ಬ್ರಹ್ಮಶ್ರೀ ನಾರಾಯಣ ಗುರು ಅವರ 170ನೇ ಜಯಂತಿ

| Published : Aug 21 2024, 12:33 AM IST

ಸಾರಾಂಶ

ಬಸವಣ್ಣನಂತೆ ಬ್ರಹ್ಮಶ್ರೀ ನಾರಾಯಣಗುರು ಅವರು ಸಮಾಜದ ಹೇಳಿಗೆಗೆ ದುಡಿದವರು. ಏಕರೂಪ ಸಮಾನತೆಯನ್ನು ಕಂಡವರು. ಹಿಂದುಳಿದ ವರ್ಗದವರ ಮುನ್ನೆಡಸಲು ಶ್ರಮಿಸಿದ್ದರು. ಸಮಾಜದ ಉಬ್ಬು ತಗ್ಗುಗಳನ್ನು ತಿದ್ದುವಲ್ಲಿ ಮುಂದಾಗಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಶ್ರೀರಂಗನಾಥ ಕಲ್ಯಾಣ ಮಂಟಪದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅವರ 170ನೇ ಜಯಂತ್ಯುತ್ಸವ ನಡೆಯಿತು.

ತಾಲೂಕು ಆಡಳಿತ ಹಾಗೂ ತಾಲೂಕು ಆರ್ಯ ಈಡಿಗ ಸಮಾಜದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಮಾತನಾಡಿ, ಬಸವಣ್ಣನಂತೆ ಬ್ರಹ್ಮಶ್ರೀ ನಾರಾಯಣಗುರು ಅವರು ಸಮಾಜದ ಹೇಳಿಗೆಗೆ ದುಡಿದವರು. ಏಕರೂಪ ಸಮಾನತೆಯನ್ನು ಕಂಡವರು. ಹಿಂದುಳಿದ ವರ್ಗದವರ ಮುನ್ನೆಡಸಲು ಶ್ರಮಿಸಿದ್ದರು ಎಂದರು.

ಸಮಾಜದ ಉಬ್ಬು ತಗ್ಗುಗಳನ್ನು ತಿದ್ದುವಲ್ಲಿ ಮುಂದಾಗಿದ್ದರು. ಇವತ್ತಿನ ದಿನಗಳಲ್ಲಿ ಅವರ ಆದರ್ಶ ತತ್ವ ಸಿದ್ದಾಂತಗಳನ್ನು ನಾವುಗಳು ಅರಿತು ಕಷ್ಟದಲ್ಲಿ ಅಳುವರಿಗೆ ಕಣ್ಣೀರು ಒರೆಸಿ, ಸುಜ್ಞಾನದತ್ತಾ ಮುನ್ನೆಡೆಸುವ ಕಾರ್ಯಗಳ ನಡೆಸಬೇಕಿದೆ ಎಂದರು.

ಮೈಸೂರು ಈಡಿಗ ಸಮಾಜದ ಯುವ ವೇದಿಕೆ ಮುಖಂಡ ಡಾ.ರಾಜು ಮಾತನಾಡಿದರು. ಕಾಲೇಜು ಉಪನ್ಯಾಸಕಿ ಮಮತಾ ಬ್ರಹ್ಮಶ್ರೀ ನಾರಾಯಣಗುರು ಅವರ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.

ಈ ವೇಳೆ ಆರ್‌ಐ ರೇವಣ್ಣ, ತಾಲೂಕು ಈಡಿಗ ಸಮಾಜದ ಅಧ್ಯಕ್ಷ ಶ್ರೀನಿವಾಸ್, ನಗರ ಘಟಕದ ಅಧ್ಯಕ್ಷ ಕೆ.ವಿ.ಉಮೇಶ್, ಉಪಾಧ್ಯಕ್ಷ ರವಿಕುಮಾರ್ ಬಿ, ಶ್ರೀನಿವಾಸು, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಗೌರವಾಧ್ಯಕ್ಷ ಬೆಳಗೊಳ ಎಲ್‌ಐಸಿ ರಾಜು, ಸಂಘಟನಾ ಕಾರ್ಯದರ್ಶಿ ರವಿ ಬೆಳಗೊಳ, ಖಜಾಂಚಿ ರಾಜು, ಶ್ರೀರಂಗಪಟ್ಟಣ ನಗರ ಗೌರವಾಧ್ಯಕ್ಷ ರೇವಣ್ಣ ಸೇರಿದಂತೆ ಇತರರು ಇತರರಿದ್ದರು.