15ನೇ ಹಣಕಾಸು ಯೋಜನೆ ಬಡ್ಡಿ ಹಣ ವಾಪಸ್‌ಗೆ ಗ್ರಾಮ ಪ್ರತಿನಿಧಿಗಳ ಒಕ್ಕೂಟ ವಿರೋಧ

| Published : Feb 06 2025, 12:16 AM IST

15ನೇ ಹಣಕಾಸು ಯೋಜನೆ ಬಡ್ಡಿ ಹಣ ವಾಪಸ್‌ಗೆ ಗ್ರಾಮ ಪ್ರತಿನಿಧಿಗಳ ಒಕ್ಕೂಟ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

೧೫ನೇ ಹಣಕಾಸು ಆಯೋಗದ ಕ್ರೋಡೀಕರಣದ ಬಡ್ಡಿ ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ಇ- ಸ್ವರಾಜ್ ತಂತ್ರಾಂಶದಲ್ಲಿ ಅಳವಡಿಸಿ, ಸಪ್ಲಿಮೆಂಟರಿ ಆಕ್ಷನ್ ಪ್ಲಾನ್ ಮಾಡಲು ಅವಕಾಶ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಮತಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಶಿರಸಿ: ಕೇಂದ್ರ ಸರ್ಕಾರವು ಪ್ರತಿ ಗ್ರಾಪಂ ಮಟ್ಟದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ೧೫ನೇ ಹಣಕಾಸು ಯೋಜನೆಯಲ್ಲಿ ಅನುದಾನ ನೀಡಿದ್ದು, ಅದರ ಬಡ್ಡಿ ಹಣವನ್ನು ರಾಜ್ಯ ಸರ್ಕಾರ ವಾಪಸ್‌ ಭರಣ ಮಾಡುವಂತೆ ಎಲ್ಲ ಗ್ರಾಪಂಗಳಿಗೆ ಸುತ್ತೋಲೆ ಹೊರಡಿಸಿರುವುದಕ್ಕೆ ಗ್ರಾಪಂ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕೇಂದ್ರ ಸರ್ಕಾರದ ೧೫ನೇ ಹಣಕಾಸು ಆಯೋಗದ ಕ್ರೋಡೀಕೃತವಾದ ಬಡ್ಡಿ ಹಣವನ್ನು ತಾಲೂಕಿನ ಆಯಾ ೩೨ ಗ್ರಾಪಂಗಳಿಗೆ ಕ್ರಿಯಾಯೋಜನೆ ಮಾಡಲು ಅನುಮತಿ ನೀಡುವಂತೆ ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದಿಂದ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

ತಾಪಂ ಕಚೇರಿಯಿಂದ ೧೫ನೇ ಹಣಕಾಸು ಆಯೋಗದ ಅಡಿಯಲ್ಲಿ(೨೦೨೦- ೨೧ರಿಂದ ೨೦೨೪- ೨೫) ಕ್ರೋಡೀಕೃತವಾದ ಬಡ್ಡಿ ಹಣವನ್ನು ರಾಜ್ಯ ಸರ್ಕಾರಕ್ಕೆ ಹಿಂಪಡೆಯಲು ನಿರ್ದೇಶಿಸಲಾಗಿದೆ. ೧೫ನೇ ಹಣಕಾಸು ಆಯೋಗದ(೨೦೧೫- ೨೦೨೦) ಸಮಯದಲ್ಲಿ ಗ್ರಾಮ ಪಂಚಾಯಿತಿಗಳು ಬಡ್ಡಿ ಹಣವನ್ನು ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಯಶಸ್ವಿಯಾಗಿ ಬಳಸಲಾಗಿದ್ದು, ೧೫ನೇ ಹಣಕಾಸು ಆಯೋಗದ ಕ್ರೋಡೀಕರಣದ ಬಡ್ಡಿ ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ಇ- ಸ್ವರಾಜ್ ತಂತ್ರಾಂಶದಲ್ಲಿ ಅಳವಡಿಸಿ, ಸಪ್ಲಿಮೆಂಟರಿ ಆಕ್ಷನ್ ಪ್ಲಾನ್ ಮಾಡಲು ಅವಕಾಶ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಮತಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ ಮನವಿ ಸ್ವೀಕರಿಸಿದರು.

ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ, ಉಪಾಧ್ಯಕ್ಷ ನಾರಾಯಣ ಹೆಗಡೆ, ಪ್ರಧಾನ ಕಾರ್ಯದರ್ಶಿ ರವೀಶ ಹೆಗಡೆ, ರಾಜ್ಯ ಸಮಿತಿ ಸದಸ್ಯ ಸಂದೇಶ ಭಟ್ಟ ಬೆಳಖಂಡ, ಸಂಘದ ಪ್ರಮುಖರಾದ ಗಜಾನನ ನಾಯ್ಕ, ಮಂಜುನಾಥ ಪೂಜಾರಿ, ದತ್ತಾತ್ರೇಯ ಮಡಿವಾಳ, ಬಿ.ಎಸ್. ಪಟಗಾರ ಮತ್ತಿತರರು ಇದ್ದರು.ಕುಂಭಮೇಳ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ

ಕುಮಟಾ: ಪಟ್ಟಣದ ದೇವರಹಕ್ಕಲ ಶ್ರೀಶಾಂತಿಕಾ ಪರಮೇಶ್ವರಿ ದೇವಸ್ಥಾನದಿಂದ ಪ್ರಯಾಗರಾಜದ ಮಹಾಕುಂಭಮೇಳ, ಕಾಶಿ ಹಾಗೂ ಅಯೋಧ್ಯೆಗೆ ಹೊರಟ ವಾಕರಸಾ ಸಂಸ್ಥೆಯ ಪಲ್ಲಕ್ಕಿ ಬಸ್‌ಗೆ ಬುಧವಾರ ಪೂಜಿಸಿದ ಶಾಸಕ ದಿನಕರ ಶೆಟ್ಟಿ ಹಾಗೂ ಸಾರ್ವಜನಿಕರು ಯಾತ್ರಾರ್ಥಿಗಳಿಗೆ ಶುಭ ಹಾರೈಸಿ ಬೀಳ್ಕೊಟ್ಟರು.

ಈ ವೇಳೆ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಕುಮಟಾ ತಾಲೂಕಿನಿಂದ ಮಹಾಕುಂಭಮೇಳಕ್ಕೆ ಪಲ್ಲಕ್ಕಿ ಬಸ್ ಮೂಲಕ ಅನೇಕ ಭಕ್ತಾದಿಗಳು ತೆರಳುತ್ತಿದ್ದಾರೆ. ಅದಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಬಸ್‌ನ ಮೂಲಕ ಯಾತ್ರಾರ್ಥಿಗಳ ಪ್ರಯಾಣ ಅತ್ಯಂತ ಸುಖಕರವಾಗಲಿ ಮತ್ತು ದಾರಿ ಮಧ್ಯೆ ಯಾವುದೇ ಸಮಸ್ಯೆಯಾಗದೇ ಸುರಕ್ಷಿತವಾಗಿ ಯಾತ್ರೆ ಮುಗಿಸಿ ಮರಳಿ ಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಘಟಕ ವ್ಯವಸ್ಥಾಪಕ ಎಸ್.ಎಂ. ಕುರ್ತಕೋಟಿ ಸಿಬ್ಬಂದಿ, ಸಾರ್ವಜನಿಕರು ಇದ್ದರು.