ಗೊಲ್ಲರಹಳ್ಳಿ ಡೇರಿಗೆ 17.76 ಲಕ್ಷ ರು. ನಿವ್ವಳ ಲಾಭ: ಜಿ.ಎಂ.ರಾಮಕೃಷ

| Published : Sep 20 2024, 01:31 AM IST

ಗೊಲ್ಲರಹಳ್ಳಿ ಡೇರಿಗೆ 17.76 ಲಕ್ಷ ರು. ನಿವ್ವಳ ಲಾಭ: ಜಿ.ಎಂ.ರಾಮಕೃಷ
Share this Article
  • FB
  • TW
  • Linkdin
  • Email

ಸಾರಾಂಶ

ರಾಸುಗಳಿಗೆ ಹಸಿ, ಒಣಹುಲ್ಲು, ಸ್ಪೀಡ್ ನೀಡುವುದರಿಂದ ಉತ್ತಮ ಹಾಗೂ ಗುಣಮಟ್ಟದ ಹಾಲು ಬರುತ್ತದೆ. ಕಳೆದ ಸಾಲಿನಲ್ಲಿ ಹೆಚ್ಚು ಲಾಭ ಬಂದಿದೆ. ಮುಂದೆಯೂ ಸಹ ಉತ್ತಮ ಲಾಭ ಬರಲು ನಿಮ್ಮಗಳ ಸಹಕಾರ ಅಗತ್ಯವಿದೆ. ಸಂಘದಿಂದ ರಿಯಾಯ್ತಿ ದರದಲ್ಲಿ ದೊರಕುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ.

ಕನ್ನಡಪ್ರಭ ವಾರ್ತೆ ಹಲಗೂರು

ಗೊಲ್ಲರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2023-24ನೇ ಸಾಲಿನಲ್ಲಿ 17,76,283 ರು. ನಿವ್ವಳ ಲಾಭ ಬಂದಿದೆ ಎಂದು ಆಡಳಿತಾಧಿಕಾರಿ ಜಿ.ಎಂ.ರಾಮಕೃಷ್ಣ ತಿಳಿಸಿದರು.

ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಡೇರಿಗೆ ಗುಣಮಟ್ಟದ ಹಾಲು ಹಾಕುವುದರಿಂದ ಡೇರಿ ಅಭಿವೃದ್ಧಿ ಜೊತೆಗೆ ಉತ್ತಮ ಲಾಭ ಬಂದು ನಿಮ್ಮ ನೆರವಿಗೆ ಸಹಕಾರಿಯಾಗಲಿದೆ. ಕಳಪೆ ಹಾಲು ಪೂರೈಸಿದರೆ ಸಂಘ ನಷ್ಟಕ್ಕೆ ತುತ್ತಾಗುತ್ತದೆ ಎಂದರು.

ರಾಸುಗಳಿಗೆ ಹಸಿ, ಒಣಹುಲ್ಲು, ಸ್ಪೀಡ್ ನೀಡುವುದರಿಂದ ಉತ್ತಮ ಹಾಗೂ ಗುಣಮಟ್ಟದ ಹಾಲು ಬರುತ್ತದೆ. ಕಳೆದ ಸಾಲಿನಲ್ಲಿ ಹೆಚ್ಚು ಲಾಭ ಬಂದಿದೆ. ಮುಂದೆಯೂ ಸಹ ಉತ್ತಮ ಲಾಭ ಬರಲು ನಿಮ್ಮಗಳ ಸಹಕಾರ ಅಗತ್ಯವಿದೆ. ಸಂಘದಿಂದ ರಿಯಾಯ್ತಿ ದರದಲ್ಲಿ ದೊರಕುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಸಂಘದ ಕಾರ್ಯದರ್ಶಿ ಶಿವಲಿಂಗೇಗೌಡ ವಾರ್ಷಿಕ ವರದಿ ಮಂಡಿಸಿದರು. ಇದೇ ವೇಳೆ ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ ಐದು ಜನರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಡರಹಳ್ಳಿ ಗ್ರಾಪಂ ಉಪಾಧ್ಯಕ್ಷ ದಾಸಬಾಯಿ, ಮಾಜಿ ಅಧ್ಯಕ್ಷ ಕೆ. ಮಹದೇವ, ಹಿರಿಯ ಮುಖಂಡ ಪುಟ್ಟಸ್ವಾಮಿ, ಹಾಲು ಪರೀಕ್ಷಕ ಉಮೇಶ, ಸಹಾಯಕ ಕಿರಣ್ ಸೇರಿದಂತೆ ಇತರರು ಇದ್ದರು.ಹಿಂದುಳಿದ ವರ್ಗದ ೧೯೭ ಜಾತಿ ಸಾಧಕರಿಗೆ ಪ್ರಶಸ್ತಿ

ಮಂಡ್ಯ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತ್ಯುತ್ಸವದ ಪ್ರಯುಕ್ತ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ೧೯೭ ಜಾತಿಗಳ ಸಾಧಕರನ್ನು ಗುರುತಿಸಿ ಹಿಂದುಳಿದ ವರ್ಗಗಳ ರತ್ನ ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ್ ಹೇಳಿದರು. ಸೆ.೨೦ರಂದು ಬೆಳಗ್ಗೆ ೧೧.೩೦ಕ್ಕೆ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯ ಗಾಂಧಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ದಿವ್ಯಸಾನ್ನಿಧ್ಯವನ್ನು ಶಿವಗಂಗೆ ಶ್ರೀ ಮಹಾಲಕ್ಷ್ಮೀ ಮಹಾಸಂಸ್ಥಾನ ಮಠದ ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ ವಹಿಸುವರು. ಉದ್ಘಾಟನೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್‌ಸಿಂಗ್ ನೆರವೇರಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂಸದ ನಾರಾಯಣಸಾ ಭಾಂಡಗೆ, ವಿಪ ಸದಸ್ಯ ಡಾ.ಯತೀಂದ್ರ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅದ್ಯಕ್ಷ ಕೀರ್ತಿ ಗಣೇಶ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಸೇರಿ ಇತರರು ಭಾಗವಹಿಸುವರು ಎಂದರು. ಗೋಷ್ಠಿಯಲ್ಲಿ ಕೃಷ್ಣಕುಮಾರ್, ಸೋಮೇಶ್, ಕಾಂತರಾಜ್, ನಾಗರಾಜ್ ಇದ್ದರು.