ಸಾರಾಂಶ
ಆಸಕ್ತ ಯುವಜನರು ಹಾಗೂ ಮಹಿಳೆಯರಿಗೆ ತಮ್ಮ ಬಳಗದಿಂದ ಮುಂದೆ ಏರ್ಪಡಿಸಲಿರುವ ತರಬೇತಿ, ಕಾರ್ಯಾಗಾರಗಳಲ್ಲಿ ನಾಟಕ-ನೃತ್ಯ-ಸಂಗೀತ ಹಾಗೂ ಸಾಹಿತ್ಯ ರಚನೆಯ ತರಬೇತಿ ಕೊಡುವುದಾಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಿವಿ ಮೊಹಲ್ಲಾದ ನೃತ್ಯ ಕಲಾವಿದೆ ಎಚ್.ಎಸ್. ಯದುಗಿರಿ ಅವರ ಮನೆಯಲ್ಲಿ ನಡೆದ ಅಭಿರುಚಿ ಬಳಗದ 144ನೇ ಕಾರ್ಯಕ್ರಮ ನಡೆಯಿತು.ಅಭಿರುಚಿ ಬಳಗದ ಸಂಸ್ಥಾಪಕ ಅಧ್ಯಕ್ಷ ಎನ್.ವ್ಹಿ. ರಮೇಶ್ ಮಾತನಾಡಿ, ತಮ್ಮ 4 ಸಂಸ್ಥೆಗಳ ಸದಸ್ಯರೊಂದಿಗೆ ಆಸಕ್ತ ಯುವಜನರು ಹಾಗೂ ಮಹಿಳೆಯರಿಗೆ ತಮ್ಮ ಬಳಗದಿಂದ ಮುಂದೆ ಏರ್ಪಡಿಸಲಿರುವ ತರಬೇತಿ, ಕಾರ್ಯಾಗಾರಗಳಲ್ಲಿ ನಾಟಕ-ನೃತ್ಯ-ಸಂಗೀತ ಹಾಗೂ ಸಾಹಿತ್ಯ ರಚನೆಯ ತರಬೇತಿ ಕೊಡುವುದಾಗಿ ಹೇಳಿದರು. ತಮ್ಮ ನಾಟಕದ ಕೆಲವು ದೃಶ್ಯಗಳಲ್ಲಿ ಇವರೊಂದಿಗೆ, ಶಮಾ ಅಹ್ಮದ್, ಮಮತಾ ಸುಧೀಂದ್ರ, ಉಮಾ ರಮೇಶ್ ಅಭಿನಂಯಿಸಿದರು. ಅಧ್ಯಕ್ಷತೆ ವಹಿಸಿದ್ದ ಲತಾ ಮೋಹನ್ ಮಾತನಾಡಿ, ಕನ್ನಡ ಭಾಷೆಯ ಬಳಕೆ ಹಾಗೂ ಪ್ರಸ್ತುತಪಡಿಸುವಿಕೆಯ ಬಗ್ಗೆ ತಿಳಿಸಿದರು. ಈ ವೇಳೆ 41 ಹಿರಿಯ ನಾಗರಿಕರು ಭಾಗವಹಿಸಿ, ಕವಿತಾವಾಚನ, ಗೀತಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಿದರೆ, ಎಚ್.ಎಸ್. ಯದುಗಿರಿ ಅವರು ನೃತ್ಯ ಪ್ರದರ್ಶನ ನೀಡಿದರು.