ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ 15 ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಟಾಪರ್ಸ್‌ಗಳಾಗಿದ್ದಾರೆ.ಸಂಸ್ಥೆಯ ಗುಣಸಾಗರ್ ( 597) ಸೈನ್ಸ್‌ನಲ್ಲಿ ರಾಜ್ಯಕ್ಕೆ ೨ನೇ ರ‍್ಯಾಂಕ್ ವಾಣಿಜ್ಯ ವಿಭಾಗದಲ್ಲಿ ಭಾರ್ಗವಿ (595) ರಾಜ್ಯಕ್ಕೆ ೫ನೇ ರ‍್ಯಾಂಕ್ ತನ್ನದಾಗಿಸಿಕೊಂಡಿದ್ದು ವಿಜ್ಞಾನ ವಿಭಾಗದಲ್ಲಿ 7 ಮತ್ತು ವಾಣಿಜ್ಯ ವಿಭಾಗದಲ್ಲಿ 8 ಹೀಗೆ ಸಂಸ್ಥೆಯ 15 ವಿದ್ಯಾರ್ಥಿಗಳ ರ‍್ಯಾಂಕ್ ಟಾಪರ್ಸ್ ಸಾಧನೆಯೊಂದಿಗೆ ಹೊಸ ದಾಖಲೆ ಬರೆದಿದೆ. ಪರೀಕ್ಷೆಗೆ ಹಾಜರಾದ 852. ವಿದ್ಯಾರ್ಥಿಗಳಲ್ಲಿ 649 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 201 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಂಸ್ಥೆಯು ಶೇ. 99.88 % ಫಲಿತಾಂಶ ಪಡೆದಿದೆ.
ಟಾಪರ್ಸ್: ಶಿವಮೊಗ್ಗದ ಅರುಣ್ ಕುಮಾರ್ ಡಿ ಹೆಗ್ಡೆ ಮತ್ತು ವೀಣಾ ಇವರ ಪುತ್ರ ಧ್ರುವ ಜಿ. ಹೆಗ್ಡೆ (591), ಎಚ್. ರಾಜೇಶ್ ಬೇಲೇಕೇರಿ ಪ್ರಜ್ಞಾ ಎ. ನಾಯಕ್ ಅವರ ಪುತ್ರಿ ಪ್ರಾಪ್ತಿ ಬೇಲೆಕೇರಿ (591 ) 8ನೇ ರ‍್ಯಾಂಕ್, ಮೈಸೂರಿನ ಸುರೇಶ್ ಪಿ ಮತ್ತು ಸುಮಿತ್ರ ಎಚ್.ಆರ್. ಇವರ ಪುತ್ರ ಸುಹಾಸ್ ಎಂ ಎಸ್ (590), ಕೊಡಗಿನ ಗುರುಮೂರ್ತಿ ಮತ್ತು ಚಂದ್ರಲೇಖಾ ಇವರ ಪುತ್ರಿ ಸ್ಫೂರ್ತಿ ಎಂ ಜಿ (590), ಅಂಕೋಲಾ ರಾಜೇಶ್ ವಿನಾಯಕ್ ನಾಯಕ್ ಮತ್ತು ರಾಜಶ್ರೀ ಇವರಪುತ್ರ ರಿಷಬ್ ರಾಜೇಶ್ ನಾಯಕ್ (590) - ಮೂವರೂ 9 ನೇ ರ‍್ಯಾಂಕ್ ಪಡೆದಿದ್ದಾರೆ.ವಾಣಿಜ್ಯ ವಿಭಾಗದದಲ್ಲಿ ಗದಗಿನ ಚೆನ್ನವೀರಗೌಡ ಮತ್ತು ಉಮಾ ಪಾಟೀಲ್ ಇವರ ಪುತ್ರಿ ಸ್ಪೂರ್ತಿ ಸಿ ಪಾಟೀಲ್ (593) 5 ನೇ ರ‍್ಯಾಂಕ್ ಸ್ಥಾನ ಪಡೆದಿರುತ್ತಾರೆ. ಹಾಸನದ ಕರುಣಾ ಸಾಗರ್ ಮತ್ತು ಶೀಲಾ ಇವರ ಮಗಳಾದ ಖುಷಿ ಕೆ. (591) 7 ನೇ ರ‍್ಯಾಂಕ್, ಜಯರಾಮ ಮಲ್ಯ ಮತ್ತು ಜಯಪ್ರಭಾ ಇವರ ಪುತ್ರಿ ರೋಚನಾ ಮಲ್ಯ(590), 8 ನೇ ರ‍್ಯಾಂಕ್, ಹಾಸನದ ಪ್ರದೀಪ್ ಸಿ ಎಸ್ ಮತ್ತು ಪಿ ನಾಗರ ಇವರ ಪುತ್ರಿ ಎ ಪಿ. ರಕ್ಷಾ(589), ಹುಬ್ಬಳ್ಳಿಯ ಮೋಹನ್ ಭಟ್ ಮತ್ತು ಶ್ವೇತಾ ಭಟ್ ಇವರ ಪುತ್ರ ಶರದ್ ಎಂ ಭಟ್ (589), ಮಂಡ್ಯದ ಪ್ರಶಾಂತ್ ಬಿ ಎಸ್ ಮತ್ತು ಮಾನಸ ಜೈನ್ ಇವರ ಮಗಳಾದ ಸಾನಿಕಾ ಜೈನ್ (589) -9 ನೇ ರ‍್ಯಾಂಕ್ , ವಿಜಯ್ ಕುಮಾರ್ ಮತ್ತು ಕವಿತಾ ಇವರ ಪುತ್ರಿ ಮೋಕ್ಷಾ ಜೈನ್ (೫೮೮), ದ.ಕ. ಜಿಲ್ಲೆಯ ಗಂಗಾಧರ ಪೂಜಾರಿ ಮತ್ತು ಜಯಶ್ರೀ ಇವರ ಪುತ್ರಿ ಸಂಸ್ಕೃತಿ ಪೂಜಾರಿ (588) ಸ್ಪೂರ್ತಿ ನಾಯಕ್ ( 588) -10 ನೇ ರ‍್ಯಾಂಕ್ ಗಳಿಸಿ ಸಾಧನೆ ಮೆರೆದಿದ್ಧಾರೆ.
ಪರೀಕ್ಷೆಗೆ ಹಾಜರಾದ 852 ವಿದ್ಯಾರ್ಥಿಗಳ ಪೈಕಿ 851 ಮಂದಿ ಉತ್ತೀರ್ಣರಾಗಿದ್ದು ಶೇ 99.99 ಫಲಿತಾಂಶ 649 ಮಂದಿ ಡಿಸ್ಟಿಂಕ್ಷನ್ ಸಾಧನೆಯೊಂದಿಗೆ ಉತ್ತೀರ್ಣರಾಗಿದ್ದಾರೆ.ಎಕ್ಸಲೆಂಟ್ ಅಧ್ಯಕ್ಷ ಯುವರಾಜ್ ಜೈನ್ ಈ ಕುರಿತು ಪ್ರತಿಕ್ರಿಯಿಸಿದ್ದು, ಸಂಸ್ಥೆ ಈ ವರ್ಷವೂ ತನ್ನ ಸಾಧನೆಯನ್ನು ಉನ್ನತೀಕರಿಸಿಕೊಂಡು ದಾಖಲೆ ಬರೆದಿದೆ. 597 ವೈಯಕ್ತಿಕ ಅಂಕಗಳಿಕೆಯೂ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಯಲ್ಲಿ ಹೊಸ ದಾಖಲೆ ಬರೆದಿರುವುದು ಸಂತಸ ತಂದಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಇದ್ದರು. ರ‍್ಯಾಂಕ್ ಸಾಧಕರ ಪೈಕಿ ಗುಣಸಾಗರ್ ಮತ್ತು ಭಾರ್ಗವಿ ಅವರನ್ನು ಗೌರವಿಸಲಾಯಿತು.ತಿಪಟೂರಿನ ಪತ್ರಕರ್ತ ದಯಾನಂದ ಹಾಗೂ ಸವಿತಾ ದಂಪತಿಯ ಪುತ್ರ ಗುಣ ಸಾಗರ ಇಂಗ್ಲೀಷಿನಲ್ಲಿ 97 ಉಳಿದಂತೆ 5 ಸಬ್ಜೆಕ್ಟ್ ಗಳಲ್ಲಿ ತಲಾ 100 ಅಂಕಗಳು ಬಂದಿವೆ. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಇಂಜಿನಿಯರಿಂಗ್ ಮೂಲಕ ಸಾಫ್ಟ್ ವೇರ್ ಅಭಿವೃದ್ಧಿಪಡಿಸುವತ್ತ ತನ್ನ ಆಸಕ್ತಿಯನ್ನು ಗುಣಸಾಗರ್ ಹೆತ್ತವರ ಜತೆಗೂಡಿ ಹಂಚಿಕೊಂಡರು.
ಹೊಸದುರ್ಗ ಚಂದ್ರಕಲಾ-ಜಯಾನಂದ ಮೂರ್ತಿ ದಂಪತಿಯ ಪುತ್ರಿ ಭಾರ್ಗವಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ರೇಡಿಯಾಲಜಿಸ್ಟ್ ಆಗಬೇಕೆಂಬ ಕನಸು ಹೊಂದಿದ್ದಾರೆ.