2026ರ ದಿನದರ್ಶಿಕೆ ಬಿಡುಗಡೆ ಮಾಡಿದ ನಿವೃತ್ತ ವೈದ್ಯೆ ಡಾ ಜಿ. ಎ. ಲತಾ ತಮ್ಮ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡು ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 1 ಲಕ್ಷ ಹಣವನ್ನು ವಿಪ್ರವೃಂದಕ್ಕೆ ದೇಣಿಗೆಯಾಗಿ ನೀಡಿದರು. ಸ್ಮರಣ ಸಂಚಿಕೆ ಬಿಡುಗಡೆಮಾಡಿದ ಟೆಲಿಕಾಂ ಸಂಸ್ಥೆಯ ನಿವೃತ್ತ ಡೈರೆಕ್ಟರ್ ಜನರಲ್ ಜಿ.ಆರ್‌. ರವಿ ದೂರ ಸಂಪರ್ಕ ಕ್ಷೇತ್ರದ ಅಗಾದ ಬೆಳವಣಿಗೆ ಹಾಗೂ ತಮ್ಮ ವೃತ್ತಿ ಬದುಕಿನ ಅನುಭವಗಳನ್ನು ಹಂಚಿಕೊಂಡರು. ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ವಿವಿಧ ಕ್ಷೇತ್ರದ ಸಾಧಕರು, ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಅರಕಲಗೂಡುಜೋಡಿಗುಬ್ಬಿ ವಿಪ್ರವೃಂದ ನಡೆಸುತ್ತಿರುವ ಸಾಮಾಜಿಕ ಕಾರ್ಯಗಳು ಅನುಕರಣೀಯವಾಗಿದ್ದು ಇತರರಿಗೆ ಮಾದರಿಯಾಗಿದೆ ಎಂದು ಆರೋಗ್ಯ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎ. ವಿ.ಪ್ರಸನ್ನ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಬಬ್ಬೂರು ಕಮ್ಮೆ ಸೇವಾ ಸಮಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಜೋಡಿಗುಬ್ಬಿ ವಿಪ್ರವೃಂದದ 13ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಾಸನ ಜಿಲ್ಲೆಯ ಕುಗ್ರಾಮವೊಂದರ ಜನರು ಬೆಂಗಳೂರಿನಲ್ಲಿ ಸಂಘಟಿತರಾಗಿ ಸಮುದಾಯ ಹಾಗೂ ಗ್ರಾಮದ ಒಳಿತಿಗಾಗಿ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಜತೆಗೆ ವರ್ಷಕ್ಕೊಮ್ಮೆ ಸಮಾವೇಶ ಆಯೋಜಿಸಿ ಸಮುದಾಯದ ಎಲ್ಲರೂ ಒಗ್ಗೂಡುವಂತೆ ಮಾಡುತ್ತಿರುವುದಲ್ಲದೆ, ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ವಿಪ್ರವೃಂದದ ಅಧ್ಯಕ್ಷ ಜಿ. ಎನ್. ರಾಮಚಂದ್ರ ಮಾತನಾಡಿ, 2011ರಲ್ಲಿ ಪ್ರಾರಂಭವಾದ ನಮ್ಮ ಸಂಸ್ಥೆ ದಾನಿಗಳ ನೆರವಿನಿಂದ ನಿರಂತರವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ನಡೆಸುತ್ತಿದ್ದು 10 ವರ್ಷಗಳಲ್ಲಿ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶೈಕ್ಷಣಿಕ ಸಹಾಯ ಪಡೆದು ಬದುಕು ರೂಪಿಸಿಕೊಂಡಿದ್ದಾರೆ. ಜೋಡಿಗುಬ್ಬಿ ಗ್ರಾಮದಲ್ಲಿ ದೇವಾಲಯ ಅಭಿವೃದ್ಧಿ, ರಾಮಮಂದಿರ, 25 ಲಕ್ಷ ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣ ಗ್ರಾಮೀಣ ಜನರಿಗೆ ಆರೋಗ್ಯ ಶಿಬಿರ, ಹೆಣ್ಣುಮಕ್ಕಳ ಆರೋಗ್ಯರಕ್ಷಣೆ ಕುರಿತು ಕಾಳಜಿ ಮುಂತಾದ ಕಾರ್ಯಗಳನ್ನು ನಡೆಸುತ್ತಿದೆ. ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳಲು ದಾನಿಗಳು ನೆರವು ನೀಡುವಂತೆ ಮನವಿ ಮಾಡಿದರು. 2026ರ ದಿನದರ್ಶಿಕೆ ಬಿಡುಗಡೆ ಮಾಡಿದ ನಿವೃತ್ತ ವೈದ್ಯೆ ಡಾ ಜಿ. ಎ. ಲತಾ ತಮ್ಮ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡು ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 1 ಲಕ್ಷ ಹಣವನ್ನು ವಿಪ್ರವೃಂದಕ್ಕೆ ದೇಣಿಗೆಯಾಗಿ ನೀಡಿದರು. ಸ್ಮರಣ ಸಂಚಿಕೆ ಬಿಡುಗಡೆಮಾಡಿದ ಟೆಲಿಕಾಂ ಸಂಸ್ಥೆಯ ನಿವೃತ್ತ ಡೈರೆಕ್ಟರ್ ಜನರಲ್ ಜಿ.ಆರ್‌. ರವಿ ದೂರ ಸಂಪರ್ಕ ಕ್ಷೇತ್ರದ ಅಗಾದ ಬೆಳವಣಿಗೆ ಹಾಗೂ ತಮ್ಮ ವೃತ್ತಿ ಬದುಕಿನ ಅನುಭವಗಳನ್ನು ಹಂಚಿಕೊಂಡರು. ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ವಿವಿಧ ಕ್ಷೇತ್ರದ ಸಾಧಕರು, ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು. ಗಮಕ ವಿದ್ವಾಂಸೆ ನಿರ್ಮಲಾ ಪ್ರಸನ್ನ, ನರಸಿಂಹಯ್ಯ, ಶ್ಯಾಮಸುಂದರ್‌, ರಾಜೇಶ್ವರಿ, ನಾಗುಪ್ರವೀಣ್, ಸುರೇಶ್ ಜಮದಗ್ನಿ, ವೆಂಕಟಸುಬ್ಬಯ್ಯ, ಎ.ವಿ. ನಾಗೇಶ್ ಉಪಸ್ಥಿತರಿದ್ದರು.