ಜಿಲ್ಲೆಯಲ್ಲಿ 1670 ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾವಣೆ

| Published : Nov 19 2024, 12:46 AM IST

ಸಾರಾಂಶ

1670 BPL cards converted to APL in the district

-ಅತ್ತ ಜಮೀನಲ್ಲಿ ಬೆಳೆಯೂ ಸಿಗ್ತಿಲ್ಲ, ಇತ್ತ ರೇಷನ್‌ ಕಾರ್ಡ್‌ ಇಲ್ಲ: ರೈತರ ಆಕ್ರೋಶ

------

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಾದ್ಯಂತ 1670 ಬಿಪಿಎಲ್ ಕಾರ್ಡ್ ಗಳು ಎಪಿಎಲ್ ಕಾರ್ಡ್‌ ಆಗಿ ಬದಲಾವಣೆಯಾಗಿದ್ದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಚ್ಚಬೋರನಹಟ್ಟಿ ಗ್ರಾಮದಲ್ಲಿ 10 ಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಬದಲಾವಣೆಯಾಗಿದ್ದು, ರೈತರಾದ ಪಾಲಯ್ಯ, ಬೋರಯ್ಯ ಪ್ರತಿಕ್ರಿಯಿಸಿ

ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾವಣೆ ಆದ ಕಾರಣ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆಸ್ಪತ್ರೆಗಳಿಗೆ ಹೋದರೆ ಲಕ್ಷಾಂತರ ರೂಪಾಯಿ ಕೇಳ್ತಿದ್ದಾರೆ. ಜಮೀನಿದೆ ಎಂದು ಕಾರ್ಡ್ ತೆಗೆದಿದ್ದಾರೆ, ಅತ್ತ ಜಮೀನಲ್ಲಿ ಬೆಳೆಯೂ ಸಿಗ್ತಿಲ್ಲ, ಇತ್ತ ರೇಷನ್‌ ಕಾರ್ಡ್‌ ಇಲ್ಲ ಎಂಬಂತಾಗಿದೆ.

ಜಮೀನನ ಅಧಾರದ ಮೇಲೆ‌ ಬಿಪಿಎಲ್ ಕಾರ್ಡ್ ತೆಗೆದರೆ ರೈತರು ವಿಷ ಕುಡಿಯಬೇಕಾಗುತ್ತದೆ.

8 ಎಕರೆ ಜಮೀನಿದೆ ಎಂದು ಬಿಪಿಎಲ್ ನ ಎಪಿಎಲ್ ಮಾಡಿದರೆ ಜಮೀನು ಇಬ್ಬರು ಮಕ್ಕಳಿಗೆ ತಲಾ ನಾಲ್ಕು ಎಕರೆ ಸೇರುತ್ತದೆ. ಹೀಗಿದ್ದಾಗ

ಯಾವ ಅಧಾರದ ಮೇಲೆ ಸರ್ಕಾರಗಳು ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಎಪಿಎಲ್ ಕಾರ್ಡ್ ಅಗಿರೋದಕ್ಕೆ ಉಪವಾಸ, ವನವಾಸ ಅನುಭವಿಸುಂತಾಗಿದೆ.

ಸರ್ಕಾರ ನಮ್ಮಂತ ರೈತರಿಗೆ ಬಿಪಿಎಲ್ ಕಾರ್ಡ್ ಕೊಡಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.