ಸಾರಾಂಶ
ಯುವ ನಟ ವಿಕ್ರಂ ರವಿಚಂದ್ರನ್ ಜನ್ಮದಿನ ಅಂಗವಾಗಿ ಆ.16ರಂದು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ವಿಶೇಷಚೇತನ ಮಕ್ಕಳಿಗೆ ಸಿಹಿ ವಿತರಣೆ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಸಿಪಾಯಿ ರವಿಚಂದ್ರನ್ ಸೇನೆ ಮತ್ತು ವಿಕ್ರಂ ರವಿಚಂದ್ರನ್ ಅಭಿಮಾನಿಗಳ ಸಂಘದ ಖಜಾಂಚಿ ಶ್ರವಣಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ ಯುವ ನಟ ವಿಕ್ರಂ ರವಿಚಂದ್ರನ್ ಜನ್ಮದಿನ ಅಂಗವಾಗಿ ಆ.16ರಂದು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ವಿಶೇಷಚೇತನ ಮಕ್ಕಳಿಗೆ ಸಿಹಿ ವಿತರಣೆ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಸಿಪಾಯಿ ರವಿಚಂದ್ರನ್ ಸೇನೆ ಮತ್ತು ವಿಕ್ರಂ ರವಿಚಂದ್ರನ್ ಅಭಿಮಾನಿಗಳ ಸಂಘದ ಖಜಾಂಚಿ ಶ್ರವಣಕುಮಾರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ವಿಕ್ರಂ ರವಿಚಂದ್ರನ್‌ರಿಗೆ ಶುಭ ಕೋರಿ, ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ನಂತರ ಎಸ್ಸೆಸ್ ಬಡಾವಣೆಯ ಅಂಗವಿಕಲರ ಆಶಾಕಿರಣ ಟ್ರಸ್ಟ್‌ನ ವಿಶೇಷ ಮಕ್ಕಳಿಗೆ ಸಿಹಿ ವಿತರಣೆ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.ಸಂಘದ ವಿ.ಗಂಗಾಧರ, ಮನೋಜ್, ವೆಂಕಟೇಶ ಇತರರು ಇದ್ದರು.