ಸಾರಾಂಶ
ತ್ಯಾಗವೀರ ಶಿರಸಂಗಿ ಲಿಂಗರಾಜರ 163ನೇ ಜಯಂತಿ ಉತ್ಸವವನ್ನು ಸರದೇಸಾಯಿ ನವಲಗುಂದ ಶಿರಸಂಗಿ ಚಾರಿಟೇಬಲ್ ಟ್ರಸ್ಟ್ ಫಂಡ್ ಬೆಳಗಾವಿ ಕಾರ್ಯಾಲಯದಲ್ಲಿ ಲಿಂಗರಾಜರ ಭಾವಚಿತ್ರದ ಪೂಜೆಯೊಂದಿಗೆ ಅತ್ಯಂತ ಸರಳವಾಗಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ತ್ಯಾಗವೀರ ಶಿರಸಂಗಿ ಲಿಂಗರಾಜರ 163ನೇ ಜಯಂತಿ ಉತ್ಸವವನ್ನು ಸರದೇಸಾಯಿ ನವಲಗುಂದ ಶಿರಸಂಗಿ ಚಾರಿಟೇಬಲ್ ಟ್ರಸ್ಟ್ ಫಂಡ್ ಬೆಳಗಾವಿ ಕಾರ್ಯಾಲಯದಲ್ಲಿ ಲಿಂಗರಾಜರ ಭಾವಚಿತ್ರದ ಪೂಜೆಯೊಂದಿಗೆ ಅತ್ಯಂತ ಸರಳವಾಗಿ ಆಚರಿಸಲಾಯಿತು.ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಲಿಂಗರಾಜರ ಕೊಡುಗೆಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಸದಸ್ಯರಾದ ಸೋಮನಾಥ ಬಿ.ಪಾಟೀಲ ಮತ್ತು ವಿಕ್ರಮ ಡಿ.ಇನಾಮದಾರ, ಟ್ರಸ್ಟ್‌ನ ನ್ಯಾಯವಾದಿ ಆರ್.ಜಿ.ಕುಲಕರ್ಣಿ ಮತ್ತು ಟ್ರಸ್ಟ್‌ನ ಫಲಾನುಭವಿ ನಿವೃತ್ತ ಪ್ರಾಚಾರ್ಯ ಬಿ.ಎಸ್.ಗವಿಮಠ, ವಿ.ಆರ್.ಬಾಗೋಜಿ, ಸಿ.ಎಸ್.ಕಾಮಗೋಳ, ಸೋಮಶೇಖರ ಮಲ್ಲಣ್ಣವರ ಹಾಗೂ ಟ್ರಸ್ಟ್ ಸಿಬ್ಬಂದಿ ಎಸ್.ಬಿ.ಪಾಟೀಲ, ವಿ.ಎ.ಚನ್ನಪ್ಪಗೌಡರ, ಎಸ್.ಬಿ.ಬಿರಾದಾರ, ಅಶೋಕ ಚನ್ನಪ್ಪಗೌಡರ ಇವರು ಉಪಸ್ಥಿತರಿದ್ದರು.