ಸಾರಾಂಶ
ದಾಂಡೇಲಿ:
ನೀರಿನ ಸಮಸ್ಯೆ ಎದುರಿಸಲು ಜಿಲ್ಲೆಗೆ ₹ ೧೪.೫೦ ಕೋಟಿ ಬಿಡುಗಡೆಯಾಗಿದ್ದು, ಅಧಿಕಾರಿಗಳು ಜನರ ಅವಶ್ಯಕತೆಕ್ಕೆ ಅನುಗುಣವಾಗಿ ಯೋಜನೆ ಸಿದ್ಧಪಡಿಸಿ, ಸಮರ್ಷಕವಾಗಿ ಹಣ ವಿನಿಯೋಗಿಸಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.ಅವರು ದಾಂಡೇಲಿಯ ತಹಸೀಲ್ದಾರ್ ಕಚೇರಿಯಲ್ಲಿ ೨೦೨೩-೨೪ನೇ ಸಾಲಿನ ಬರಪೀಡಿತ ಹಳಿಯಾಳ-ದಾಂಡೇಲಿ-ಜೋಯಿಡಾ ತಾಲೂಕಿನ ಬರಗಾಲ ಮತ್ತು ಕುಡಿಯುವ ನೀರು ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.ಜೋಯಿಡಾ, ಹಳಿಯಾಳ, ದಾಂಡೇಲಿ ತಾಲೂಕಿನಲ್ಲಿ ಬರಗಾಲದಿಂದ ತೊಂದರೆಗೊಳಗಾದ ಪ್ರದೇಶದ ಜನರ, ರೈತರ ಸಮಸ್ಯೆ ಗುರುತಿಸಿ ಕುಡಿಯುವ ನೀರಿನ ತೊಂದರೆ, ಜಾನುವಾರುಗಳಿಗೆ ಮೇವಿನ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಕೈಕೊಳ್ಳಬೇಕು ಎಂದ ದೇಶಪಾಂಡೆ, ಅವಶ್ಯ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ದಾಂಡೇಲಿ-ಹಳಿಯಾಳ ರಸ್ತೆ ಕೆಟ್ಟಿರುವ ಬಗ್ಗೆ ಪ್ರಸ್ತಾಪಿಸಿದ ಅವರು ಗುತ್ತಿಗೆದಾರರಿಗೆ ಶೀಘ್ರದಲ್ಲಿ ಪೈಪ್‌ಲೈನ್ ಕೆಲಸ ಮುಗಿಸಿ ಲೋಕೊಪಯೋಗಿ ಇಲಾಖೆಗೆ ರಸ್ತೆ ಕಾರ್ಯ ಆರಂಭಿಸಲು ತಿಳಿಸಿದರು.ಅಮೃತ ಯೋಜನೆಯಡಿ ಹಳಿಯಾಳ ಪಟ್ಟಣಕ್ಕೆ ₹ ೬೨ ಕೋಟಿ ವೆಚ್ಚದಲ್ಲಿ ಹಳಿಯಾಳ ನೀರು ಸರಬರಾಜು ಯೋಜನೆ ಅಡಿ ಹಾಲಿ ಇರುವ ಜಾಕ್‌ವೆಲ್‌ನಲ್ಲಿ ಪಂಪ್ ಬದಲಾಯಿಸಿ ಹೊಸ ಪಂಪ್ ಅಳವಡಿಸುವುದು ಹಾಗೂ ಜಾಕವೆಲ್ ನೀರು ಶುದ್ಧೀಕರಣ ಘಟಕದ ವರೆಗೆ, ನಂತರ ನೀರು ಶುದ್ಧೀಕರಣ ಘಟಕದಿಂದ ಹಳಿಯಾಳ ಮರಳಿ ಗುಡ್ಡದಲ್ಲಿರುವ ಟ್ಯಾಂಕರ್ ವರೆಗೆ ಹೊಸ ೪೦೬ ಮಿ.ಮಿ ವ್ಯಾಸದ ಎಂಎಸ್ .ಕೊಳವೆ ಮಾರ್ಗ (೨೩ ಕೀಮಿ)ದ ನಿರ್ಮಾಣಕ್ಕೆ ಸಮ್ಮತಿ ದೊರೆತ್ತಿದುಆದಷ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸುವ ಸಾಧ್ಯತೆಯಿದೆ ಎಂದರು.ಸಭೆಯಲ್ಲಿ ತಹಸೀಲ್ದಾರ್‌ಗಳಾದ ಶೈಲೇಶ ಪರಮಾನಂದ, ಭಾಗವಾನ, ಮಂಜುನಾಥ ಮುನವಳ್ಳಿ, ಪೌರಾಯುಕ್ತ ರಾಜಾರಾಮ ಪವಾರ, ದಾಂಡೇಲಿ ತಾಪಂನ ಪ್ರಕಾಶ ಹಾಲಮ್ಮನವರ, ಆನಂದ ಬಾಳೆಕುಂದ್ರಿ, ಹಳಿಯಾಳದ ಪ್ರಕಾಶ ಗಸ್ತಿ, ಅಂಬಿಕಾನಗರ ಚೀಫ್ ಎಂಜಿನಿಯರ್ ಶಿರಾಳಿ, ಲೋಕೊಪಯಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುಧಾಕರ ಕಟ್ಟಿಮನಿ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಆಧಿಕಾರಿಗಳು ಉಪಸ್ಥಿತರಿದ್ದರು.ಇದೇ ವೇಳೆ ಶಾಸಕರು ರೈತರ ಜಾನುವಾರುಗಳಿಗೆ ಮೇವು ಬೆಳೆಯಲು ಉಚಿತವಾಗಿ ಮೆಕ್ಕಿಜೋಳ ಬೀಜ ವಿತರಿಸಿದರು.