ಮುಂಡಗೋಡ ಬಳಿ ಹೆಜ್ಜೇನು ದಾಳಿಗೆ ೧೫ ಮಂದಿಗೆ ಗಾಯ

| Published : Dec 14 2024, 12:46 AM IST

ಮುಂಡಗೋಡ ಬಳಿ ಹೆಜ್ಜೇನು ದಾಳಿಗೆ ೧೫ ಮಂದಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ಐವರು ವಿದ್ಯಾರ್ಥಿಗಳು ಸೇರಿದಂತೆ ೯ ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಡಗೋಡ: ತಾಲೂಕಿನ ಲಕ್ಕೊಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಹೆಜ್ಜೇನು ದಾಳಿಗೆ ಐವರು ವಿದ್ಯಾರ್ಥಿಗಳು ಸೇರಿದಂತೆ ೧೫ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.ವಿದ್ಯಾರ್ಥಿಗಳಾದ ನೆಹಾಲ್ ಪರಶುರಾಮ ಪಾಟೀಲ, ದೀಕ್ಷಾ ಪರಶುರಾಮ ಪಾಟೀಲ, ಸ್ಪಂದನಾ ಮಂಜುನಾಥ ಬೋವಿ, ವಂದನಾ ಮಂಜುನಾಥ ಬೋವಿ, ಕೃಪಾ ಪ್ರಶಾಂತ ಗೌಳಿ ಹಾಗೂ ಸಾರ್ವಜನಿಕರಾದ ಸಂಗೀತಾ ಬಾಳಾ ಕೋಕರೆ, ಫಕ್ಕೀರಪ್ಪ ನೀಲಪ್ಪ ತಳವಾರ, ನಾರಾಯಣ ನಾಗಪ್ಪ ಕಿಳ್ಳಿಕ್ಯಾತರ, ಇಮ್ರಾನ್ ರಜಾಕಸಾಬ ಕೋಟಿ, ಬಾನುಜಿ ಮಹ್ಮದಲಿ ಬಡಿಗೇರ, ರಜಾಭಕ್ಷ ಹಜರೆಸಾಬ ಶಿಗ್ಗಾಂವ, ಮಹ್ಮದ ಹನಿಫ, ಇಮಾಮಹುಸೇನ ಬಡಿಗೇರ, ಯಲ್ಲಪ್ಪ ವಡ್ಡರ ಎಂಬವರು ಜೇನು ದಾಳಿಯಿಂದ ಗಾಯಗೊಂಡಿದ್ದಾರೆ.ಕೂಡಲೇ ಗಾಯಾಳುಗಳನ್ನು ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ತೀವ್ರವಾಗಿ ಅಸ್ಪಸ್ಥಗೊಂಡಿದ್ದ ಐವರು ವಿದ್ಯಾರ್ಥಿಗಳು ಸೇರಿದಂತೆ ೯ ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

ಜೇನುಹುಳು ದಾಳಿಗೆ ಕಾರಣವೇನು?

ಗ್ರಾಮದ ನೀರಿನ ಟ್ಯಾಂಕೊಂದರ ಮೇಲೆ ಕಟ್ಟಿಕೊಂಡಿದ್ದ ಜೇನುಗೂಡಿಗೆ ಹದ್ದೊಂದು ಕುಕ್ಕಿದ ಪರಿಣಾಮ ಏಕಾಏಕಿ ಹಾರಿ ಬಂದ ಜೇನುಹುಳುಗಳು ಮಾರ್ಗದಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕಚ್ಚಿ ಗಾಯಗೊಳಿಸಿವೆ ಎನ್ನಲಾಗಿದೆ.ಬೈಕ್ ಕಳ್ಳನ ಬಂಧನ

ಯಲ್ಲಾಪುರ: ಬೈಕ್ ಕಳ್ಳತನ ನಡೆಸಿದ ವ್ಯಕ್ತಿಯನ್ನು ಬಂಧಿಸಿದ ಯಲ್ಲಾಪುರ ಪೊಲೀಸರು ಬೈಕ್ ವಶಪಡಿಸಿಕೊಂಡಿದ್ದಾರೆ.ತಾಲೂಕಿನ ಜಡಗಿನಕೊಪ್ಪದ ಪ್ರಕಾಶ ತಂದೆ ಕೃಷ್ಣ ಸಿದ್ದಿ ಬಂಧಿತ ವ್ಯಕ್ತಿ. ಮನೆಯ ಅಂಗಳದಲ್ಲಿ ನಿಲ್ಲಿಸಿಟ್ಟ ಸುಮಾರು ₹೩೦ ಸಾವಿರ ಮೌಲ್ಯದ ಕಪ್ಪು ಬಣ್ಣದ ಹೀರೋ ಸ್ಲೈಂಡರ್ ಪ್ಲಸ್ ಬೈಕ್‌ನ್ನು ನ. ೨೯ರಂದು ರಾತ್ರಿ ಕಳ್ಳತನ ನಡೆಸಿದ್ದಾರೆಂದು ತಾಲೂಕಿನ ಮಾದೇವಕೊಪ್ಪದ ಬೆಂಡು ತಂದೆ ಜನ್ನು ಪಾಂಡ್ರಮಿಸೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಖಂಡ್ರನಕೊಪ್ಪ ಅರಣ್ಯದಲ್ಲಿದ್ದ ಬೈಕ್‌ನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಶಿರಸಿ ಡಿಎಸ್‌ಪಿ ಗಣೇಶ ಕೆ.ಎಲ್., ಯಲ್ಲಾಪುರ ಠಾಣೆಯ ಪಿಐ ರಮೇಶ ಹನಾಪೂರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶೇಡಜಿ ಚೌಹಾಣ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಸವರಾಜ ಹಗರಿ, ಉಮೇಶ ತುಂಬರಗಿ, ಪರಶುರಾಮ ಕಾಳೆ, ಪ್ರವೀಣ ಪೂಜಾರ, ಗಂಗಾರಾಮ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.