ಸಾರಾಂಶ
ಮನೆ ಬಳಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ₹15 ಲಕ್ಷ ಮೌಲ್ಯದ ಕೃಷಿ ಯಂತ್ರೋಪಕರಣಗಳ ಕಳವು ಮಾಡಿದ್ದ ಬಾಲಕರನ್ನು ವಶಕ್ಕೆ ಪಡೆದು ಅವರಿಂದ, 3 ಟ್ರ್ಯಾಕ್ಟರ್ ಟ್ರಾಲಿ, 3 ರೂಟ್‌ವೇಟರ್, 2 ಬಾಂಡ್ಲಿ, 3 ಬಲರಾಜ, 1 ಸ್ಲ್ಯಾಶರ್‌ಗಳನ್ನು ದಾವಣಗೆರೆ ಜಿಲ್ಲೆ ಮಾಯಕೊಂಡ ಪೊಲೀಸರು ಜಪ್ತಿ ಮಾಡಿದ್ದಾರೆ.
- ದಾವಣಗೆರೆ ಗ್ರಾಮಾಂತರ, ಮಾಯಕೊಂಡ ಠಾಣೆ ವ್ಯಾಪ್ತಿಯಲ್ಲಿ ಕೃಷಿ ಪರಿಕರ ಕಳವು ಪ್ರಕರಣ - - -
- 9 ಕಡೆಗಳಲ್ಲಿ ಕೃಷಿ ಯಂತ್ರಗಳ ಕಳವು ಕೃತ್ಯ ನಡೆಸಿದ್ದ ಅಪ್ರಾಪ್ತರು- ಮನೆ ಬಳಿ ಇರಿಸಿದ್ದ ಕೃಷಿ ಯಂತ್ರಗಳು ಕಳವಾದ ಬಗ್ಗೆ ದೂರು ದಾಖಲಿಸಿದ್ದ ಶಿವಪುರದ ಬಿ.ಶೇಖರ ನಾಯ್ಕ
- ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ತಂಡದ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ ಶ್ಲಾಘನೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಮನೆ ಬಳಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ₹15 ಲಕ್ಷ ಮೌಲ್ಯದ ಕೃಷಿ ಯಂತ್ರೋಪಕರಣಗಳ ಕಳವು ಮಾಡಿದ್ದ ಬಾಲಕರನ್ನು ವಶಕ್ಕೆ ಪಡೆದು ಅವರಿಂದ, 3 ಟ್ರ್ಯಾಕ್ಟರ್ ಟ್ರಾಲಿ, 3 ರೂಟ್‌ವೇಟರ್, 2 ಬಾಂಡ್ಲಿ, 3 ಬಲರಾಜ, 1 ಸ್ಲ್ಯಾಶರ್‌ಗಳನ್ನು ಮಾಯಕೊಂಡ ಪೊಲೀಸರು ಜಪ್ತಿ ಮಾಡಿದ್ದಾರೆ.ತಾಲೂಕಿನ ಶಿವಪುರ ಗ್ರಾಮದ ಬಿ.ಶೇಖರ ನಾಯ್ಕ ಎಂಬುವರು ತಮ್ಮ ಮನೆ ಬಳಿ ಹಾಗೂ ಮನೆ ಸಮೀಪದ ಖಾಲಿ ಜಾಗದಲ್ಲಿ ₹40 ಸಾವಿರ ಮೌಲ್ಯದ ಸ್ಲ್ಯಾಶರ್, ₹50 ಸಾವಿರ ಮೌಲ್ಯದ 1 ಬಾಂಡ್ಲಿ ಯಂತ್ರ ರಾತ್ರೋರಾತ್ರಿ ಕಳವಾಗಿರುವ ಬಗ್ಗೆ ದೂರು ನೀಡಿದ್ದರು.
ಕೃಷಿ ಪರಿಕರ ಕಳವು ಪ್ರಕರಣ ಭೇದಿಸಲು ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಮಂಜುನಾಥ, ಗ್ರಾಮಾಂತರ ಡಿವೈಎಸ್‌ಪಿ ಪ್ರಶಾಂತ ಸಿದ್ದನಗೌಡ ಅವರ ಮಾರ್ಗದರ್ಶನದಲ್ಲಿ ಠಾಣೆ ನಿರೀಕ್ಷಕ ಕಿರಣಕುಮಾರ, ಪಿಎಸ್‌ಐ ಜೋವಿತ್ ರಾಜ್, ಸಿಬ್ಬಂದಿ ದೇವೇಂದ್ರ ನಾಯ್ಕ, ನಾಗಭೂಷಣ, ಅಣ್ಣಯ್ಯ, ಮಹಮ್ಮದ್ ಯೂಸೂಫ್ ಅತ್ತಾರ್, ಪಿ.ಎಂ.ವೀರೇಶ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.ತಂಡವು ಕೃಷಿ ಪರಿಕರ ಕಳವಿಗೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರನ್ನು ವಶಕ್ಕೆ ಪಡೆದರು. ಆಗ, ದಾವಣಗೆರೆ ಗ್ರಾಮಾಂತರ ಠಾಣೆ ವ್ಯಾಪ್ತಿಯ 6 ಕಡೆ, ಮಾಯಕೊಂಡ ಠಾಣೆ ವ್ಯಾಪ್ತಿಯ 3 ಕಡೆ ಕಳವು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಈ ಬಾಲಕರು ಒಟ್ಟು 9 ಕಡೆ ಕೃತ್ಯ ಎಸಗಿದ್ದು ವಿಚಾರಣೆ ವೇಳೆ ಗೊತ್ತಾಗಿದೆ. ₹15 ಲಕ್ಷ ಮೌಲ್ಯದ ₹3 ಟ್ರ್ಯಾಲಿ, 3 ರೂಟವೇಟರ್, 2 ಬಾಂಡ್ಲಿ ಯಂತ್ರ, 3 ಬಲರಾಮ, 1 ಸ್ಲ್ಯಾಶರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಟ್ರ್ಯಾಕ್ಟರ್ ಎಂಜಿನ್ ಜಪ್ತಿ ಮಾಡಲಾಗಿದೆ. ವಶಕ್ಕೆ ಪಡೆಯಲಾದ ಬಾಲಕರನ್ನು ದಾವಣಗೆರೆಯ ಸರ್ಕಾರಿ ಬಾಲಕರ ಪರಿವೀಕ್ಷಣಾಲಯಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.- - - -18ಕೆಡಿವಿಜಿ8.9:
ದಾವಣಗೆರೆ ಗ್ರಾಮಾಂತರ ಪೊಲೀಸರು ಬಾಲಕರಿಂದ ವಶಕ್ಕೆ ಪಡೆದ ₹15 ಲಕ್ಷ ಮೌಲ್ಯದ ಕೃಷಿ ಸ್ವತ್ತುಗಳು.