ಕ್ಯಾನ್ಸರ್ ಪೀಡಿತರಿಗಾಗಿ ಬಾಲಕಿ ಕೇಶದಾನ

| Published : Oct 09 2023, 12:45 AM IST

ಸಾರಾಂಶ

ಕ್ಯಾನ್ಸರ್ರ್‌ ಪೀಡಿತರಿಗೆ ಕೇಶದಾನ ಮಾಡಿದ ಬಾಲಕಿ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಅಶ್ವತ್ಥಪುರ ದ 13 ರ ಹರೆಯದ ಬಾಲಕಿ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಶ್ವತ್ಥಪುರ ಮೂಡುಪಲ್ಲ ಮನೆಯ ಜೋಯ್ ಐವನ್ ಡಿ''''ಸೋಜ-ವಿನೋದ ದಂಪತಿಯ ಪುತ್ರಿ ಜೆಸ್ವಿಟಾ ಡಿ''''ಸೋಜಾ ತನ್ನ ಉದ್ದನೆಯ ಕೂದಲಿನ ಅರ್ಧದಷ್ಟನ್ನು ಕತ್ತರಿಸಿ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದಾಕೆ. ಪತ್ರಿಕೆ ಸಹಿತ ಇತರ ಮಾಧ್ಯಗಳಲ್ಲಿ ಕೆಲ ದಾನಿಗಳು ಕ್ಯಾನ್ಸರ್ ಪೀಡಿತರಿಗೆ ಕೂದಲನ್ನು ನೀಡಿ ಸಹಕಾರ ನೀಡುತ್ತಿರುವುದನ್ನು ಗಮನಿಸಿರುವ ಜೊಸ್ವಿಟಾ ತಾನು ಕೂಡಾ ಕ್ಯಾನ್ಸರ್ ಪೀಡಿತರಿಗೆ ಕೂದಲನ್ನು ನೀಡಿ ಸಹಾಯ ಮಾಡಬೇಕೆಂಬ ಸಂಕಲ್ಪವನ್ನು ಕೈಗೊಂಡಿದ್ದಳು ಅದರಂತೆ ಬೆಳ್ಮಣಿನ ಹ್ಯೂಮಾನಿಟಿ ಸಂಸ್ಥೆಗೆ ತನ್ನ ಕೇಶ ನೀಡಿದ್ದಾರೆ.