ನೀರಿನ ಅಭಾವ ತಪ್ಪಿಸಲು 16 ಹೊಸ ಬೋರ್‌ವೆಲ್‌

| Published : Feb 09 2024, 01:48 AM IST

ಸಾರಾಂಶ

ಬೇಸಿಗೆ ಆರಂಭ ಹಿನ್ನೆಲೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಹೀಗಾಗಿ ಅಗತ್ಯವಿರುವ ಕಡೆ 16 ಹೊಸ ಬೋರ್, 4 ರಿಬೋರ್ ಕೊರೆಯಲು ಶೀಘ್ರದಲ್ಲೇ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು

ಬೇಸಿಗೆ ಆರಂಭ ಹಿನ್ನೆಲೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಹೀಗಾಗಿ ಅಗತ್ಯವಿರುವ ಕಡೆ 16 ಹೊಸ ಬೋರ್, 4 ರಿಬೋರ್ ಕೊರೆಯಲು ಶೀಘ್ರದಲ್ಲೇ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಕರೆಯಲಾಗಿದ್ದ ಜಲಜೀವನ್ ಮಿಷನ್ ಹಾಗೂ ತಾಲೂಕು ಪಂಚಾಯಿತಿ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಬಳಿಕ ಮಾತನಾಡಿದರು. 25 ಗ್ರಾಪಂ ವ್ಯಾಪ್ತಿಯಲ್ಲಿ ಕಾಡಂಚಿನ ಗ್ರಾಮ, ಪೋಡುಗಳು ಒಳಗೊಂಡು ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಅಂತರ್ಜಲ ಮಟ್ಟ ಕುಸಿತವಾಗುತ್ತಿದ್ದು ನೀರಿನ ಅಭಾವ ಎದುರಾಗುತ್ತಿದೆ. ಹೀಗಾಗಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹೊಸ ಹಾಗೂ ಮರು ಬೋರ್ ಕೊರೆಸಲು ಶೀಘ್ರದಲ್ಲೇ ಪಾಯಿಂಟ್ ಗುರುತು ಮಾಡಬೇಕು. ಜೊತೆಗೆ ಜಿಪಿಎಸ್ ಅಳವಡಿಕೆ ಆಗಲಿ, ಬೋರ್ ಪಾಯಿಂಟ್ ವೇಳೆ ಆಯಾ ಗ್ರಾಪಂ ಪಿಡಿಒಗಳು ಸ್ಥಳದಲ್ಲಿದ್ದು ಒಂದು ವಾರದ ಒಳಗೆ ಕ್ರಮವಹಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು. ಇದಕ್ಕೂ ಮುನ್ನ ಶಾಸಕ ಎಂ.ಆರ್. ಮಂಜುನಾಥ್ ತಾಲೂಕಿನ ಎಲ್ಲ ಗ್ರಾಪಂ ಅಧಿಕಾರಿಗಳಿಂದ ಅಂಕಿ ಅಂಶಗಳ ಮಾಹಿತಿ ಪಡೆದುಕೊಂಡು ಅಧಿಕಾರಿಗಳ ಜೊತೆ ತುರ್ತು ಪರಿಸ್ಥಿತಿಯ ಕುಡಿಯುವ ನೀರಿನ ಸಮಸ್ಯೆ ಕುರಿತು ಸುದೀರ್ಘ ಚರ್ಚೆ ನೆಡೆಸಿದರು.ತಮ್ಮ ಗ್ರಾಪಂ ವ್ಯಾಪ್ತಿಯ ಖಾಸಗಿ ಜಮೀನಿನಲ್ಲಿ ಮೋಟಾರ್ ಅಳವಡಿಕೆ ನೀರು ಸರಬರಾಜು ಹಾಗೂ ತುರ್ತು ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ತುರ್ತಾಗಿ ಪೂರೈಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ವಸತಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಬೇಕು. ಅಗತ್ಯ ಮೂಲ ಸೌಕರ್ಯ ಬಗ್ಗೆ ಸಮಸ್ಯೆಗಳು ಇದ್ದಲ್ಲಿ ನನ್ನ ಗಮನಕ್ಕೆ ತಂದು ಆಗಿರುವ ಕಾರ್ಯಗಳ ಬಗ್ಗೆ ದಾಖಲೆ ಸಹಿತ ಮಾಹಿತಿ ಒದಗಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಎಇಇ ಹರೀಶ್, ತಾಲೂಕು ಪಂಚಾಯಿತಿ ಇಒ ಉಮೇಶ್ ಸೇರಿದಂತೆ ವಿವಿಧ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.