ಕನ್ನಡಪ್ರಭ ವಾರ್ತೆ ಹಾರೂಗೇರಿ: ಪಟ್ಟಣದ ಎಮ್.ಬಿ.ಪಾಟೀಲ್ ವಿಜ್ಞಾನ ಪಿ.ಯು ಕಾಲೇಜಿನಲ್ಲಿ 17ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯನ್ನು ರಾಯಬಾಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈರನಗೌಡ ಪಾಟೀಲ ನೇತೃತ್ವದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಹಾರೂಗೇರಿ: ಪಟ್ಟಣದ ಎಮ್.ಬಿ.ಪಾಟೀಲ್ ವಿಜ್ಞಾನ ಪಿ.ಯು ಕಾಲೇಜಿನಲ್ಲಿ 17ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯನ್ನು ರಾಯಬಾಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈರನಗೌಡ ಪಾಟೀಲ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮ ಯಶಸ್ವಿಗೊಳಿಸಲು ವೇದಿಕೆ ನಿರ್ಮಾಣ, ಅಧ್ಯಕ್ಷರ ಮೆರವಣಿಗೆ, ಪುಸ್ತಕ ಮಳಿಗೆಗಳು, ಗೋಷ್ಠಿಗಳ, ಸಾಧಕರ ಸತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿಥಿಗಳ ಸ್ವಾಗತ ಸಂವಾದಗಳ ಮತ್ತು ಇತರೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು. ನಂತರ ಬೇರೆ ಬೇರೆ ಸಮಿತಿಗಳ ಅಧ್ಯಕ್ಷರು, ಸದಸ್ಯರನ್ನು ನೇಮಿಸಲಾಯಿತು. ಜನವರಿ 10 ಮತ್ತು 11 ರಂದು ಹಾರೂಗೇರಿಯ ಜೈನ ಸಮುದಾಯ ಭವನದಲ್ಲಿ ಅದ್ಧೂರಿಯಾಗಿ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಈರಣ್ಣಗೌಡ ಪಾಟೀಲ, ಹಾರೂಗೇರಿ ಪಟ್ಟಣದಲ್ಲಿ ಜರುಗಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿಗಳು ಡಾ.ವಿ.ಎಸ್.ಮಾಳಿ ಅವರ ನೇತೃತ್ವ ಒಂದು ಐತಿಹಾಸಿಕವಾಗಿ ಉಳಿಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತಿಗಳು, ಕವಿಗಳು,ಸಾಹಿತ್ಯ ಆಸಕ್ತರು ಭಾಗವಸಿ ಯಶಸ್ವಿಗೊಳಿಸಬೇಕು. ಹಾರೊಗೇರಿಯ ಜನರು ಕಾರ್ಯಕ್ರಮ ಯಶಸ್ವಿಗೆ ತಮ್ಮ ಉದಾರ ಮನಸ್ಸಿನಿಂದ ದೇಣಿಗೆ ನೀಡಬೇಕೆಂದು ಮನವಿ ಮಾಡಿದರು.ಈ ವೇಳೆ ಬೆಳಗಾವಿ ಬೀಮ್ಸ್‌ ನಿರ್ದೇಶಕ ಸಿದ್ದು ಹುಲ್ಲೋಳಿ ಸಲಹೆಗಳನ್ನು ನೀಡಿದರು.

ಈ ವೇಳೆ ವಾಲ್ಮೀಕಿ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಗಸ್ತಿ, ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ, ಪುರಸಭೆಯ ಅಧ್ಯಕ್ಷ ವಸಂತ ಲಾಳಿ, ಬಿ.ಎಲ್.ಘಂಟೆ, ಎಸ್.ಡಿ.ರಾಯಮಾನೆ, ಸುಖದೇವ ಕಾಂಬ್ಳೆ, ರವಿ ಕೊಕಟನೂರ, ಬಿ.ವಿ.ಬಿರಾದಾರ, ಹನಮಂತ ಯಲಶೇಟ್ಟಿ, ಹನಮಂತ ಕುರಿ, ಸಣ್ಣಪ್ಪ ಸಣ್ಣಕ್ಕಿನವರ್, ಮಹೇಶ ಐಹೊಳೆ, ಸಾಹಿತಿಗಳಾದ ರತ್ನಾ ಬಾಳಪ್ಪನವರ, ಬಸವರಾಜ್ ಹುಣಸಿಕಟ್ಟಿ, ಮಹದೇವ ಕಾಂಬಳೆ, ಹನುಮಂತ ಸಣ್ಣಕಿನವರ, ಲಕ್ಷ್ಮಣ ಜಾಯಾಗೋಣೆ, ಎಮ್.ಎಸ್.ಬಳವಾಡ, ಶಿವಾನಂದ ಮಠಪತಿ, ವಿವೇಕ ಗುರವ ಹಲವರು ಇದ್ದರು. ಶಂಕರ ಕ್ಯಾಸ್ತಿ ನಿರೂಪಿಸಿದರು. ಟಿ.ಎಸ್.ವಂಟಗುಡಿ ವಂದಿಸಿದರು