾದ ಜಿ.ಪಾಂಡುರಂಗ, ಈರೇಶ, ಹೆಡ್ ಕಾನ್ಸ್ ಟೇಬಲ್ ಸಿ.ಆನಂದ ನಾಯ್ಕ, ಆಹಾರ ಶಿರಸ್ತೇದಾರ್ ಗೀತಾಂಜನೇಯ ಕಂದಾಯ ಇಲಾಖೆ ಮಲ್ಲಿಕಾರ್ಜುನ ಇದ್ದರು.-------