ಸಾರಾಂಶ
- ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ನಡೆದ ಮತದಾನ - - - ಕನ್ನಡಪ್ರಭ ವಾರ್ತೆ ಹರಿಹರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹರಿಹರ ತಾಲೂಕು ಶಾಖೆಗೆ ನಡೆದ 2024- 2029ನೇ ಅವಧಿಯ ಚುನಾವಣೆಯಲ್ಲಿ 17 ನಿರ್ದೇಶಕರು ಅವಿರೋಧ ಆಯ್ಕೆಯಾದರೆ, ಉಳಿದ 17 ನಿರ್ದೇಶಕರು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆಯಾದವರು:ಕೃಷಿ ಇಲಾಖೆಯ ಪ್ರಕಾಶ್ ಎಸ್., ಪಶುಪಾಲನಾ ಇಲಾಖೆಯ ಕೆ.ಆರ್ ನಿಂಗಪ್ಪ, ಹಾಗೂ ಡಿ.ಬಿ. ಮಂಜಪ್ಪ, ತಾಲೂಕು ಕಚೇರಿ ಕ್ಷೇತ್ರದಿಂದ ಆರೀಫ್ ಎ. ತಾಳಿಕೋಟಿ, ಲೋಕೋಪಯೋಗಿ ಇಲಾಖೆಯಿಂದ ದಾದಾಪೀರ್ ಯು.ಬಿ. ಹಾಗೂ ಮಂಜುನಾಥ ಟಿ.ಬಿ, ಪಂಚಾಯತ್‌ರಾಜ್ ಇಲಾಖೆಯಿಂದ ಮಂಜುನಾಥ್ ಎಸ್., ಅರಣ್ಯ ಇಲಾಖೆಯಿಂದ ಅಮೃತಾ ಟಿ.ಆರ್., ತೋಟಗಾರಿಕೆ ರೇಷ್ಮೆ ಇಲಾಖೆಯಿಂದ ಪ್ರಕಾಶ್, ಖಜಾನೆ ಸಹಕಾರ ಇಲಾಖೆಯಿಂದ ಮಂಜುನಾಥ ಎಂ.ಬಿ., ಭೂಮಾಪನ ಮುದ್ರಾಂಕ ಇಲಾಖೆಯಿಂದ, ಇಬ್ರಾಹಿಂ ತಳಗೇರಿ, ಗ್ರಾಮೀಣಾಭಿವೃದ್ಧಿ ತಾಲೂಕು ಪಂಚಾಯಿತಿಯಿಂದ ಎಚ್.ಎಲ್. ಮಂಜುನಾಥ್, ಜಯಕುಮಾರ ಡಿ.ಆರ್., ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ಶೈಲಾ ಮೈದೂರು, ಆಹಾರ ನಾಗರಿಕ ಎಪಿಎಂಸಿ ಜಿ.ಎಂ. ಮರುಳಸಿದ್ದಯ್ಯ, ಅಬಕಾರಿ ವಾಣಿಜ್ಯ ಇಲಾಖೆಗಳಿಂದ ದಾದಾಪೀರ್ ಬಿ., ಶಿವರಾಜ್ ಕೆ. ಅವಿರೋಧ ಆಯ್ಕೆಯಾಗಿದ್ದಾರೆ.
ಚುನಾವಣೆ ಮೂಲಕ ಆಯ್ಕೆಯಾದವರು:ಕಂದಾಯ ಇಲಾಖೆ ಸಿಬ್ಬಂದಿ ಕ್ಷೇತ್ರದಿಂದ ವಿಜಯ ಮಹಾಂತೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಆಸ್ಪತ್ರೆ ಕ್ಷೇತ್ರದಿಂದ ಮಹಮ್ಮದ್ ರಫೀ ಟಿ.ವೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಕ್ಷೇತ್ರದಿಂದ ಉಮ್ಮಣ್ಣ ಎಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಳಿದ ಸಿಬ್ಬಂದಿ ಕ್ಷೇತ್ರದಿಂದ ಕಿರಣಕುಮಾರ್ ಬಿ. ಹಾಗೂ ಆದರ್ಶ ಬಿ., ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿ ಶಿವಮೂರ್ತಿ ಪಿ., ಹಿಂದುಳಿದ ವರ್ಗ ಸಮಾಜ ಕಲ್ಯಾಣ ಅಲ್ಪಸಂಖ್ಯಾತರ ಇಲಾಖೆ ಜಿ.ಕೆ. ಕುಮಾರ ಹಾಗೂ ಸಂಪತ್ ಕುಮಾರ, ಸರ್ಕಾರಿ ಪದವಿಪೂರ್ವ ಪದವಿ.ಪಾಲಿಟೆಕ್ನಿಕ್ ಐಟಿಟಿ ಇಲಾಖೆ ದ್ರೋಣ ನಾಯ್ಕ ಆರ್. ಹಾಗೂ ಫಯಾಜ್ ಅಹಮದ್, ಸರ್ಕಾರಿ ಪ್ರೌಢಶಾಲೆಗಳ ಕ್ಷೇತ್ರ ರಾಜಶೇಖರ ಪಿ.ಜಿ. ಹಾಗೂ ಪಿ.ನಾಗರಾಜ, ನ್ಯಾಯಾಂಗ ಇಲಾಖೆ ಮಂಜುನಾಥ ಎಸ್, ಸರ್ಕಾರಿ ಪ್ರಾಥಮಿಕ ಶಾಲೆಗಳ ಕ್ಷೇತ್ರದಿಂದ ಪೀರ್ಯ ನಾಯ್ಕ ಸಿ., ಅಶ್ಪಾಕ್ ಅಹ್ಮದ್, ಗಿರೀಶ್ ಎಂ. ಹಾಗೂ ಜ್ಯೋತಿಲಕ್ಷ್ಮೀ ಕೆ. ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ರೇವಣ ನಾಯ್ಕ ಬಿ.ಬಿ. ಫಲಿತಾಂಶ ಘೋಷಿಸಿದ್ದಾರೆ.
- - - -(ಸಾಂದರ್ಭಿಕ ಚಿತ್ರ)