ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಭೂಮಿ ಟ್ರಸ್ಟ್ ಸಹಕಾರದೊಂದಿಗೆ 170 ವಾರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಕ್ಲೀನ್ ಕಿನಾರ ತಂಡಕ್ಕೆ ಸ್ವಚ್ಛತಾ ಪರಿಕರಗಳನ್ನು ಶಾಸಕ ಗುರುರಾಜ್ ಗಂಟಿಹೊಳೆ ಹಸ್ತಾಂತರಿಸಿದರು.

ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಭೂಮಿ ಟ್ರಸ್ಟ್ ಸಹಕಾರದೊಂದಿಗೆ 170 ವಾರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಕ್ಲೀನ್ ಕಿನಾರ ತಂಡಕ್ಕೆ ಸ್ವಚ್ಛತಾ ಪರಿಕರಗಳನ್ನು ಶಾಸಕ ಗುರುರಾಜ್ ಗಂಟಿಹೊಳೆ ಹಸ್ತಾಂತರಿಸಿದರು. ಗಿಡ ನೆಡುವ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಅಗತ್ಯವಿರುವ ಉಪಕರಣಗಳನ್ನು ಹಸ್ತಾಂತರಿಸಿದ ಶಾಸಕರು ಸತತ 170 ವಾರಗಳ ಕಾಲ ಸಮುದ್ರ ಕಿನಾರೆ ಮತ್ತು ಊರಿನ ಸ್ವಚ್ಛತೆ ಮಾಡಿಕೊಂಡು ಬರುತ್ತಿರುವುದು ನಿಜವಾಗಲೂ ಒಂದು ತಪಸ್ಸು, ದೃಢ ಇಚ್ಚಾ ಶಕ್ತಿ ಇದ್ದರೆ ಮಾತ್ರ ಇದು ಸಾಧ್ಯ ಎಂದು ಶ್ಲಾಘಿಸಿದರು.ಕಾರ್ಯಕ್ರಮದ ನಂತರ ಕ್ಲೀನ್ ಕಿನಾರ ತಂಡ ಹಿಂದೂ ರುದ್ರ ಭೂಮಿ ಆವರಣದ ಸುತ್ತ ಗಿಡ ನೆಟ್ಟು ಸ್ವಚ್ಛತಾ ಕಾರ್ಯ ನೆರವೇರಿಸಿದರು. ಈ ಪರಿಕರಗಳನ್ನು ಕೊಡಿಸುವಲ್ಲಿ ಸಹಕರಿಸಿದ ಚರಣ್ ಬೈಂದೂರು, ಮಾಜಿ ಜಿಪಂ ಸದಸ್ಯ ಸುರೇಶ್ ಬಟ್ವಾಡಿ, ಪ್ರಮುಖರಾದ ಗೋಪಾಲ್ ಪೂಜಾರಿ ವಸ್ರೆ, ರಾಘು ಶೇರಿಗಾರ್ ಮತ್ತು ರಾಜೇಶ್ ಆಚಾರ್ , ಶ್ರೀಧರ್ ಜಿ. ಪಡುವರಿ, ಭೂಮಿ ಟ್ರಸ್ಟ್ ಪದಾಧಿಕಾರಿಗಳು, ಮುಕ್ತಿ ಧಾಮ ಟ್ರಸ್ಟ್‌ ಸದಸ್ಯರು, ಎನ್‌ಇಸಿಎಫ್‌ ಹಾಗೂ ಕ್ಲೀನ್ ಕಿನಾರಾ ಸದಸ್ಯರು ಉಪಸ್ಥಿತರಿದ್ದರು.

ಕ್ಲೀನ್ ಕಿನಾರಾ ಕಾರ್ಯದರ್ಶಿ ನಿತೇಶ್ ನಿರೂಪಿಸಿದರು. ರಾಘವೇಂದ್ರ ಸುರಭಿ ಕಾರ್ಯಕ್ರಮ ಸಂಯೋಜಿಸಿದರು. ದಿನೇಶ್ ಗಾಣಿಗ ವಂದಿಸಿದರು.