ಕನ್ನಡಪ್ರಭ ವಾರ್ತೆ ಮದ್ದೂರು

ಆತಗೂರು ಭಾಗದ ಎಲ್ಲಾ ಕೆರೆಗಳ ಅಭಿವೃದ್ಧಿಗೆ 130 ಕೋಟಿ ರು. ಬಿಡುಗಡೆಯಾಗಿದೆ. ಶೀಘ್ರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಸೋಮನಹಳ್ಳಿ ಏತ ನೀರಾವರಿ ಯೋಜನೆ, ಕೆ.ಕೋಡಿಹಳ್ಳಿ ಬಳಿ ಶಿಂಷಾನದಿಗೆ ಅಡ್ಡಲಾಗಿ 4.50ಕೋಟಿ ರು. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಆತಗೂರು ಹೋಬಳಿ ವ್ಯಾಪ್ತಿ ಎಲ್ಲಾ ಕೆರೆಗಳು ನಿರ್ಮಾಣವಾದ ಕಾಲದಿಂದಲೂ ಅಭಿವೃದ್ಧಿ ಕಾಣದೆ ಕೆರೆ ಏರಿ, ತೂಬು, ಮೇಲಿನ ಪಕ್ಕದ ರಸ್ತೆಗಳು ಸಂಪೂರ್ಣ ಹಾಳಾಗಿದ್ದವು. ಅವುಗಳ ಸಂಪೂರ್ಣ ಅಭಿವೃದ್ಧಿಗೆ 130 ಕೋಟಿ ರು. ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ ಎಂದರು.

ಈ ಒಂದು ಚೆಕ್ ಡ್ಯಾಂ ನಿರ್ಮಾಣದಿಂದ ಸೋಮನಹಳ್ಳಿಸ ಕೊಡಹಳ್ಳಿ, ಆಗರಲಿಂಗದೊಡ್ಡಿಸ ತೈಲೂರು, ಸೋಮನಹಳ್ಳಿ ಏತ ನೀರಾವರಿಯಿಂದ ಕೆರೆಗಳಿಗೆ ನೀರು ತುಂಬಿಸಬಹುದು. ಮಳೆಗಾಲದಲ್ಲಿ ಅಲ್ಲದೇ, ಬೇಸಿಗೆಗಾಲದಲ್ಲೂ ನೀರಿನ ಸಮಸ್ಯೆ ಆಗದಂತೆ ಬಗೆಹರಿಸಲು ಈ ಯೋಜನೆ ತರಲಾಗಿದೆ. ಇದರಿಂದ ಈ ಭಾಗದ ಎಲ್ಲಾ ಬೋರ್ ವೆಲ್ ಗಳಲ್ಲಿ ಅಂತರ್ಜಲ ಹೆಚ್ಚಾಗಲಿದೆ ಎಂದರು.


ಇನ್ನೂ ಮೂರು ತಿಂಗಳಲ್ಲಿ ಈ ವ್ಯಾಪ್ತಿಯ ಬನ್ನಹಳ್ಳಿ ಏತನೀರಾವರಿ ಯೋಜನೆ ಪೂರ್ಣಗೊಂಡು ಕೆ.ಹೊನ್ನಲಗೆರೆ ವ್ಯಾಪ್ತಿಯ 17 ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಭಾಗದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸೇರಿ ಇನ್ನಿತರ ಸಮಸ್ಯೆಗಳು ಕಂಡು ಬಂದಿದೆ. ಇದನ್ನು ಪರಿಹರಿಸಲು ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಈಗಾಗಲೇ ವಿದ್ಯುತ್ ಸೋಮನಹಳ್ಳಿ ಬಳಿ ಸಬ್ ಟೇಷನ್ ನಿರ್ಮಾಣ ಹಂತದಲ್ಲಿದೆ ಎಂದರು.

ಕೆರೆಗಳ ಅಭಿವೃದ್ಧಿ ನಾಳೆಗಳ ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ನಾಲೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಸೋಮನಹಳ್ಳಿ, ಕೊಡಹಳ್ಳಿ, ಅಗರಲಿಂಗನದೊಡ್ಡಿ ಗ್ರಾಮಗಳು ಈಗಾಗಲೇ ನಗರಸಭೆಗೆ ಸೇರಿದ್ದರೂ ಸಹ ಶೇ.95ರಷ್ಟು ಈ ಭಾಗದಲ್ಲಿ ವ್ಯವಸಾಯ ಮಾಡುವ ರೈತರ ಇದ್ದು, ಈ ಭಾಗದ ರೈತರಿಗೆ ಅನುಕೂಲವಾಗುವ ಎಲ್ಲಾ ಸೌಕರ್ಯಗಳನ್ನು ಮಾಡಿಕೊಡಲಾಗುತ್ತದೆ ಎಂದರು.

ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ ಸಂದರ್ಶ, ಯೂನಿಯನ್ ಬ್ಯಾಂಕ್ ನಿರ್ದೇಶಕ ಆರ್.ಸಿ.ಮಹೇಶ್, ಹಳ್ಳಿಕೆರೆ ಎಚ್.ಎಲ್.ಸತೀಶ್, ತೈಲೂರು ರಘು, ಸಿಪಾಯಿ ಶ್ರೀನಿವಾಸ್, ಪೊಲೀಸ್ ರವಿ, ವೆಂಕಟೇಶ್, ಸುರೇಶ್, ಕೆ.ಸೀನಯ್ಯ, ಶಂಕರ್, ಹನುಮೇಗೌಡ, ಅಪ್ಪೇಗೌಡ, ಪುಟ್ಟಪ್ಪ, ರಾಜೇಂದ್ರ, ಅರುವನಹಳ್ಳಿ ಸಿದ್ದರಾಜು, ವಿಜಯ್ ಕುಮಾರ್, ಶಿವು ಚರಣ್, ಜಗದೀಶ್, ಉಮಾಶಂಕರ್, ಅಭಿ, ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.ಜಿಲ್ಲೆ ಸಹಕಾರ ಒಕ್ಕೂಟದ ನೂತನ ನಿರ್ದೇಶಕ ಮಹೇಶ್ ಶಾಸಕರಿಗೆ ಅಭಿನಂದನೆ

ಕನ್ನಡಪ್ರಭ ವಾರ್ತೆ ಮದ್ದೂರುಮಂಡ್ಯ ಜಿಲ್ಲೆ ಸಹಕಾರ ಒಕ್ಕೂಟದ ನೂತನವಾಗಿ ನಿರ್ದೇಶಕರಾಗಿ ಆಯ್ಕೆಗೆ ಕಾರಣರಾದ ಶಾಸಕ ಕೆ.ಎಂ.ಉದಯ್ ಅವರನ್ನು ನೂತನ ನಿರ್ದೇಶಕ ಆರ್.ಸಿ.ಮಹೇಶ್ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿದ ಶಾಸಕ ಉದಯ್ ಅವರು, ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾದ ನಿರ್ದೇಶಕರು ಸಂಘಗಳಿಗೆ ಬೇಕಾದ ಎಲ್ಲಾ ರೀತಿಯ ಸಹಕಾ ನೀಡಿ ಅಭಿವೃದ್ಧಿಗೆ ಸಹಕಾರಿಯಾಗಿರಬೇಕು ಎಂದರು.ನೂತನ ನಿರ್ದೇಶಕ ಮಹೇಶ್ ಮಾತನಾಡಿ. ತಾಲೂಕಿನ ಎಲ್ಲಾ ಸಹಕಾರ ಸಂಘಗಳು ವತಿಯಿಂದ ನನಗೆ 19 ಮತಗಳನ್ನು ನೀಡಿ ಭರ್ಜರಿ ಗೆಲುವು ಸಾಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಗೆಲುವಿಗೆ ಕಾರಣರಾದ ಸಹಕಾರ ಸಂಘದವರಿಗೆ ಚಿರಋಣಿಯಾಗಿರುತ್ತೇನೆ ಎಂದರು.

ಈ ವೇಳೆ ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ ಸಂದರ್ಶ, ಕೊಪ್ಪ ಜೋಗಿಗೌಡ, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರ್ ರಾಜೀವ್, ಮುಖಂಡರಾದ ರವಿ, ಪ್ರಕಾಶ್, ವಿಜಯ್ ಕುಮಾರ್, ವೆಂಕಟೇಶ್, ತಿಮ್ಮೇಗೌಡ, ಶಿವಚರಣ್, ಡಾಬಾ ಮಹೇಶ್, ಪುನೀತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.