ಸಾರಾಂಶ
ಔರಾದ್ ತಾಲೂಕಿನ ವನಮಾರಪಳ್ಳಿ ಬಳಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿರುವ 15 ಕೋಟಿಯ ಗಾಂಜಾ ವಶಕ್ಕೆ ಪಡೆದಿರುವುದು.
ಬೀದರ್: ಎನ್ಸಿಬಿ ಬೆಂಗಳೂರು ತಂಡ ಮತ್ತು ಎಂಟಿ ನಾರಕೋಟಿಕ್ಸ ಸ್ಕಾಡ್ ಬೀದರ್ ತಂಡ ಜಂಟಿಯಾಗಿ ಕಾರ್ಯಚರಣೆ ನಡೆಸಿ ಸುಮಾರು 1500 ಕೆಜಿ ತುಕದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಓರಿಸ್ಸಾ ರಾಜ್ಯದ ಮಲ್ಕಾನ್ಗಿರಿ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಗಾಂಜಾ ತುಂಬಿಕೊಂಡು ಮಹಾರಾಷ್ಟ್ರಕ್ಕೆ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎನ್ಸಿಬಿ ಬೆಂಗಳೂರು ತಂಡ ಹಿಂಬಾಲಿಸಿಕೊಂಡು ಜಿಲ್ಲೆಯ ಗಡಿ ಭಾಗ ವನಮಾರಪಳ್ಳಿಯ ಬಳಿ ಎಂಟಿ ನಾರಕೋಟಿಕ್ಸ ಸ್ಕಾಡ್ ಬೀದರ್‌ನ ಸಿಪಿಐ ರಘುವೀರಸಿಂಗ್ ಮತ್ತು ತಂಡ ಜಂಟಿಯಾಗಿ ಸದರಿ ಲಾರಿ ತಡೆದು ಆರೋಪಿಗಳನ್ನ ವಶಕ್ಕೆ ಪಡೆದು ಔರಾದ್ ಠಾಣೆಗೆ ಕರೆತಂದು ಪರಿಶೀಲನೆ ಮಾಡಿದಾಗ ಮೇಲೆ ಸಿಮೆಂಟ್ ಇಟ್ಟಿಗೆ ತುಂಬಿದ್ದು ಒಳಗಡೆ ಸೀಕ್ರೆಟ್ ಚೇಂಬರ್ ನಲ್ಲಿ ಗಾಂಜಾ ಪ್ಯಾಕೆಟ್‌ಗಳನ್ನು ಅಡಗಿಸಿದ್ದು ಅವುಗಳನ್ನು ನಿಯಮಾನುಸಾರ ವಶಪಡಿಸಿಕೊಳ್ಳಲಾಗಿದೆ.ಈ ಗಾಂಜಾ ಪಾಕೇಟ್‌ಗಳು ಸುಮಾರು 1500 ಕೆಜಿ ವರೆಗೆ ಇರಬಹುದೆಂದು ಅಂದಾಜಿಸಲಾಗಿದ್ದು ಇದರ ಮೌಲ್ಯ 15 ಕೋಟಿಯಷ್ಟು ಆಗುತ್ತದೆ ಎಂದು ಅಂದಾಜಿಸಲಾಗಿದ್ದು ಎನ್ಸಿಬಿ ಬೆಂಗಳೂರು ಅವರಿಂದ ತನಿಖೆ ಪ್ರಗತಿಯಲ್ಲಿದ್ದು ಸದರಿ ಪ್ರಕರಣದಲ್ಲಿ ಹುಮನಾಬಾದ ತಾಲೂಕಿನ ಹಂದಿಕೇರಾ ಗ್ರಾಮದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅವರು ತಿಳಿಸಿದ್ದಾರೆ.