ಸಾರಾಂಶ
ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯ ಮೆಟ್ಟಿಲು ಏರಿರುವರು ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ಇಬ್ಬರಿಗೂ ಗೆಲುವು ಲ್ಲುವು ಸಿಗುವುದರೊಂದಿಗೆ ಸಹಬಾಳ್ವೆಯಿಂದ ಜೀವನ ನಡೆಸಲ್ಲು ಸಾಧ್ಯ ಎಂದು ಪಟ್ಟಣದ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯ ಮೆಟ್ಟಿಲು ಏರಿರುವರು ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ಇಬ್ಬರಿಗೂ ಗೆಲುವು ಲ್ಲುವು ಸಿಗುವುದರೊಂದಿಗೆ ಸಹಬಾಳ್ವೆಯಿಂದ ಜೀವನ ನಡೆಸಲ್ಲು ಸಾಧ್ಯ ಎಂದು ಪಟ್ಟಣದ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಹೇಳಿದರು.ಪಟ್ಟಣದ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಇತ್ತೀಚೆಗೆ ಜರುಗಿದ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿ 3 ತಿಂಗಳಗೊಮ್ಮೆ ನಡೆಯುವ ಲೋಕ್ ಅದಾಲತ್ತಿನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದರಿಂದ ಸಮಯ ಹಾಗೂ ಹಣ ಉಳಿಸಿಕೊಳ್ಳಬಹುದು ಎಂದರು.
ಲೋಕ ಅದಾಲತದಲ್ಲಿ ನ್ಯಾಯಾಲಯದಲ್ಲಿನ ಒಟ್ಟು 1636 ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು. 1494 ಕ್ರೀಮಿನಲ್ ಪ್ರಕರಣಗಳಲ್ಲಿ ₹1.50 ಕೋಟಿ ಹಾಗೂ ಸಿವಿಲ್ ಹಾಗೂ ಚೆಕ್ ಬೌನ್ಸ್ ಪ್ರಕರಣದ ಒಟ್ಟು 72 ಇದರಲ್ಲಿ ಇತ್ಯರ್ಥ ಮಾಡಿಕೊಂಡು ಒಟ್ಟು ಸುಮಾರು ₹77 ಲಕ್ಷ ಬರಣಾ ಮಾಡಿಸಿದರು. 8 ದಾಂಪತ್ಯ ಜೀವನದ ಪ್ರಕರಣಗಳು, 62 ಜನ್ಮ ಮತ್ತು ಮರಣ ಪ್ರಮಾಣ ಪತ್ರಗಳ ಪ್ರಕರಣಗಳನ್ನು ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಅವರು ಇತ್ಯರ್ಥಗೊಳಿಸಿದರು.ಈ ಸಂದರ್ಭದಲ್ಲಿ ಸರ್ಕಾರಿ ವಕೀಲರಾದ ಶುಭ, ವಕೀಲರಾದ ವಿನೋಧ ಪಾಟೀಲ, ಜಿ.ಎಸ್.ಸಿದ್ದಾಪೂರಮಠ, ಎಸ್.ವೈ.ಹೊಸಟ್ಟಿ, ಎಸ್.ಜಿ.ಕುಲಕರ್ಣಿ, ಎಸ್.ಬಿ.ತುಪ್ಪದ, ರಮೇಶ ಮಮದಾಪೂರ, ಅಶೋಕ ಬಾಗೋಜಿ, ವಿ.ವಿ.ನಾಯಕ, ಆರ್.ಬಿ.ಕುಳ್ಳೂರ, ಎಲ್.ಬಿ.ವಡ್ಡೇಯರ, ಬಿ.ಎಚ್.ಮಳಿವಡ್ಡೇರ, ಡಿ.ಎಸ್.ರೋಡನ್ನವರ, ವಿ.ಸಿ.ಗಾಡವಿ, ಸುರೇಶ ಸಣ್ಣಕ್ಕಿ, ಎಲ್.ಎಂ.ಸವಸುದ್ದಿ, ವಿವೇಕ ಸೋನವಾಲಕರ, ಅಕ್ಕಮಹಾದೇವಿ ಗೋಡ್ಯಾಗೋಳ, ಜ್ಯೋತಿ ಕೊಡತೆ, ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.