ಸ್ವಚ್ಛ ಕಾವೇರಿಗಾಗಿ ಇಂದಿನಿಂದ ಆರಂಭವಾಗುವ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಅಂಗವಾಗಿ ಅಖಿಲ ಭಾರತೀಯ ಸನ್ಯಾಸಿ ಸಂಘದ ಸದಸ್ಯರು ಭಾನುವಾರ ಮಧ್ಯಾಹ್ನ ಜಿಲ್ಲೆಗೆ ತಲುಪಿದ್ದು ಗಡಿ ಭಾಗದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ನಮಾಮಿ ಕಾವೇರಿ ಬಳಗದ ಪ್ರಮುಖರು ಬರಮಾಡಿಕೊಂಡರು.
ಕುಶಾಲನಗರ: ಸ್ವಚ್ಛ ಕಾವೇರಿಗಾಗಿ ಇಂದಿನಿಂದ ಆರಂಭವಾಗುವ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಅಂಗವಾಗಿ ಅಖಿಲ ಭಾರತೀಯ ಸನ್ಯಾಸಿ ಸಂಘದ ಸದಸ್ಯರು ಭಾನುವಾರ ಮಧ್ಯಾಹ್ನ ಜಿಲ್ಲೆಗೆ ತಲುಪಿದ್ದು ಗಡಿ ಭಾಗದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ನಮಾಮಿ ಕಾವೇರಿ ಬಳಗದ ಪ್ರಮುಖರು ಬರಮಾಡಿಕೊಂಡರು.ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಮ್ ಎನ್ ಚಂದ್ರಮೋಹನ್, ಜಿಲ್ಲಾ ಅಧ್ಯಕ್ಷ ಕೊಡಗನ ಹರ್ಷ, ನಮಾಮಿ ಕಾವೇರಿ ಜಿಲ್ಲಾ ಅಧ್ಯಕ್ಷ ವನಿತಾ ಚಂದ್ರಮೋಹನ್, ಗೌರವ ಸಲಹೆಗಾರರು ಸುಮನಾ ಮಳಲಗದ್ದೆ, ಜಿಲ್ಲಾ ಸಂಚಾಲಕ ವಿಠ್ಠಲ್ ಸಾಲಿಯಾನ್, ಧರಣಿ ಈ ಸಂದರ್ಭ ಇದ್ದರು.
ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಸಾಧು ಸಂತರ ತಂಡ ನದಿ ತಟದಲ್ಲಿ ಗಿಡಗಳನ್ನು ನೆಟ್ಟು ಬಳಿಕ ತಲಕಾವೇರಿಗೆ ತೆರಳಿ ವಾಸ್ತವ್ಯ ಹೂಡಿದರು .ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಅಖಿಲ ಭಾರತೀಯ ಸನ್ಯಾಸಿ ಸಂಘ ಆಶಯದಲ್ಲಿ ನಡೆಯುವ 16ನೇ ವರ್ಷದ ಕಾವೇರಿ ನದಿ ಜಾಗೃತಿ ರಥ ಯಾತ್ರೆಗೆ ತಲಕಾವೇರಿಯಲ್ಲಿ ಬೆಳಗ್ಗೆ 9 ಗಂಟೆಗೆ ಚಾಲನೆ ದೊರೆಯಲಿದೆ.ನಂತರ ಭಾಗಮಂಡಲ ಸಂಗಮದಲ್ಲಿ ಮಹಾ ಆರತಿ ಕಾರ್ಯಕ್ರಮ ನಡೆಯುವುದು.ಸಂಜೆ ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿಗೆ 191 ನೆಯ ಹುಣ್ಣಿಮೆ ಮಹಾ ಆರತಿ ಕಾರ್ಯಕ್ರಮದಲ್ಲಿ ಯಾತ್ರೆ ತಂಡ ಪಾಲ್ಗೊಳ್ಳಲಿದೆ. ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಿ ಆರ್ ಎನ್ ಬಿಂದು ಮಣಿ, ಶಕ್ತಿ ಪ್ರಧಾನ ಸಂಪಾದಕರು ಜಿ ರಾಜೇಂದ್ರ, ನಮಾಮಿ ಕಾವೇರಿ ಗೌರವ ಸಲಹೆಗಾರೆ ಸುಮನಾ ಮಳಲಗದ್ದೆ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಹಾಸನ ಜಿಲ್ಲಾ ಸಂಚಾಲಕ ಎಂ ಎನ್ ಕುಮಾರಸ್ವಾಮಿ ಮತ್ತು ಇತರ ಗಣ್ಯರು ಉಪಸ್ಥಿತರಿರುವರು.ಪ್ರಧಾನ ಅರ್ಚಕ ಶ್ರೀ ಕೃಷ್ಣಮೂರ್ತಿ ಭಟ್ನೇ ತೃತ್ವದಲ್ಲಿ ಕುಶಾಲನಗರ ಸಮಸ್ತ ಮಹಿಳಾ ಭಜನಾ ಮಂಡಳಿ ವತಿಯಿಂದ ಅಭಿಷೇಕ ಭಜನೆ ಮತ್ತು ಲಲಿತ ಸಹಸ್ರನಾಮ ಕಾರ್ಯಕ್ರಮಗಳು ನಡೆಯಲಿದೆ.
ನಂತರ ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ರೋಟರಿ ಉದ್ಯಾನವನದಲ್ಲಿ ಸಂಜೆ 6:30 ಗಂಟೆಯಿಂದ ಧಾರ್ಮಿಕ ಸಾಂಸ್ಕೃತಿಕ ಮತ್ತು ಬೆಳದಿಂಗಳ ಊಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಅಖಿಲ ಭಾರತ ಸನ್ಯಾಸಿ ಸಂಘ ಸಂಚಾಲಕ ಶ್ರೀ ರಮಾನಂದ ಸ್ವಾಮೀಜಿ ಹರಿದ್ವಾರ ಅಖಂಡ ಪರಂ ದಾಮ್ ಸ್ವಾಮೀಜಿ ಅನಂತಾನಂದ ಗಿರಿಜೀ ಅವರ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರ ಶಾಸಕ ಮಂತರ್ ಗೌಡ ಉದ್ಘಾಟಿಸುವರು. ಮಾಜಿ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ದೀಪಾರಾಧನೆಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಡಾ ಅಧ್ಯಕ್ಷ ಪ್ರಮೋದ್ ಮುತಪ್ಪ, ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಶರಣ್ ಪೂಣಚ್ಚ, ಎಸ್ ಎಲ್ ಎನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥನ್ ಉದ್ಯಮಿ ಮನು ಪೆಮ್ಮಯ್ಯ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ತಮಿಳುನಾಡು ಪ್ರಾಂತ್ಯದ ಸಂಚಾಲಕ ವಾಸು ರಾಮಚಂದ್ರನ್, ಸಮಿತಿಯ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.