ಕೊಡಗು ವಿದ್ಯಾಲಯಕ್ಕೆ 16 ಲಕ್ಷ ರು. ವೆಚ್ಚದ ಕ್ರೀಡಾವನ ಕೊಡುಗೆ

| Published : Nov 05 2024, 12:30 AM IST

ಕೊಡಗು ವಿದ್ಯಾಲಯಕ್ಕೆ 16 ಲಕ್ಷ ರು. ವೆಚ್ಚದ ಕ್ರೀಡಾವನ ಕೊಡುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಣ್ಣರ ಒಳಾಂಗಣ ಕ್ರೀಡಾವನವನ್ನು ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್‌ ನಿರ್ದೇಶಕ ಅನಿಲ್‌ ಎಚ್‌.ಟಿ. ಉದ್ಘಾಟಿಸಿದರು. ಕೊಡಗು ವಿದ್ಯಾಲಯ ದಾನಿಗಳ ಮೂಲಕ ಸಾಕಷ್ಟು ಉನ್ನತ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸುತ್ತಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಮೆರಿಕದಲ್ಲಿ ನೆಲೆಸಿರುವ ಪ್ರಭಾವತಿ ಫರ್ನಾಂಡೀಸ್ ಅವರು ಮಡಿಕೇರಿಯ ಕೊಡಗು ವಿದ್ಯಾಲಯಕ್ಕೆ ಕೊಡುಗೆಯಾಗಿ ನೀಡಿದ 16 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಚಿಣ್ಣರ ಒಳಾಂಗಣ ಕ್ರೀಡಾವನವನ್ನು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್‌ ಎಚ್‌.ಟಿ. ಉದ್ಘಾಟಿಸಿದರು.

ನಗರದ ಕೊಡಗು ವಿದ್ಯಾಲಯಕ್ಕೆ ಪ್ರಭಾವತಿ ಫರ್ನಾಂಡೀಸ್ ಅವರು16 ಲಕ್ಷ ರುಪಾಯಿಗಳನ್ನು ಕೊಡುಗೆಯಾಗಿ ನೀಡಿದ್ದು ಇದನ್ನು ಚಿಣ್ಣರ ಒಳಾಂಗಣ ಕ್ರೀಡಾವನಕ್ಕೆ ಬಳಸಿಕೊಂಡು ವೈವಿಧ್ಯಮಯ ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಕೊಡಗು ವಿದ್ಯಾಲಯದ ನಿರ್ದೇಶಕ ಸಿ.ಎಸ್. ಗುರುದತ್ ಮಾಹಿತಿ ನೀಡಿದರು,

ಕ್ರೀಡಾವನ ಉದ್ಘಾಟಿಸಿದ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್‌ ಎಚ್‌.ಟಿ. ಮಾತನಾಡಿ, ಒಂದು ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಅಂಥ ಸಂಸ್ಥೆಗೆ ದಾನಿಗಳು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಾರೆ. ನಾಲ್ಕೂವರೆ ದಶಕಗಳ ಶೈಕ್ಷಣಿಕ ಸಾಧನೆ ಹೊಂದಿರುವ ಕೊಡಗು ವಿದ್ಯಾಲಯ ಇಂಥ ಅನೇಕ ದಾನಿಗಳ ಮೂಲಕ ಸಾಕಷ್ಟು ಉನ್ನತ ಸೌಲಭ್ಯಗಳನ್ನು ತನ್ನ ವಿದ್ಯಾರ್ಥಿಗಿಳಿಗೆ ಕಲ್ಪಿಸುತ್ತಿದೆ ಎಂದರು.

ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಸಲಹೆಗಾರ ಕೊಕ್ಕಲೇರ ಕುಮಾರ್ ಸುಬ್ಬಯ್ಯ, ಜಿಲ್ಲಾ ಹೊಟೇಲ್ ರೆಸಾರ್ಟ್‌ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಪ್ರಾಂಶುಪಾಲರಾದ ಕೆ.ಎಸ್ . ಸುಮಿತ್ರಾ, ಆಡಳಿತಾಧಿಕಾರಿ ಪಿ. ರವಿ, ಎ .ನೀಲಮ್ಮ ಕಾರ್ಯಪ್ಪ, ಪುಣ್ಯ ಗುರುದತ್‌ ಹಾಜರಿದ್ದರು.