ಚಿಕ್ಕಮಗಳೂರುನಾಗಪುರದ ದೀಕ್ಷಾಭೂಮಿ ಯಾತ್ರೆಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಿಂದ ಈ ಬಾರಿ 137 ಮಂದಿ ತೆರಳಲಿದ್ದು, ಅ.19 ರಿಂದ ಐದು ದಿನಗಳ ಯಾತ್ರೆ ಕೈಗೊಳ್ಳಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆಯೋಜಿಸಿರುವ ಈ ಯಾತ್ರೆಗೆ ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣಗೊಂಡಿದೆ.

ಮಹಾರಾಷ್ಟ್ರದ ನಾಗಪುರದ ದೀಕ್ಷಾಭೂಮಿ, ಡಾ. ಬಿ.ಆರ್. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ಐತಿಹಾಸಿಕ ಸ್ಥಳ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಾಗಪುರದ ದೀಕ್ಷಾಭೂಮಿ ಯಾತ್ರೆಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಿಂದ ಈ ಬಾರಿ 137 ಮಂದಿ ತೆರಳಲಿದ್ದು, ಅ.19 ರಿಂದ ಐದು ದಿನಗಳ ಯಾತ್ರೆ ಕೈಗೊಳ್ಳಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆಯೋಜಿಸಿರುವ ಈ ಯಾತ್ರೆಗೆ ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣಗೊಂಡಿದೆ.ಮಹಾರಾಷ್ಟ್ರದ ನಾಗಪುರದಲ್ಲಿರುವ ದೀಕ್ಷಾಭೂಮಿ, ಡಾ. ಬಿ.ಆರ್. ಅಂಬೇಡ್ಕರ್ ಅವರು 1956ರ ಅ.14ರಂದು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ಐತಿಹಾಸಿಕ ಸ್ಥಳ. ಈ ಘಟನೆ ಸ್ಮರಣಾರ್ಥ ಪ್ರತಿ ವರ್ಷ ಅಕ್ಟೋಬರ್‌ ನಲ್ಲಿ ಇಲ್ಲಿ ಧಮ್ಮಚಕ್ರ ಪ್ರವರ್ತನ ದಿನ ಆಚರಿಸಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಅಂಬೇಡ್ಕರ್ ಅನುಯಾಯಿಗಳು ದೀಕ್ಷಾಭೂಮಿಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ.

ಆರ್ಥಿಕ ಕಾರಣಗಳಿಂದ ದೀಕ್ಷಾಭೂಮಿಗೆ ಭೇಟಿ ನೀಡಲು ಸಾಧ್ಯವಾಗದವರಿಗೂ ಈ ಐತಿಹಾಸಿಕ ಸ್ಥಳ ವೀಕ್ಷಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಯಾತ್ರೆ ಆಯೋಜಿಸುತ್ತಿದೆ. ಯಾತ್ರಾರ್ಥಿಗಳ ಸಾರಿಗೆ ವೆಚ್ಚ ಸರ್ಕಾರವೇ ಭರಿಸಲಿದೆ.155 ಮಂದಿಯ ಗುರಿ; 137 ಅರ್ಜಿಪ್ರಸಕ್ತ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ 155 ಮಂದಿಯನ್ನು ಯಾತ್ರೆಗೆ ಕಳುಹಿಸುವ ಗುರಿ ನಿಗದಿಪಡಿಸಲಾಗಿತ್ತು. ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಕೇವಲ 137 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಲತಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸೆ.19ರಿಂದ ಅ.9ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ನಿರೀಕ್ಷಿತ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಅವಧಿಯನ್ನು ಅ.14ರವರೆಗೆ ವಿಸ್ತರಿಸಲಾಗಿತ್ತು. ಆದರೂ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ...ಬಾಕ್ಸ್....ಐರಾವತ ಬಸ್‌ಗೆ ಮನವಿ; ಖಾಸಗಿ ಬಸ್‌ ಮೊರೆ

ಯಾತ್ರೆ ಆರಂಭದ ವರ್ಷದಲ್ಲಿ ಸಾರಿಗೆ ಸಂಸ್ಥೆ ವೇಗದೂತ ಬಸ್‌ಗಳನ್ನು ಬಳಸಲಾಗಿತ್ತು. ದೂರದ ಪ್ರಯಾಣಕ್ಕೆ ಅವು ಅನುಕೂಲಕರವಾಗಿಲ್ಲ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಬಳಿಕ ರಾಜಹಂಸ ಬಸ್‌ಗಳ ಬಳಕೆಗೆ ಅವಕಾಶ ಕಲ್ಪಿಸ ಲಾಯಿತು. ಇದೀಗ ಚಿಕ್ಕಮಗಳೂರಿನ ವಿವಿಧ ದಲಿತ ಸಂಘರ್ಷ ಸಮಿತಿಗಳು ಯಾತ್ರಾರ್ಥಿಗಳಿಗೆ ಐರಾವತ ಬಸ್‌ಗಳ ವ್ಯವಸ್ಥೆ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿವೆ.

ಆದರೆ, ದಸರಾ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರಿಗೆ ಸಂಸ್ಥೆಗಳ ಬಸ್‌ಗಳ ಕೊರತೆ ಎದುರಾಗುವ ಸಾಧ್ಯತೆ ಇರು ವುದರಿಂದ, ಯಾತ್ರೆಗೆ ಖಾಸಗಿ ಬಸ್‌ಗಳನ್ನು ಬಾಡಿಗೆ ಪಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.--- ಬಾಕ್ಸ್‌.....

ಅಂಬೇಡ್ಕರ್ ಚಿಂತನೆಗಳ ಪರಿಚಯವೇ ಉದ್ದೇಶ:

ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಹೋರಾಟ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಸಮಾನತೆ ಸಂದೇಶ ವನ್ನು ಜನರಿಗೆ ಪರಿಚಯಿಸುವುದು ದೀಕ್ಷಾಭೂಮಿ ಯಾತ್ರೆ ಪ್ರಮುಖ ಉದ್ದೇಶ. ಜಾತಿ ತಾರತಮ್ಯ ನಿರ್ಮೂಲನೆ, ಶಿಕ್ಷಣ, ಸ್ವಾಭಿಮಾನ ಮತ್ತು ಮಾನವೀಯ ಮೌಲ್ಯಗಳ ಕುರಿತು ಅವರು ಪ್ರತಿಪಾದಿಸಿದ ವಿಚಾರ ಅರಿಯಲು ಈ ಯಾತ್ರೆ ಅವಕಾಶ ಕಲ್ಪಿಸುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ದೀಕ್ಷಾಭೂಮಿ ಐತಿಹಾಸಿಕ ಮಹತ್ವ ತಿಳಿಸುವ ಜತೆಗೆ, ಅಂಬೇಡ್ಕರ್ ಅವರ ಸಾಮಾಜಿಕ ಪರಿವರ್ತನೆ ಹೋರಾಟದ ಬಗ್ಗೆ ಅರಿವು ಮೂಡಿಸುವುದು ಇಲಾಖೆ ಆಶಯವಾಗಿದೆ.--- ಬಾಕ್ಸ್‌....

ಜಿಲ್ಲೆಯ ಯಾತ್ರಾರ್ಥಿಗಳ ವಿವರ

ವರ್ಷ. ಯಾತ್ರಾರ್ಥಿಗಳ ಸಂಖ್ಯೆ

2023-24| 140

2024-25| 140

2025-26| 122

2026-27| 137

....ಕೋಟ್...

ದೀಕ್ಷಾಭೂಮಿ ಯಾತ್ರೆ ಕುರಿತು ಸರ್ಕಾರ ಮತ್ತು ಅಧಿಕಾರಿಗಳನ್ನು ಇನ್ನಷ್ಟು ತಿಳಿಸಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಆಗ ಇನ್ನಷ್ಟು ಸಂಖ್ಯೆಯಲ್ಲಿ ಜನರು ಯಾತ್ರೆಗೆ ತೆರಳುವುದಕ್ಕೆ ಆಗಮಿಸಲಿದ್ದಾರೆ.

ಆರ್.ಅನಿಲ್‌ಕುಮಾರ್

ಜಿಲ್ಲಾಧ್ಯಕ್ಷ, ಭಾರತೀಯ ಬೌದ್ಧ ಮಹಾಸಭಾ‌, ಚಿಕ್ಕಮಗಳೂರು.