ಹಳಿಯಾಳ ಕುಸ್ತಿ ಪಟುಗಳಿಗೆ 16 ಪದಕ

| Published : Jan 29 2024, 01:31 AM IST

ಸಾರಾಂಶ

ಹಳಿಯಾಳದ ಕ್ರೀಡಾ ವಸತಿ ನಿಲಯದ ಕುಸ್ತಿ ಪಟುಗಳು ಜ. 26ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘ ಮತ್ತು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿಯಲ್ಲಿ 4 ಚಿನ್ನ, 4 ಬೆಳ್ಳಿ ಮತ್ತು 7 ಕಂಚು ಸೇರಿ ಒಟ್ಟು 16 ಪದಕ ಬಾಚಿಕೊಂಡಿದ್ದಾರೆ.

ಹಳಿಯಾಳ:

ಪಟ್ಟಣದ ಕ್ರೀಡಾ ವಸತಿ ನಿಲಯದ ಕುಸ್ತಿ ಪಟುಗಳು ಜ. 26ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘ ಮತ್ತು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿಯಲ್ಲಿ 4 ಚಿನ್ನ, 4 ಬೆಳ್ಳಿ ಮತ್ತು 7 ಕಂಚು ಸೇರಿ ಒಟ್ಟು 16 ಪದಕ ಬಾಚಿಕೊಂಡಿದ್ದಾರೆ.

ಪ್ರಶಸ್ತಿ:

ಬಾಲಕಿಯರ 60 ಕೆಜಿಗಿಂತಲೂ ಮೇಲ್ಪಟ್ಟ ವಿಭಾಗದಲ್ಲಿ ಪ್ರಿನ್ಸಿಟಾ ಸಿದ್ದಿ ಪ್ರಥಮ ಸ್ಥಾನ ಪಡೆದು ಪ್ರಥಮ ಮಹಿಳಾ ಕೇಸರಿ ಪ್ರಶಸ್ತಿ ಪಡೆದರೇ, ಬಾಲಕರ 65 ಕೆಜಿ ವಿಭಾಗದಲ್ಲಿ ರೋಹನ ದೊಡ್ಮಣಿ ಪ್ರಥಮ ಸ್ಥಾನ ಪಡೆದು ಕರ್ನಾಟ ಕುಮಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ವಿದ್ಯಾಶ್ರೀ ಗೇಣನನ್ನವರ 53 ಕೆಜಿಯಲ್ಲಿ ಪ್ರಥಮ, ಮನಿಷಾ ಸಿದ್ದಿ 57 ಕೆಜಿ ಮೇಲ್ಪಟ್ಟು ಪ್ರಥಮ, ಕಾವೇರಿ ತಲಗೇರಿ 57 ಕೆಜಿ ದ್ವೀತಿಯ, ಸವಿತಾ ಸಿದ್ದಿ 53 ಕೆಜಿ ತೃತೀಯ, ನಿಷಾ ಉಗ್ರಾಣಿ 50 ಕೆಜಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಾಲಕರ ವಿಭಾಗದಲ್ಲಿ ಆಯಾನ ಕೇಕ್ಕೆರಿ 65 ಕೆಜಿಯಲ್ಲಿ ದ್ವಿತೀಯ, ಅಮೋಘ ಶಿರೋಡಕರ 48 ಕೆಜಿ ದ್ವಿತೀಯ, ಜುನೆದ ಹಬೂಬಕರ್ 48 ಕೆಜಿ ತೃತೀಯ, ಜ್ಞಾನೇಶ್ವರ 57 ಕೆಜಿ ತೃತೀಯ, ವಿಜಯ ಬಂಗ್ಯಾನವರ 74 ಕೆಜಿ ತೃತೀಯ, ರಾಹುಲ ಚವ್ಹಾಣ +60 ಕೆಜಿ ತೃತೀಯ, ಇರ್ಫಾನ ವಾಲಿಕಾರ 55 ಕೆಜಿ ತೃತೀಯ, ದೀಪಕ ಪವಾರ 45 ಕೆಜಿ ತೃತೀಯ ಸ್ಥಾನ ಪಡೆದಿದ್ದಾರೆ.

ಈ ಕುಸ್ತಿ ಪಟುಗಳಿಗೆ ತುಕಾರಾಮ ಗೌಡಾ ತರಬೇತಿ ನೀಡಿದ್ದಾರೆ ಎಂದು ವಿಜೇತ ಕುಸ್ತಿ ಪಟುಗಳಿಗೆ ಮತ್ತು ತರಬೇತುದಾರರಿಗೆ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಜ್ಯಪ್ಪಾ ಸೊಗಲದ ಅಭಿನಂದನೆ ಸಲ್ಲಿಸಿದ್ದಾರೆ.