ಪಟ್ಟಣದ ಜೈ ಹಿಂದ್ ಮೈದಾನದಲ್ಲಿ ಜ.೧೪ ರಿಂದ ೨೦ ರವರೆಗೆ ೭ನೇ ವರ್ಷದ ಅಂಕೋಲಾ ಉತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಅಂಕೋಲಾ

ಪಟ್ಟಣದ ಜೈ ಹಿಂದ್ ಮೈದಾನದಲ್ಲಿ ಜ.೧೪ ರಿಂದ ೨೦ ರವರೆಗೆ ೭ನೇ ವರ್ಷದ ಅಂಕೋಲಾ ಉತ್ಸವ ನಡೆಯಲಿದೆ ಎಂದು ಕಲಾವಿದೆ ಬೆಳಂಬಾರದ ಲಕ್ಷ್ಮೀ ಬುದ್ದು ಗೌಡ ಹೇಳಿದರು.

ಪಟ್ಟಣದ ಕೆಎಲ್ಇ ಸಭಾಭವನದಲ್ಲಿ ಅಂಕೋಲಾ ಉತ್ಸವ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಬೆಯಲ್ಲಿ ಮಾತನಾಡಿದ ಅವರು, ಸಂಗಾತಿ ರಂಗಭೂಮಿಯ ಆಶ್ರಯದಲ್ಲಿ ಅಂಕೋಲಾದಲ್ಲಿ ೭ನೇ ವರ್ಷದ ಅಂಕೋಲಾ ಉತ್ಸವವನ್ನು ನಾವೆಲ್ಲ ಸೇರಿ ಪಕ್ಷ, ಜಾತಿ, ಧರ್ಮ ಬದಿಗಿಟ್ಟು ಸಂಭ್ರಮದಿಂದ ಆಚರಿಸೋಣ. ಮಾಜಿ ಶಾಸಕಿ ರೂಪಾಲಿ ಸಂತೋಷ ನಾಯ್ಕ ಅವರ ನೇತೃತ್ವದಲ್ಲಿ ಸಂಗಾತಿ ರಂಗಭೂಮಿ ಅಂಕೋಲಾ ಇವರ ಸಂಘಟನೆಯಲ್ಲಿ ಕಳೆದ ೬ ವರ್ಷಗಳಿಂದ ಆಯೋಜಿಸುತ್ತ ಬರಲಾಗಿದೆ ಎಂದರು.

ವಿಶ್ರಾಂತ ಪ್ರಾಚಾರ್ಯ ಡಾ. ರಾಮಕೃಷ್ಣ ಗುಂದಿ ಮಾತನಾಡಿ, ೭ ದಿನಗಳ ಕಾಲ ನಡೆಯುವ ಅಂಕೋಲಾ ಉತ್ಸವಕ್ಕೆ ಎಲ್ಲರೂ ಸಹಕಾರ ನೀಡಬೇಕು. ಇದು ನಮ್ಮೂರಿನ ಹೆಮ್ಮೆಯ ಉತ್ಸವ, ಸಂಘಟಕರು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದರು.

ಜಿಪಂ ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಬಿಜೆಪಿ ಅಂಕೋಲಾ ಮಂಡಲದ ಮಾಜಿ ಅಧ್ಯಕ್ಷ ಸಂಜಯ ನಾಯ್ಕ ಭಾವಿಕೇರಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ, ಪುರಸಭೆಯ ಮಾಜಿ ಸದಸ್ಯೆ ಜಯಾ ನಾಯ್ಕ, ಬಿಜೆಪಿ ಪ್ರಕೋಷ್ಟ ಸಂಚಾಲಕ ರಾಘವೇಂದ್ರ ಭಟ್ಟ ಮಾತನಾಡಿದರು.

ಸಂಚಾಲಕ ಕೆ. ರಮೇಶ ಸ್ವಾಗತಿಸಿದರು. ಈ ಸಂದರ್ಭ ಜಾನಪದ ಕಲಾವಿರಾದ ಸೋಮಿ ಹುಲಿಯಾ ಗೌಡ, ತುಳಸಿ ಬುದ್ದು ಗೌಡ, ಸೋಮಿ ವಿಠೋಬ ಗೌಡ, ಲಾಯನ್ಸ್ ಕ್ಲಬ್ ಆಫ್ ಅಂಕೋಲಾ ಸಿಟಿ ಪ್ರಮುಖರಾದ ಎನ್.ಎಚ್‌. ನಾಯ್ಕ, ಪುರಸಭೆ ಮಾಜಿ ಸದಸ್ಯ ಶ್ರೀಧರ ನಾಯ್ಕ, ಸಂದೀಪ ಗಾಂವಕರ, ಸುಬ್ರಹ್ಮಣ್ಯ ಗಾಂವಕರ, ವಿನಾಯಕ ಶೆಟ್ಟಿ, ಗದಗಯ್ಯ ಚಿಕ್ಕಮಠ, ಸಂಗೀತಾ ಆರ್.ನಾಯ್ಕ, ಮಂಗಲಾ ಹರಿಕಂತ್ರ ಸೇರಿ ಮೊದಲಾದವರಿದ್ದರು.