ಮದ್ದೂರು ತಾಲೂಕು ಕೃಷಿ ಸಮಾಜಕ್ಕೆ ನಿರ್ದೇಶಕರಾಗಿ 15 ಮಂದಿ ಅವಿರೋಧ ಆಯ್ಕೆ

| Published : Dec 10 2024, 12:30 AM IST

ಮದ್ದೂರು ತಾಲೂಕು ಕೃಷಿ ಸಮಾಜಕ್ಕೆ ನಿರ್ದೇಶಕರಾಗಿ 15 ಮಂದಿ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಇಲಾಖೆ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜಿ.ಡಿ.ಚಂದ್ರಶೇಖರ್, ಲೊಕೇಶ್, ಎನ್.ಪಿ.ಶಂಕರಯ್ಯ, ಟಿ.ಎಂ. ರಾಜಶೇಖರ್, ಕೆ.ವಿ.ಶ್ರೀನಿವಾಸ್, ಬಿ.ಬಸವರಾಜು, ಪುಟ್ಟರಾಮು, ಪ್ರಕಾಶ, ತಮ್ಮಣ್ಣಗೌಡ, ಕೃಷ್ಣಪ್ಪ, ರಘು, ಕೆ.ಬಿ.ನಾಗರಾಜು, ವೆಂಕಟ ಚಲುವಯ್ಯ, ರಮೇಶ್, ಶಿವಣ್ಣ ನಿರ್ದೇಶಕರಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸೊಮವಾರ ನಡೆದ ಚುನಾವಣೆಯಲ್ಲಿ 15 ಮಂದಿ ಅವಿರೋಧ ಆಯ್ಕೆಯಾದರು.

ಕೃಷಿಇಲಾಖೆ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜಿ.ಡಿ.ಚಂದ್ರಶೇಖರ್, ಲೊಕೇಶ್, ಎನ್.ಪಿ.ಶಂಕರಯ್ಯ, ಟಿ.ಎಂ. ರಾಜಶೇಖರ್, ಕೆ.ವಿ.ಶ್ರೀನಿವಾಸ್, ಬಿ.ಬಸವರಾಜು, ಪುಟ್ಟರಾಮು, ಪ್ರಕಾಶ, ತಮ್ಮಣ್ಣಗೌಡ, ಕೃಷ್ಣಪ್ಪ, ರಘು, ಕೆ.ಬಿ.ನಾಗರಾಜು, ವೆಂಕಟ ಚಲುವಯ್ಯ, ರಮೇಶ್, ಶಿವಣ್ಣ ನಿರ್ದೇಶಕರಾಗಿ ಆಯ್ಕೆಯಾದರು.

ನಿರ್ದೇಶಕರ ಸ್ಥಾನಕ್ಕೆ 26 ಮಂದಿ ಅಕಾಂಕ್ಷಿತರಾಗಿದ್ದರು. ಮಾಜಿ ಅಧ್ಯಕ್ಷರು ಸಹಕಾರ ರತ್ನ ಪುರಷ್ಕ್ರತ ಕೆ.ಪಿ.ದೊಡ್ಡಿ ಶಿವರಾಮು, ಜಿ.ಟಿ.ಪುಟ್ಟಸ್ವಾಮಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ನ.ಲಿ.ಕೃಷ್ಣ, ಗುರುಲಿಂಗಯ್ಯ, ಮುಖಂಡರಾದ ಕ್ಯಾತಘಟ್ಟ ಗಿರೀಶ್ ಸೇರಿದಂತೆ ಹಲವು ಮುಖಂಡರು ಆಕಾಂಕ್ಷಿತರೊಂದಿಗೆ ಮಾತುಕತೆ ನಡೆಸಿ 11 ಮಂದಿ ಚುನಾವಣಾ ಕಣದಿಂದ ಹಿಂದೆ ಸರಿಯುವ ಮೂಲಕ ಅವಿರೋಧ ಆಯ್ಕೆಗೆ ಸಹಕರಿಸಿದರು.

ನೂತನ ನಿರ್ದೇಶಕರಾಗಿ ಆಯ್ಕೆಯಾದವರನ್ನು ಸಹಾಯಕ ಕೃಷಿ ನಿರ್ದೆಶಕಿ ಎಚ್.ಜಿ.ಪ್ರತಿಭಾ, ಮಾರಸಿಂಗನಹಳ್ಳಿ ಕೃಷ್ಣೇಗೌಡ ಬೆಳತೂರು ಚಂದ್ರಹಾಸ್, ಕೆಂಪೇಗೌಡ, ಅಜ್ಜಹಳ್ಳಿ ಕುಮಾರ, ರಾಜೇಶ್, ರಮೇಶ್, ಕ್ರಾಂತಿಸಿಂಹ, ರಕ್ಷಿತ್ ಕುಮಾರ್, ಅಭಿನಂದಿಸಿದರು.

ನಾಳೆ ವಿದ್ವತ್ ಸನ್ಮಾನ ಗ್ರಂಥ ಲೋಕಾರ್ಪಣೆ, ಬಹುಮಾನ ವಿತರಣೆ

ಮೇಲುಕೋಟೆ:

ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾನಿಲಯದ ಅಧೀನ ಸಂಸ್ಥೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ಡಿ.11ರಂದು ವಿದ್ವತ್ ಸನ್ಮಾನ ಗ್ರಂಥ ಲೋಕಾರ್ಪಣೆ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ಸಂಸ್ಥೆ ಕುಲಸಚಿವ ವಿದ್ವಾನ್ ಕುಮಾರ್ ತಿಳಿಸಿದ್ದಾರೆ.

ರಾಮಾನುಜರ ತತ್ವ, ಸಿದ್ಧಾಂತದಂತೆ ಚೆಲುವನಾರಾಯಣಸ್ವಾಮಿ ಕೈಂಕರ್ಯ ಮಾಡಿ ಪರಮಪದ ಹೊಂದಿದ ವಿದ್ವಾನ್ ಸ್ಥಾನೀಕಂ ನರಸಿಂಹಾಚಾರ್, ಅನಾದಿ ಸ್ಥಳಾಚಾರ್ಯ ಪುರುಷ ವಿದ್ವಾನ್ ಶ್ರೀನಿವಾಸ ಐಯ್ಯಂಗಾರ್, ದಿವ್ಯಪ್ರಬಂಧದ ಮೇರು ವಿದ್ವಾಂಸ ಆರ್.ಕೃಷ್ಣಯ್ಯಂಗಾರ್ ರವರಿಗೆ ಮರಣೋತ್ತರ ಕೈಂಕರ್ಯ ನಿಧಿ ಪುರಸ್ಕಾರ ಹಾಗೂ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿದ್ದ ವಿದ್ವಾನ್ ಎಸ್. ನರಸರಾಜ ಭಟ್ಟರ್‌ಗೆ ಜ್ಞಾನನಿಧಿ ಪುರಸ್ಕಾರ ನೀಡಲಾಗುತ್ತಿದೆ.

ಇದೇ ವೇಳೆ ಹಲವು ಗ್ರಂಥಗಳು ಲೋಕಾರ್ಪಣೆಯಾಗಲಿವೆ. ಸ್ತ್ರೋತ್ರ ಸಂಪುಟ 15 ರಾಮಾನುಜರ ಶ್ರೀಭಾಷ್ಯ ಕಿರುಪರಿಚಯ ತತ್ವದೀಪ 2023ನ್ನು ಬಿಡುಗಡೆ ಮಾಡಲಾಗುತ್ತದೆ. ಇದೇ ವೇಳೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಲಿದೆ.

ಅಂದು ಬೆಳಗ್ಗೆ 9ರಿಂದ ಈ ಸಾಲಿನ ದತ್ತಿ ಸ್ಮಾರಕ ಸ್ಪರ್ಧೆಗಳು ನಡೆಯಲಿವೆ. 50 ಶಾಲಾ-ಕಾಲೇಜುಗಳ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಕೃತ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಾಯಿಸಿದ್ದಾರೆ. ಸಂಜೆ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ.ಎಂ.ವಿ.ವೆಂಕಟೇಶ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಅಹಲ್ಯ, ಕುಲಸಚಿವ ವಿಶ್ವನಾಥ ಪಿ.ಹಿರೇಮಠ ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.