ಹದಿಮೂರು ವರ್ಷದ ಬಾಲಕನ ತಲೆಗೆ ಕಲ್ಲಿನಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಮೇಶ್‌ ನಗರದ ಆಟೋ ಚಾಲಕ ಅತಾವುಲ್ಲಾ ದಂಪತಿ ಪುತ್ರ ಮೊಹಮ್ಮದ್ ಅರಾಫತ್‌ (13) ಕೊಲೆಯಾದ ದುರ್ದೈವಿ.

ಬೆಂಗಳೂರು : ಹದಿಮೂರು ವರ್ಷದ ಬಾಲಕನ ತಲೆಗೆ ಕಲ್ಲಿನಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಮೇಶ್‌ ನಗರದ ಆಟೋ ಚಾಲಕ ಅತಾವುಲ್ಲಾ ದಂಪತಿ ಪುತ್ರ ಮೊ

ರಮೇಶ್‌ ನಗರದ ಆಟೋ ಚಾಲಕ ಅತಾವುಲ್ಲಾ ದಂಪತಿ ಪುತ್ರ ಮೊಹಮ್ಮದ್ ಅರಾಫತ್‌ (13) ಕೊಲೆಯಾದ ದುರ್ದೈವಿ. ಈ ಹತ್ಯೆಯಲ್ಲಿ ಮೃತನ ಪರಿಚಿತರ ಕೈವಾಡ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಭೂತಿಕೆರೆ ಏರಿ ಸಮೀಪ ನಿಗೂಢವಾಗಿ ಹತ್ಯೆ

ವಿಭೂತಿಕೆರೆ ಏರಿ ಸಮೀಪ ಭಾನುವಾರ ಅರಾಫತ್ ನಿಗೂಢವಾಗಿ ಹತ್ಯೆಗೀಡಾಗಿದ್ದಾನೆ. ಏರಿ ಬಳಿ ಅಪರಿಚಿತ ಮೃತದೇಹ ಕಂಡು ಪೊಲೀಸ್ ನಿಯಂತ್ರಣ ಕೊಠಡಿಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತನ ಭಾವಚಿತ್ರ ತೆಗೆದು ಸುತ್ತಮುತ್ತಲು ಹಂಚಿದಾಗ ಕೊನೆಗೆ ಹತ್ಯೆಗೀಡಾದ ಬಾಲಕನ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಮೇಶ್‌ ನಗರದಲ್ಲಿ ತನ್ನ ಪತ್ನಿ ಹಾಗೂ ಮಕ್ಕಳ ಜತೆ ಅತಾವುಲ್ಲಾ ನೆಲೆಸಿದ್ದು, ಆಟೋ ಓಡಿಸಿಕೊಂಡು ಅವರು ಜೀವನ ಸಾಗಿಸುತ್ತಿದ್ದಾರೆ. ಮನೆ ಸಮೀಪದ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅರಾಫತ್ ಓದುತ್ತಿದ್ದ. ಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಮನೆ ಹತ್ತಿರದ ಕೆರೆ ಬಳಿ ಭಾನುವಾರ ಆತ ಹೋಗಿದ್ದಾಗ ಕೊಲೆ ನಡೆದಿದೆ. ಈ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.