ಸಾರಾಂಶ
ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಭಿಸಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಭಿಸಿದೆ. ಇಂದು ತಾಲೂಕಿನ ಹಿಪ್ಪರಗಿ ಜಲಾಶಯದ ಒಳಹರಿವು ೧೬ ಸಾವಿರ ಕ್ಯುಸೆಕ್ ಇದ್ದು, ೧೪.೫ ಸಾವಿರ ಕ್ಯೂಸೆಕ್ ಹೊರ ಹರಿವು ಇದೆ.ಮುಳುಗಿದ ಸೇತುವೆ: ಸಂಪೂರ್ಣ ಜಲಾವೃತಗೊಂಡಿರುವ ಮಹಿಷವಾಡಗಿ ಸೇತುವೆಯ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಹಿಪ್ಪರಗಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಸಹಾಯಕ ಅಭಿಯಂತರ ವಿ.ಎಸ್. ನಾಯಕ ತಿಳಿಸಿದರು.
ಮುಳುಗಿದ ಸೇತುವೆ: ಬೈಕ್ ಹಾಗೂ ಪಾದಚಾರಿಗಳಿಗೆ ಅಥಣಿ-ರಬಕವಿ-ಬನಹಟ್ಟಿಗೆ ಬೆಸುಗೆಯಾಗಿದ್ದ ಮಹಿಷವಾಡಗಿ ಸೇತುವೆ ಮಂಗಳವಾರ ಸಂಪೂರ್ಣ ಜಲಾವೃತಗೊಂಡಿದೆ. ನದಿಯೊಳಗೆ ನೀರಿನ ಒತ್ತಡ ಹೆಚ್ಚಿರುವುದರಿಂದ, ಪಕ್ಕದಲ್ಲಿಯೇ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಇನ್ನೂ ಬೋಟ್ ವ್ಯವಸ್ಥೆ ಆರಂಭಿಸಿಲ್ಲ. ಸೇತುವೆ ಮುಂಭಾಗದ ಅಸ್ಕಿ ವಲಯ ಪ್ರದೇಶದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದ ಬೋಟ್ ವ್ಯವಸ್ಥೆ ಪ್ರಾರಂಭಿಸಲಾಗಿದೆ.