ನೀರುಮಾರ್ಗ ಗ್ರಾಮದ ಪೆದಮಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವಾಜಿಲ್ಲಾಯ-ಮಹಿಷಂತಾಯ-ಧೂಮಾವತಿ ಬಂಟ ದೈವಸ್ಥಾನದಲ್ಲಿ ದೈವಗಳ ಪುನರ್‌ ಪ್ರತಿಷ್ಠಾ ಕಲಶಾಭಿಷೇಕ ಉತ್ಸವ ಕುಡುಪು ಕೃಷ್ಣರಾಜ ತಂತ್ರಿ ನೇತೃತ್ವದಲ್ಲಿ ಫೆ.16 ರಿಂದ 22ರ ವರೆಗೆ ನಡೆಯಲಿದೆ. ಇದರ ಅಂಗವಾಗಿ ಉಗ್ರಾಣ ಮುಹೂರ್ತ ಭಾನುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಪ್ರತಿಷ್ಠಿತ ನಿಧಿಲ್ಯಾಂಡ್‌ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್‌ ಸನಿಲ್‌ ಅವರು ಉಗ್ರಾಣ ಮುಹೂರ್ತ ನೆರವೇರಿಸಿ ಮಾತನಾಡಿ, ದೈವ-ದೇವತಾರಾಧನೆಯೇ ಪ್ರಧಾನವಾಗಿರುವ ತುಳುನಾಡಿನ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳು ಇಡೀ ನಾಡಿಗೆ ಮಾದರಿಯಾಗಿದೆ. ದೈವಸ್ಥಾನ-ದೇವಸ್ಥಾನಗಳ ಅಭಿವೃದ್ಧಿಯಾದಾಗ ಅದು ಗ್ರಾಮದ ಅಭಿವೃದ್ಧಿಯಾದಂತೆ ಎಂದರು.ಈ ಸಂದರ್ಭ ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನದ ಟ್ರಸ್ಟ್‌ ಅಧ್ಯಕ್ಷ ಗಿರಿಧರ್‌ ಶೆಟ್ಟಿ, ಕ್ಷೇತ್ರದ ಟ್ರಸ್ಟ್‌ ಕಾರ್ಯಾಧ್ಯಕ್ಷ ಆನಂದ ಸರಿಪಲ್ಲ, ಟ್ರಸ್ಟಿಗಳಾದ ಭಟ್ರಕೋಡಿ ವೆಂಕಟಕೃಷ್ಣ ಭಟ್‌, ಭಾಸ್ಕರ್‌ ಕೆ., ಪ್ರಮುಖರಾದ ಪ್ರೇಮ್‌ಚಂದ್‌ ಭಟ್‌, ಕಿಶೋರ್‌ ಕುಮಾರ್‌, ನಾಗೇಶ್‌, ಮಹೇಶ್‌ ಮತ್ತಿತರರು ಇದ್ದರು.ನಾಳೆ ಕೊಡಿಮರ, ಆಭರಣ ಶೋಭಾಯಾತ್ರೆ:

ಫೆ. 18ರಂದು ಮಧ್ಯಾಹ್ನ 3 ರಿಂದ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿಂದ ದೈವಸ್ಥಾನಕ್ಕೆ ಬಂಡಿ ಕೊಡಿಮರ ಮತ್ತು ದೈವಗಳ ಆಭರಣಗಳ ಶೋಭಾಯಾತ್ರೆ ನಡೆಯಲಿದೆ. ಸಂಜೆ 5 ರಿಂದ ಪೆದಮಲೆ ಗುತ್ತು ಭಂಡಾರ ಚಾವಡಿಯಲ್ಲಿ ದೇವತಾ ಪ್ರಾರ್ಥನೆ, ಶಿಲ್ಪಿ ಸನ್ಮಾನ, ಆಲಯ ಪ್ರತಿಗ್ರಹ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ ಮತ್ತು ನೂತನ ಮೊಗಮೂರ್ತಿ, ಉಯ್ಯಾಲೆಗಳ ಶುದ್ಧಿ ಪ್ರಕ್ರಿಯೆ ಹಾಗೂ ಬಿಂಬಾಧಿವಾಸ ನಡೆಯಲಿದೆ. ಸಂಜೆ 5.30ಕ್ಕೆ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.