ಬೃಹತ್ ರಕ್ತದಾನ ಶಿಬಿರದಲ್ಲಿ 175 ಯೂನಿಟ್ ರಕ್ತ ಸಂಗ್ರಹ

| Published : Aug 18 2025, 12:00 AM IST

ಸಾರಾಂಶ

ಮಂಡ್ಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡವರು ಹಾಗೂ ಗ್ರಾಮೀಣ ಜನರ ರಕ್ತದ ಅವಶ್ಯಕತೆಗಾಗಿ ಇಂತಹ ರಕ್ತದಾನ ಶಿಬಿರ ಆಯೋಜನೆ ಮೆಚ್ಚುಗೆಯ ಸಂಗತಿ. ಆರೋಗ್ಯವಂತರು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಿ ಸಂಕಷ್ಟದಲ್ಲಿರುವ ಜೀವಗಳನ್ನು ಉಳಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಟೀಮ್ ನಾಲ್ವಡಿ, ರಕ್ತದಾನಿಗಳ ಒಕ್ಕೂಟ, ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ 175 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಜೈ ಕಿಸಾನ್ ಘೋಷ ವಾಕ್ಯದೊಂದಿಗೆ ರೈತ ಈ ದೇಶದ ನಿರ್ಮಾಣದಲ್ಲಿ ಅತೀ ದೊಡ್ಡ ಶ್ರಮಿಕ, ಪಾಲುದಾರನೆಂಬ ವಾಸ್ತವ ಸತ್ಯವನ್ನು ಜಗತ್ತಿಗೆ ತಿಳಿಸಿಕೊಡುವ ಉದ್ದೇಶದೊಂದಿಗೆ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ನಡೆದ ರಕ್ತದಾನ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿ, ಹಲವು ಯುವಕರು, ಸಂಘಟನೆಗಳ ಮುಖಂಡರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.

ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ಕೆ.ಎಂ.ಉದಯ್ ಮಾತನಾಡಿ, ಭೂಮಿಪುತ್ರ ರೈತನಿಗೆ ಗೌರವ ಸಲ್ಲಬೇಕು ಎಂಬ ಏಕೈಕ ಕಾರಣಕ್ಕೆ ರೈತನ ಗೌರವಾರ್ಥವಾಗಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ರೈತ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಮೆಚ್ಚುಗೆಯ ವಿಷಯ ಎಂದರು.

ಮಂಡ್ಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡವರು ಹಾಗೂ ಗ್ರಾಮೀಣ ಜನರ ರಕ್ತದ ಅವಶ್ಯಕತೆಗಾಗಿ ಇಂತಹ ರಕ್ತದಾನ ಶಿಬಿರ ಆಯೋಜನೆ ಮೆಚ್ಚುಗೆಯ ಸಂಗತಿ. ಆರೋಗ್ಯವಂತರು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಿ ಸಂಕಷ್ಟದಲ್ಲಿರುವ ಜೀವಗಳನ್ನು ಉಳಿಸಬೇಕೆಂದು ಮನವಿ ಮಾಡಿದರು.

ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷೆ ವೀರಾಶಿವಲಿಂಗಯ್ಯ ಮಾತನಾಡಿ, ಪ್ರಪಂಚದಲ್ಲಿ ರಕ್ತಕ್ಕೆ ಪರ್ಯಾಯವಾದ ವಸ್ತು ಬೇರೆ ಯಾವುದು ಇಲ್ಲ. ಅಫಘಾತ, ತುರ್ತು ಸಂದರ್ಭ, ಶಸ್ತ್ರಚಿಕಿತ್ಸೆ ಸೇರಿದಂತೆ ಇನ್ನಿತರ ವೇಳೆ ರಕ್ತದ ಅವಶ್ಯಕತೆ ಹೆಚ್ಚಾಗಿರುವುದರಿಂದ ರಕ್ತದಾನದಂತಹ ಶಿಬಿರಗಳಿಂದ ರಕ್ತ ಸಂಗ್ರಹ ಸಾಧ್ಯ. ಸಂಘಟನೆಗಳು ಶಿಬಿರವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಎಂ.ಎಂ.ಆರ್ಕೆಸ್ಟ್ರಾ ತಂಡದ ಮುಖ್ಯಸ್ಥ ಚಂದ್ರಶೇಖರ್ ದೇಶಭಕ್ತಿ ಕುರಿತು ಹಾಡುಗಳು ಕೇಳುಗರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಪಾಂಶುಪಾಲ ನಾರಾಯಣ್, ವಕೀಲರಾದ ಪೂರ್ಣಿಮ. ಶ್ರೀಕಾಂತ್. ಪರಮೇಶ್ವರಯ್ಯ ಶಂಕರ್, ಆದರ್ಶ, ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್, ಸುಮುಖ ನಿಧಿ ಲಿಮಿಟೆಡ್ ಅಧ್ಯಕ್ಷ ಕೆ.ಆರ್.ಕುಮಾರ್ ಕುಂದನಕುಪ್ಪೆ, ಇನ್ನಿರ್ ವ್ಹೀಲ್ ಅಧ್ಯಕ್ಷೆ ಎಂ.ಸಿ.ಶ್ವೇತಾಶಶಿಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಮಾನಸ ವಿದ್ಯಾಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್, ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಶಿವಪ್ಪ, ದಸಂಸ ರಾಜ್ಯ ಸಂಚಾಲಕ ಅಂದಾನಿ, ಮುಖಂಡರಾದ ಕೆ.ಎಂ.ರವಿ, ತೈಲೂರು ಸಿದ್ದರಾಜು, ತೈಲೂರು ಆನಂದಾಚಾರಿ, ರಕ್ತದಾನ ಶಿಬಿರ ಆಯೋಜಕರಾದ ನವೀನ, ಗಣೇಶ್, ಶಿವಪ್ರಸಾದ್, ಟಿ.ವೆಂಕಟೇಶ್, ರಾಜೇಶ್, ತಿಲಕ್, ಮಹೇಶ್, ನರಸಿಂಹಮೂರ್ತಿ, ಸುದರ್ಶನ್. ದಯಾನಂದ್ ಪತ್ರಕರ್ತರಾದ ಎಂ.ಆರ್.ಚಕ್ರಪಾಣಿ, ಎಂ.ಪಿ.ವೆಂಕಟೇಶ್, ಎಸ್.ಪುಟ್ಟಸ್ವಾಮಿ, ಸಿ.ಹರೀಶ್, ಕೃಷ್ಣ, ವಿ.ಎಸ್.ಪ್ರಭು, ಚಾಮನಹಳ್ಳಿ ಮಂಜು ಹಲವರು ಇದ್ದರು.